kn_tw/bible/other/perverse.md

5.0 KiB
Raw Permalink Blame History

ವಿಕೃತ, ವಿಪರ್ಯಾಸವಾಗಿ, ವಕ್ರಮಾರ್ಗ, ವಕ್ರಮಾರ್ಗಗಳು, ವಿಪರೀತತೆಗಳು, ವಿರೂಪಗೊಳಿಸು, ಅಪ್ರಾಮಾಣಿಕ, ಅಸ್ಪಷ್ಟತೆ

ಪದದ ಅರ್ಥವಿವರಣೆ:

“ವಿಕೃತ” ಎನ್ನುವ ಪದವನ್ನು ನೈತಿಕವಾಗಿ ವಕ್ರವಾದ ಅಥವಾ ತಿರುಚಿದ ವ್ಯಕ್ತಿ ಅಥವಾ ಕ್ರಿಯೆಯನ್ನು ವಿವರಿಸಲು ಬಳಸಲಾಗುತ್ತದೆ. “ವಿಕೃತವಾಗಿ” ಎನ್ನುವ ಪದಕ್ಕೆ “ವಿಕೃತ ರೀತಿಯಲ್ಲಿ” ಎಂದು ಅರ್ಥೈಸುತ್ತದೆ. ಯಾವುದಾದರೊಂದನ್ನು “ವಿಕೃತಗೊಳಿಸುವುದು” ಎಂದರೆ ಸರಿಯಾದದ್ದರಿಂದ ಅಥವಾ ಒಳ್ಳೇಯ ವಿಷಯದಿಂದ ಪಕ್ಕಕ್ಕೆ ತಿರುಗಿಸುವುದು ಅಥವಾ ಅದನ್ನು ವಕ್ರೀಕರಣ ಮಾಡುವುದು ಎಂದರ್ಥ.

  • ವಿಕೃತಿಯಾದ ಒಬ್ಬನು ಅಥವಾ ಯಾವುದೇ ಒಂದು ಸರಿಯಾದ ವಿಷಯದಿಂದ ಮತ್ತು ಒಳ್ಳೇಯ ಕಾರ್ಯದಿಂದ ವಿಂಗಡನೆ ಹೊಂದುವುದು ಎಂದರ್ಥ.
  • ಸತ್ಯವೇದದಲ್ಲಿ ಇಸ್ರಾಯೇಲ್ಯರು ದೇವರಿಗೆ ಅವಿಧೇಯತೆಯನ್ನು ತೋರಿಸಿದಾಗ ವಿಕೃತಗಳಾಗಿ ನಡೆದುಕೊಂಡರು. ಅವರು ಇದನ್ನು ಸುಳ್ಳು ದೇವರುಗಳನ್ನು ಆರಾಧಿಸುವುದರ ಮೂಲಕ ಮಾಡಿ ತೋರಿಸಿದ್ದಾರೆ.
  • ದೇವರ ಪ್ರಾಮಾಣಿಕತೆಗಳಿಗೆ ಅಥವಾ ವರ್ತನೆಗೆ ವಿರುದ್ಧವಾಗಿರುವ ಯಾವುದೇ ಕ್ರಿಯೆಯನ್ನು ವಿಕೃತವಾಗಿ ಪರಿಗಣಿಸಲಾಗುತ್ತದೆ.
  • “ವಿಕೃತ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನೈತಿಕವಾಗಿ ವಕ್ರಿಕರಿಸಲ್ಪಡುವುದು” ಅಥವಾ “ಅನೈತಿಕತೆ” ಅಥವಾ “ದೇವರ ನೇರವಾದ ಮಾರ್ಗದಿಂದ ಪಕ್ಕಕ್ಕೆ ಹೋಗುವುದು” ಎಂದು ಸಂದರ್ಭಾನುಗುಣವಾಗಿ ಉಪಯೋಗಿಸಿಕೊಳ್ಳಬಹುದು.

“ವಿಕೃತಿಯ ಪ್ರಸಂಗ” ಎನ್ನುವ ಮಾತನ್ನು “ದುಷ್ಟತ್ವ ವಿಧಾನದಲ್ಲಿ ಮಾತನಾಡುವುದು” ಅಥವಾ “ಮೋಸಗೊಳಿಸುವ ಮಾತು” ಅಥವಾ “ವಿಕೃತವಾದ ವಿಧಾನದಲ್ಲಿ ಮಾತನಾಡುವುದು” ಎಂದೂ ಅನುವಾದ ಮಾಡಬಹುದು. “ವಿಕೃತ ಜನರು” ಎನ್ನುವ ಮಾತನ್ನು “ಅನೈತಿಕ ಜನರು” ಅಥವಾ “ನೈತಿಕವಾಗಿ ತಪ್ಪಿಹೋದ ಜನರು” ಅಥವಾ “ದೇವರಿಗೆ ಯಾವಾಗಲೂ ಅವಿಧೇಯತೆಯನ್ನು ತೋರಿಸುವ ಜನರು” ಎಂದೂ ವಿವರಿಸಬಹುದು.

  • “ವಿಪರ್ಯಾಸವಾಗಿ ನಡೆದುಕೊಳ್ಳುವುದು” ಎನ್ನುವ ಮಾತನ್ನು “ದುಷ್ಟ ವಿಧಾನದಲ್ಲಿ ನಡೆದುಕೊಳ್ಳುವುದು” ಅಥವಾ “ದೇವರ ಆಜ್ಞೆಗಳಿಗೆ ವಿರುದ್ಧವಾಗಿ ಕಾರ್ಯಗಳನ್ನು ಮಾಡುವುದು” ಅಥವಾ “ದೇವರ ಬೋಧನೆಗಳನ್ನು ತಿರಸ್ಕರಿಸುವ ವಿಧಾನದಲ್ಲಿ ಜೀವಿಸುವುದು” ಎಂದೂ ಅನುವಾದ ಮಾಡಬಹುದು.
  • “ವಕ್ರಮಾರ್ಗ” ಎನ್ನುವ ಪದವನ್ನು “ಭ್ರಷ್ಟದಲ್ಲಿರಲು ಕಾರಣವಾಗು” ಅಥವಾ “ಯಾವುದಾದರೊಂದನ್ನು ದುಷ್ಟತ್ವದೊಳಗೆ ನಡೆಸುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಭ್ರಷ್ಟ, ಮೋಸಗೊಳಿಸು, ಅವಿಧೇಯತೆ, ದುಷ್ಟ, ತಿರುಗಿಕೋ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strongs: H1942, H2015, H3868, H4297, H5186, H5557, H5558, H5753, H5766, H5773, H5791, H6140, H6141, H8138, H8397, H8419, G1294