kn_tw/bible/other/loins.md

3.7 KiB

ನಡುವು (ಅಥವಾ ಸೊಂಟ)

ಪದದ ಅರ್ಥವಿವರಣೆ:

“ನಡುವು (ಅಥವಾ ಸೊಂಟ)” ಎನ್ನುವ ಪದವು ಒಬ್ಬ ವ್ಯಕ್ತಿಯ ಅಥವಾ ಒಂದು ಪ್ರಾಣಿಯ ದೇಹದ ಭಾಗವಾಗಿರುತ್ತದೆ, ಇದು ಪಕ್ಕೆಲುಬುಗಳ ಕೆಳಗೆ ಮತ್ತು ಸೊಂಟದ ಎಲುಬುಗಳ ಮಧ್ಯೆದಲ್ಲಿರುವ ಭಾಗವನ್ನು ಸೂಚಿಸುತ್ತದೆ, ಇದನ್ನು ಕೆಳ ಹೊಟ್ಟೆ ಎಂಬುದಾಗಿಯೂ ಕರೆಯುತ್ತಾರೆ.

  • “ಸೊಂಟವನ್ನು ಕಟ್ಟಿಕೊಳ್ಳಿ” ಎನ್ನುವ ಮಾತು ಕೆಲಸವನ್ನು ಹೆಚ್ಚಾಗಿ ಮಾಡುವುದಕ್ಕೆ ಸಿದ್ಧತೆಯನ್ನು ಸೂಚಿಸುತ್ತದೆ. ಯಾವ ಅಡ್ಡಿ ಇಲ್ಲದೇ ಚೆನ್ನಾಗಿ ನಡೆಯುವುದಕ್ಕೆ ಸೊಂಟದ ಸುತ್ತಲು ಒಂದು ನಡುಕಟ್ಟುನೊಳಗೆ ಒಬ್ಬನ ನಿಲುವಂಗಿಯ ಕೆಳಭಾಗವನ್ನು ಒಳಕ್ಕೆ ಹಾಕಿಕೊಳ್ಳುವ ಪದ್ಧತಿಯಿಂದ ಈ ಪದವು ಬಂದಿರುತ್ತದೆ.
  • “ನಡುವು (ಅಥವಾ ಸೊಂಟ)” ಎನ್ನುವ ಪದವನ್ನು ಸತ್ಯವೇದದಲ್ಲಿ ಅನೇಕಸಲ ಸರ್ವಾಂಗಹೋಮ ಮಾಡುವ ಪ್ರಾಣಿಯ ಹಿಂಭಾಗದ ಕೆಳ ಭಾಗವನ್ನು ಸೂಚಿಸುವುದಕ್ಕೆ ಉಪಯೋಗಿಸಿದ್ದಾರೆ.
  • ಸತ್ಯವೇದದಲ್ಲಿ “ನಡುವು (ಅಥವಾ ಸೊಂಟ)” ಎನ್ನುವ ಪದವು ಅನೇಕಸಲ ಒಬ್ಬ ಮನುಷ್ಯನ ಸಂತಾನೋತ್ಪತ್ತಿಗೊಳಿಸುವ ಅಂಗವನ್ನು ಸಂತಾನದವರ ಆಧಾರವನ್ನಾಗಿ ಸೂಚಿಸುವುದಕ್ಕೆ ಅಲಂಕಾರಿಕವಾಗಿ ಮತ್ತು ಸೌಮ್ಯೋಕ್ತಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ( ನೋಡಿರಿ: ಸೌಮ್ಯೋಕ್ತಿಕ)
  • “ನಿನ್ನ ನಡುವಿನಿಂದ ಬರುವ” ಎನ್ನುವ ಮಾತನ್ನು “ನಿನ್ನ ಸಂತತಿಯಾಗಿರಲು” ಅಥವಾ “ನಿನ್ನ ಬೀಜದಿಂದ ಹುಟ್ಟುವ” ಅಥವಾ “ನಿನ್ನಿಂದ ಬರುವುದಕ್ಕೆ ದೇವರೇ ಕಾರಣವಾಗಿರುತ್ತಾರೆ” ಎಂದೂ ಅನುವಾದ ಮಾಡಬಹುದು. ( ನೋಡಿರಿ: ಸೌಮ್ಯೋಕ್ತಿಕ)
  • ದೇಹದ ಒಂದು ಅಂಗವನ್ನು ಸೂಚಿಸಿದಾಗ, ಇದನ್ನು “ಕೆಳ ಹೊಟ್ಟೆ” ಅಥವಾ “ಚಪ್ಪೆಗಳು” ಅಥವಾ “ನಡು” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸಂತಾನದವರು, ಸುತ್ತುವರಿ, ಸಂತತಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2504, H2783, H3409, H3689, H4975, G3751