kn_tw/bible/other/harvest.md

3.6 KiB

ಕೊಯ್ಲು, ಸುಗ್ಗಿ, ಕೊಯ್ಲು ಮಾಡಲ್ಪಟ್ಟಿದೆ, ಕೊಯ್ಲು ಮಾಡಲ್ಪಡುತ್ತಿದೆ, ಕೊಯ್ಲುಗಾರ, ಕೊಯ್ಲುಗಾರರು

ಪದದ ಅರ್ಥವಿವರಣೆ:

“ಕೊಯ್ಲು” ಎನ್ನುವ ಪದವು ಬೆಳೆಯಲ್ಪಟ್ಟಿರುವ ಸಸ್ಯಗಳಿಂದ ತರಕಾರಿಗಳನ್ನಾಗಲಿ ಅಥವಾ ಹಣ್ಣುಗಳನ್ನಾಗಲಿ ಕೊಯ್ದು ಅವುಗಳನ್ನು ಒಂಗೂಡಿಸುವುದನ್ನು ಸೂಚಿಸುತ್ತದೆ.

  • ಬೆಳೆಯುವ ಕಾಲದ ಅಂತ್ಯದಲ್ಲಿ ಕೊಯ್ಲು ಸಮಯವು ಸಹಜವಾಗಿ ಉಂಟಾಗುತ್ತದೆ.
  • ಇಸ್ರಾಯೇಲ್ಯರು “ಕೊಯ್ಲಿನ ಹಬ್ಬ” ಅಥವಾ “ಸುಗ್ಗಿಯ ಹಬ್ಬ”ಗಳನ್ನು ಆಹಾರ ಬೆಳೆಗಳನ್ನು ಕೊಯ್ಯಲು ಆಚರಿಸುತ್ತಿದ್ದರು. ಆತನಿಗೆ ಹೋಮವನ್ನಾಗಿ ಅವರು ಬೆಳೆಸುವ ಬೆಳೆಗಳಲ್ಲಿ ಪ್ರಥಮ ಫಲಗಳನ್ನು ಆರ್ಪಿಸಬೇಕೆಂದು ದೇವರು ಆಜ್ಞಾಪಿಸಿದ್ದರು.
  • ಯೇಸುವಿನಲ್ಲಿ ನಂಬುವುದಕ್ಕೆ ಬರುವ ಜನರನ್ನು ಅಥವಾ ಒಬ್ಬ ವ್ಯಕ್ತಿಯ ಆತ್ಮೀಯಕ ಬೆಳವಣಿಗೆಯನ್ನು ಸೂಚಿಸುವುದಕ್ಕೆ “ಕೊಯ್ಲು” ಎನ್ನುವ ಪದವನ್ನು ಅಲಂಕಾರಿಕ ಅರ್ಥದಲ್ಲಿ ಸೂಚಿಸುತ್ತದೆ.
  • ಆತ್ಮಿಕವಾದ ಬೆಳೆಗಳ ಕೊಯ್ಲಿನ ಆಲೋಚನೆಯು ದೈವಿಕವಾದ ನಡತೆಯ ಗುಣಗಳ ಹೊಂದಿರುವ ಫಲಗಳ ಅಲಂಕಾರಿಕ ರೂಪದೊಂದಿಗೆ ಹಿಡಿಯುವುದು.

ಅನುವಾದ ಸಲಹೆಗಳು:

  • ಸಾಧಾರಣವಾಗಿ ಬೆಳೆಗಳನ್ನು ಕೊಯ್ಯುವುದಕ್ಕೆ ಸಾಧಾರಣವಾಗಿ ಭಾಷೆಯಲ್ಲಿ ಉಪಯೋಗಿಸುವ ಪದದೊಂದಿ ಈ ಪದವನ್ನು ಅನುವಾದ ಮಾಡುವುದು ಉತ್ತಮ.
  • ಕೊಯ್ಲಿನ ಸಂದರ್ಭವನ್ನು “ಸಂಗ್ರಹಿಸುವ ಸಮಯ” ಅಥವಾ “ಬೆಳೆಗಳನ್ನು ಸಂಗ್ರಹಿಸುವ ಸಮಯ” ಅಥವಾ “ಫಲಗಳನ್ನು ಪಡೆಯುವ ಸಮಯ” ಎಂದೂ ಅನುವಾದ ಮಾಡಬಹುದು.
  • “ಕೊಯ್ಲು” ಎನ್ನುವ ಕ್ರಿಯಾಪದವನ್ನು “ಸಂಗ್ರಹಿಸುವುದು” ಅಥವಾ “ಎತ್ತಿಕೊಳ್ಳುವುದು"” ಅಥವಾ “ಒಟ್ಟು ಗೂಡಿಸುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪ್ರಥಮ ಫಲಗಳು, ಹಬ್ಬ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2758, H7105, G2326, G6013