kn_tw/bible/other/turn.md

8.5 KiB
Raw Permalink Blame History

ತಿರುಗು, ದೂರಕ್ಕೆ ಸರಿ, ಹಿಂದಕ್ಕೆ ತಿರುಗು, ಹಿಂತಿರುಗು

ಪದದ ಅರ್ಥವಿವರಣೆ:

“ತಿರುಗು” ಎನ್ನುವ ಪದಕ್ಕೆ ಯಾವುದಾದರೊಂದು ತನ್ನ ದಿಕ್ಕನ್ನು ಮಾರ್ಪಡಿಸಿಕೊಳ್ಳುವುದಕ್ಕೆ ಕಾರಣವಾಗು ಅಥವಾ ಭೌತಿಕವಾಗಿ ದಿಶೆಯನ್ನು ಮಾರ್ಪಡಿಸಿಕೊಳ್ಳುವುದು ಎಂದರ್ಥವಾಗಿರುತ್ತದೆ.

  • “ತಿರುಗು” ಎನ್ನುವ ಪದಕ್ಕೆ ಹಿಂದೆ ನೋಡುವುದಕ್ಕೆ “ಸುತ್ತಲು ತಿರುಗು” ಅಥವಾ ಬೇರೊಂದು ದಿಕ್ಕನ್ನು ನೋಡುವುದಕ್ಕೆ ಮುಖ ಮಾಡು ಎಂದರ್ಥವಾಗಿರುತ್ತದೆ.
  • “ಹಿಂದಕ್ಕೆ ತಿರುಗು”ಅಥವಾ “ಆಚೆ ತಿರುಗು” ಎನ್ನುವ ಮಾತಿಗೆ “ಹಿಂದಕ್ಕೆ ಹೋಗು” ಅಥವಾ “ಆಚೆ ಹೋಗು” ಅಥವಾ “ಆಚೆ ಹೋಗುವುದಕ್ಕೆ ಕಾರಣವಾಗು” ಎಂದರ್ಥವಾಗಿರುತ್ತದೆ.
  • “ಅದರಿಂದ ದೂರಕ್ಕೆ ಸರಿ” ಎನ್ನುವ ಮಾತಿಗೆ ಯಾರಾದರೊಬ್ಬರನ್ನು ತಿರಸ್ಕರಿಸುವುದು ಅಥವಾ ಯಾವುದಾದರೊಂದು ಮಾಡುವದನ್ನು “ನಿಲ್ಲಿಸು” ಎಂದರ್ಥ.
  • ಯಾರಾದರೊಬ್ಬರ “ಮುಂದಕ್ಕೆ ತಿರುಗು” ಎನ್ನುವ ಮಾತಿಗೆ ಆ ವ್ಯಕ್ತಿಯನ್ನು ನೇರವಾಗಿ ನೋಡುವುದು ಎಂದರ್ಥ.
  • “ತಿರುಗು ಮತ್ತು ಬಿಡು” ಅಥವಾ “ಬಿಡುವುದಕ್ಕೆ ತನ್ನ ಹಿಂದಕ್ಕೆ ತಿರುಗು” ಎನ್ನುವ ಮಾತಿಗೆ “ಆಚೆ ಹೋಗು’ ಎಂದರ್ಥವಾಗಿರುತ್ತದೆ.
  • “ದೂರ ತಿರುಗು” ಎನ್ನುವ ಮಾತಿಗೆ “ಮತ್ತೊಮ್ಮೆ ಏನಾದರೊಂದು ಮಾಡುವುದನ್ನು ಆರಂಭಿಸು” ಎಂದರ್ಥ.
  • “ಅದರಿಂದ ತಿರುಗು” ಎಂದರೆ “ಏನಾದರೊಂದು ಮಾಡುವುದನ್ನು ನಿಲ್ಲಿಸು” ಎಂದರ್ಥ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ತಿರುಗು” ಎನ್ನುವ ಪದವನ್ನು ‘ದಿಕ್ಕನ್ನು ಮಾರ್ಪಡಿಸು” ಅಥವಾ “ಹೋಗು” ಅಥವಾ “ಚಲಿಸು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಸಂದರ್ಭಗಳಲ್ಲಿ “ತಿರುಗು” ಎನ್ನುವ ಪದವನ್ನು ಯಾವುದಾದರೊಂದು ಮಾಡುವುದಕ್ಕೆ (ಒಬ್ಬರಿಗೆ) “ಕಾರಣವಾಗು” ಎಂದೂ ಅನುವಾದ ಮಾಡಬಹುದು. “ಯಾವುದಾದರೊಂದರಿಂದ ಆಚೆಗೆ (ಒಬ್ಬರನ್ನು) ತಿರುಗಿಸು” ಎನ್ನುವ ಮಾತನ್ನು “ಆಚೆ ಹೋಗುವುದಕ್ಕೆ (ಯಾರಾದರೊಬ್ಬರಿಗೆ) ಕಾರಣವಾಗು” ಅಥವಾ “ನಿಲ್ಲಿಸಲು (ಯಾರಾದರೊಬ್ಬರಿಗೆ) ಕಾರಣವಾಗು” ಎಂದೂ ಅನುವಾದ ಮಾಡಬಹುದು.
  • “ದೇವರಿಂದ ತಿರುಗಿಕೋ” ಎನ್ನುವ ಮಾತನ್ನು “ದೇವರನ್ನು ಆರಾಧಿಸುವುದನ್ನು ನಿಲ್ಲಿಸು” ಎಂದೂ ಅನುವಾದ ಮಾಡಬಹುದು.
  • “ದೇವರ ಕಡೆಗೆ ತಿರುಗಿಕೋ” ಎನ್ನುವ ಮಾತನ್ನು “ಮತ್ತೊಮ್ಮೆ ದೇವರನ್ನು ಆರಾಧಿಸಲು ಪ್ರಾರಂಭಿಸು” ಎಂದೂ ಅನುವಾದ ಮಾಡಬಹುದು.
