2.7 KiB
2.7 KiB
ಹಬ್ಬ, ಹಬ್ಬಗಳು
ಪದದ ಅರ್ಥವಿವರಣೆ:
ಸಾಧಾರಣವಾಗಿ ಹಬ್ಬ ಎನ್ನುವುದು ಸಮುದಾಯದಲ್ಲಿರುವ ಜನರಿಂದ ಆಚರಿಸಲ್ಪಡುತ್ತದೆ.
- ಹಳೇ ಒಡಂಬಡಿಕೆಯಲ್ಲಿ “ಹಬ್ಬ” ಎನ್ನುವ ಪದಕ್ಕೆ “ನೇಮಿಸಲ್ಪಟ್ಟ ಸಮಯ” ಎಂದು ಅಕ್ಷರಾರ್ಥವಿದೆ.
- ಇಸ್ರಾಯೇಲ್ಯರು ಆಚರಿಸುವ ಹಬ್ಬಗಳು ವಿಶೇಷವಾಗಿ ನೇಮಿಸಲ್ಪಟ್ಟ ಸಮಯಗಳು ಅಥವಾ ಕಾಲಗಳು ಆಗಿರುತ್ತವೆ, ಇವುಗಳನ್ನು ಆಚರಿಸಬೇಕೆಂದು ದೇವರು ಅವರಿಗೆ ಆಜ್ಞಾಪಿಸಿದ್ದರು.
- ಕೆಲವೊಂದು ಆಂಗ್ಲ ಅನುವಾದಗಳಲ್ಲಿ ಹಬ್ಬ ಎನ್ನುವ ಪದವನ್ನು ಉಪಯೋಗಿಸುವುದಕ್ಕೆ ಬದಲಾಗಿ “ಔತಣ” ಎಂದು ಉಪಯೋಗಿಸಿದ್ದಾರೆ, ಯಾಕಂದರೆ ಆಚರಿಸುವ ಹಬ್ಬಗಳಲ್ಲಿ ಎಲ್ಲರು ಸೇರಿ ಊಟ ಮಾಡುವ ಕಾರ್ಯಕ್ರಮವು ಇರುತ್ತದೆ.
- ಪ್ರತೀ ವರ್ಷ ಇಸ್ರಾಯೇಲ್ಯರು ಆಚರಿಸುವ ಅನೇಕ ಮುಖ್ಯ ಹಬ್ಬಗಳಿವೆ:
- ಪಸ್ಕ
- ಹುಳಿಯಿಲ್ಲದ ರೊಟ್ಟಿಯ ಹಬ್ಬ
- ