kn_tw/bible/other/palm.md

2.4 KiB

ಖರ್ಜೂರ ವೃಕ್ಷ

ಅರ್ಥವಿವರಣೆ:

“ಖರ್ಜೂರ ವೃಕ್ಷ” ಎನ್ನುವ ಪದವು ಪಂಕ ಯಂತ್ರದ ನಮೂನೆಯಲ್ಲಿರುವಂತೆ ಮೇಲ್ಭಾಗದಿಂದ ವಿಸ್ತರಿಸಲ್ಪಟ್ಟ ಉದ್ದವಾದ, ಹೊಂದಿಕೊಳ್ಳುವ ಎಲೆಗಳ ಕೊಂಬೆಗಳ ಒಂದು ರೀತಿಯ ಎತ್ತರವಾದ ಮರವನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿರುವ ಖರ್ಜೂರ ವೃಕ್ಷ ಸಾಧಾರಣವಾಗಿ “ಖರ್ಜೂರ ಹಣ್ಣು” ಎಂದು ಕರೆಯುವ ಹಣ್ಣುಗಳನ್ನು ಹೊಂದಿರುವ ಖರ್ಜೂರದ ಮರವನ್ನು ಸೂಚಿಸುತ್ತದೆ. ಎಲೆಗಳು ಗರಿಗಳ ನಮೂನೆಯನ್ನು ಹೊಂದಿರುತ್ತವೆ.
  • ಖರ್ಜೂರದ ಮರಗಳು ವಿಶಿಷ್ಟವಾಗಿ ಬಿಸಿಯಾದ, ತೇವವುಳ್ಳ ಹವಾಮಾನವನ್ನು ಹೊಂದಿರುವ ಸ್ಥಳಗಳಲ್ಲಿ ಬೆಳೆಯುತ್ತವೆ. ಅವುಗಳ ಎಲೆಗಳು ವರ್ಷ ಪೂರ್ತಿ ತುಂಬಾ ಹಚ್ಚು ಹಸಿರಾಗಿರುತ್ತವೆ.
  • ಯೇಸು ಕತ್ತೆಯ ಮೇಲೆ ಕುಳಿತು ಯೆರೂಸಲೇಮ್ ಪಟ್ಟಣದೊಳಗೆ ಪ್ರವೇಶಿಸುತ್ತಿರುವಾಗ, ಜನರು ಆತನು ಬರುತ್ತಿರುವಾಗ ಆತನ ಮುಂದೆ ನೆಲದ ಮೇಲೆ ಖರ್ಜೂರದ ಕೊಂಬೆಗಳನ್ನು ಇಡುತ್ತಿದ್ದರು.
  • ಖರ್ಜೂರದ ಕೊಂಬೆಗಳು ಜಯದ ಆಚರಣೆಗೆ ಮತ್ತು ಸಮಾಧಾನಕ್ಕೆ ಗುರುತಾಗಿರುತ್ತವೆ.

(ಇವುಗಳನ್ನು ಸಹ ನೋಡಿರಿ : ಕತ್ತೆ, ಯೆರೂಸಲೇಮ್, ಸಮಾಧಾನ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ಡೇಟಾ:

  • Strong's: H3712, H8558, H8560, H8561, G54040