  • ಶತ್ರುಗಳು “ಹಿಂತಿರುಗಿದಾಗ”, ಇದಕ್ಕೆ ಅವರು “ಹಿಮ್ಮೆಟ್ಟುತ್ತಾರೆ” ಎಂದರ್ಥವಾಗಿರುತ್ತದೆ. “ಶತ್ರುವನ್ನು ಹಿಂದಿರುಗಿಸು” ಎನ್ನುವ ಮಾತಿಗೆ “ಹಿಮ್ಮೆಟ್ಟುವುದಕ್ಕೆ ಶತ್ರುವಿಗೆ ಕಾರಣವಾಗು” ಎಂದರ್ಥ.
  • ಅಲಂಕಾರಿಕವಾಗಿ ಉಪಯೋಗಿಸಿದಾಗ, ಇಸ್ರಾಯೇಲ್ಯರು ಸುಳ್ಳು ದೇವರುಗಳ ಕಡೆಗೆ “ತಿರುಗಿಕೊಂಡಾಗ”, ಅವರು ಅವುಗಳನ್ನು “ಆರಾಧಿಸುವುದನ್ನು ಆರಂಭಿಸಿದರು”. ಅವರು ವಿಗ್ರಹಗಳಿಂದ “ಹಿಂದಿರುಗಿದಾಗ”, ಅವರು ಅವುಗಳನ್ನು “ಆರಾಧಿಸುವುದನ್ನು ನಿಲ್ಲಿಸಿದರು”.
  • ದೇವರು ತಿರಸ್ಕಾರ ಮಾಡುವ ಜನರಿಂದ “ಹಿಂದಿರುಗಿದಾಗ”, ಆತನು ಅವರನ್ನು “ಸಂರಕ್ಷಿಸುವುದನ್ನು ನಿಲ್ಲಿಸಿದನು” ಅಥವಾ ಅವರಿಗೆ “ಸಹಾಯ ಮಾಡುವುದನ್ನು ನಿಲ್ಲಿಸಿದನು” ಎಂದರ್ಥ.
  • “ತಂದೆಗಳ ಹೃದಯಗಳನ್ನು ತಮ್ಮ ಮಕ್ಕಳ ಕಡೆಗೆ ತಿರುಗಿಸು” ಎನ್ನುವ ಮಾತನ್ನು “ಮತ್ತೊಮ್ಮೆ ತಂದೆಗಳು ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಾಡು” ಎಂದೂ ಅನುವಾದ ಮಾಡಬಹುದು.
  • “ನನ್ನ ಘನತೆಯನ್ನು ಅವಮಾನವಾಗುವಂತೆ ಮಾಡು” ಎನ್ನುವ ಮಾತನ್ನು “ನನ್ನ ಘನತೆಯನ್ನು ನಾಚಿಕೆಪಡುವಂತೆ ಮಾಡು” ಅಥವಾ “ನಾನು ನಾಚಿಕೆಪಡುವಷ್ಟು ನನ್ನನ್ನು ಅವಮಾನಿಸು” ಅಥವಾ “(ಏನಾದರೊಂದು ಕೆಟ್ಟ ಕಾರ್ಯವನ್ನು ಮಾಡುವುದರ ಮೂಲಕ) ನನ್ನನ್ನು ನಾಚಿಕೆಪಡಿಸು, ಇದರಿಂದ ಜನರು ನನ್ನನ್ನು ಎಂದಿಗೂ ಘನಪಡಿಸುವುದಿಲ್ಲ” ಎಂದೂ ಅನುವಾದ ಮಾಡಬಹುದು .
  • “ನಾನು ನಿಮ್ಮ ಪಟ್ಟಣಗಳನ್ನು ನಾಶವಾಗುವಂತೆ ಮಾಡುವೆನು” ಎನ್ನುವ ಮಾತನ್ನು “ನಿಮ್ಮ ಪಟ್ಟಣಗಳು ನಾಶವಾಗುವುದಕ್ಕೆ ನಾನು ಕಾರಣವಾಗುವೆನು” ಅಥವಾ “ನಿಮ್ಮ ಪಟ್ಟಣಗಳನ್ನು ನಾಶಪಡಿಸಲು ನಾನು ಶತ್ರುಗಳಿಗೆ ಸಹಾಯ ಮಾಡುವೆನು” ಎಂದೂ ಅನುವಾದ ಮಾಡಬಹುದು.
  • “ತಿರುಗಿಕೋ” ಎನ್ನುವ ಮಾತನ್ನು “ಮಾರ್ಪಡು” ಎಂದೂ ಅನುವಾದ ಮಾಡಬಹುದು. ಮೋಶೆ ಕೋಲನ್ನು ಹಾವನ್ನಾಗಿ “ಮಾರ್ಪಡಿಸಿದಾಗ”, ಅದು ಹಾವಾಗಿ “ಮಾರ್ಪಟ್ಟಿತು.” ಇದನ್ನು “ಅದರಂತೆ ಮಾರ್ಪಡಿಸಿದನು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ಕುಷ್ಠ ರೋಗ, ಆರಾಧನೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strongs: H541, H2015, H2017, H2186, H2559, H3943, H4672, H4740, H4878, H5186, H5253, H5414, H5437, H5472, H5493, H5528, H5627, H5753, H6437, H7227, H7725, H7734, H7750, H7760, H7847, H8159, H8447, G344, G387, G402, G654, G665, G868, G1294, G1578, G1612, G1624, G1994, G3179, G3313, G3329, G3344, G3346, G4762, G5157, G5290