kn_tw/bible/other/gird.md

2.9 KiB

ನಡುಪಟ್ಟಿ, ಸುತ್ತು, ಸುತ್ತಲೂ ಸುತ್ತಿ, ಕಟ್ಟಿಹಾಕಿರುವ, ಪಟ್ಟಿ, ಪಟ್ಟಿಯಲ್ಲಿ ಸಿಕ್ಕಿಸಿ, ಸುತ್ತಲೂ ಪಟ್ಟಿ ಹಾಕಿ

ಅರ್ಥವಿವರಣೆ:

“ನಡುಪಟ್ಟಿ” ಎನ್ನುವ ಪದಕ್ಕೆ ಏನಾದರು ಒಂದರ ಸುತ್ತಲು ಯಾವುದಾದರು ಒಂದನ್ನು ಕಟ್ಟುವುದು ಎಂದರ್ಥ. ಅದು ಸಹಜವಾಗಿ ನಿಲುವಂಗಿ ಅಥವಾ ವಸ್ತ್ರವನ್ನು ಅದರ ಸ್ಥಾನದಲ್ಲಿ ಇರಿಸಲು ನಡುಕಟ್ಟನ್ನು ಅಥವಾ ಚೌಕಟ್ಟನ್ನು ಸೊಂಟದ ಸುತ್ತಲು ಕಟ್ಟಿಕೊಳ್ಳುವುದನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ ಸಹಜವಾಗಿ ಉಪಯೋಗಿಸಲ್ಪಟ್ಟಿರುವ “ನಡುವನ್ನು ಕಟ್ಟಿಕೋ” ಎನ್ನುವ ಮಾತು ಒಬ್ಬ ವ್ಯಕ್ತಿ ಯಾವ ಅಡಚಣೆಗಳಿಲ್ಲದೆ ನಡೆಯುವದಕ್ಕೆ ಅಥವಾ ಕೆಲಸ ಮಾಡಲು ತಮ್ಮ ವಸ್ತ್ರಗಳನ್ನು ನಡುಕಟ್ಟಿನಲ್ಲಿ ಸಿಕ್ಕಿಸಿಕೊಳ್ಳುವುದನ್ನು ಸೂಚಿಸುತ್ತದೆ.
  • “ಕೆಲಸ ಮಾಡಲು ಸಿದ್ಧನಾಗು” ಅಥವಾ ಕಷ್ಟಕರವಾದ ಕೆಲಸ ಮಾಡಲು ಸಿದ್ಧವಾಗು ಎಂಬುದನ್ನು ಸಹ ಈ ನುಡಿಗಟ್ಟು ಸೂಚಿಸುತ್ತದೆ.
  • “ನಡುವನ್ನು ಕಟ್ಟಿಕೋ” ಎನ್ನುವ ವಾಕ್ಯವನ್ನು ಅದೇ ಅರ್ಥವುಳ್ಳ ಪದಗಳನ್ನು ಉಪಯೋಗಿಸಿ ಗುರಿ ಭಾಷೆಯಲ್ಲಿ ಅನುವಾದ ಮಾಡಬಹುದು. ಅಥವಾ “ಕ್ರಿಯೆಗೆ ನಿನ್ನನ್ನು ನೀನು ತಯಾರುಮಾಡಿಕೋ” ಅಥವಾ “ನಿನ್ನನ್ನು ನೀನು ಸಿದ್ಧಪಡಿಸಿಕೋ” ಎಂದು ಅಲಂಕಾರಿಕ ರೂಪದಲ್ಲಿ ಅನುವಾದ ಮಾಡಬಹುದು.
  • “ಕಟ್ಟಿಕೋ” ಎನ್ನುವ ಪದವನ್ನು “ಸುತ್ತುವರಿದ” ಅಥವಾ “ಸುತ್ತಿದ” ಅಥವಾ “ನಡುಕಟ್ಟಿನಿಂದ” ಎಂದು ಅನುವಾದ ಮಾಡಬಹುದು.

(ಇವುಗಳನ್ನು ಸಹ ನೋಡಿರಿ : ನಡು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ಡೇಟಾ:

  • Strong's: H0640, H0247, H2290, H2296, H8151, G03280, G12410, G40240