kn_tw/bible/other/pierce.md

2.8 KiB

ತಿವಿ, ತಿವಿಯುವುದು, ತಿವಿಯಲ್ಪಟ್ಟಿರುತ್ತದೆ, ತಿವಿಯುತ್ತಾ ಇರುವುದು

ಪದದ ಅರ್ಥವಿವರಣೆ:

“ತಿವಿ” ಎನ್ನುವ ಪದಕ್ಕೆ ತೀಕ್ಷ್ಣವಾದ, ಚೂಪಾದ ವಸ್ತುವಿನೊಂದಿಗೆ ಯಾವುದಾದರೊಂದನ್ನು ಚುಚ್ಚುವುದು ಎಂದರ್ಥ. ಯಾರಾದರೊಬ್ಬರನ್ನು ಮಾನಸಿಕವಾಗಿ ಆಳವಾದ ನೋವನ್ನುಂಟು ಮಾಡುವುದನ್ನು ಸೂಚಿಸುವುದಕ್ಕೆ ಕೂಡ ಅಲಂಕಾರಿಕವಾಗಿ ಈ ಪದವನ್ನು ಉಪಯೋಗಿಸಲಾಗುತ್ತದೆ.

  • ಯೇಸುವನ್ನು ಶಿಲುಬೆಯ ಮೇಲೆ ತೂಗುಹಾಕಲ್ಪಟ್ಟ ಸಮಯದಲ್ಲಿ ಸೈನಿಕನು ಯೇಸುವಿನ ಪಕ್ಕದಲ್ಲಿ ತಿವಿಯುತ್ತಾನೆ.
  • ಸತ್ಯವೇದ ಕಾಲಗಳಲ್ಲಿ ಬಿಡುಗಡೆ ಹೊಂದಿದ ಒಬ್ಬ ದಾಸನು ತನ್ನ ಯಜಮಾನನಿಗೆ ನಿರಂತರವಾಗಿ ಕೆಲಸ ಮಾಡುವುದರಲ್ಲಿ ಮುಂದೆವರಿಯುವುದಕ್ಕೆ ತಾನು ಆಯ್ಕೆಯಾಗಿದ್ದಾನೆಂದು ಗುರುತಾಗಿರಲು ತನ್ನ ಕಿವಿಯನ್ನು ತಿವಿದುಕೊಳ್ಳುತ್ತಿದ್ದರು.
  • ಖಡ್ಗವು ಮರಿಯಳ ಹೃದಯವನ್ನು ತಿವಿಯುತ್ತದೆಯೆಂದು ಸಿಮೆಯೋನನು ಆಕೆಗೆ ಹೇಳಿದಾಗ ಅವನು ಆಕೆಯೊಂದಿಗೆ ಅಲಂಕಾರಿಕವಾಗಿ ಮಾತನಾಡಿದ್ದನು, ಈ ಮಾತಿಗೆ ಆಕೆ ತುಂಬಾ ಆಳವಾದ ಪ್ರಲಾಪವನ್ನು ಅನುಭವಿಸುತ್ತಾಳೆಂದು ಇದರ ಅರ್ಥವಾಗಿರುತ್ತದೆ, ಯಾಕಂದರೆ ತನ್ನ ಶಿಶುವಾಗಿರುವ ಯೇಸುವಿಗೆ ಜನನ ಕೊಡುವುದರ ಕಾರಣದಿಂದ ಹೀಗೆ ನಡೆಯುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಶಿಲುಬೆ, ಯೇಸು, ದಾಸನು, ಸಿಮೆಯೋನ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H935, H1856, H2342, H2490, H2491, H2944, H3738, H4272, H5181, H5344, H5365, H6398, G1330, G1338, G1574, G2660, G3572, G4044, G4138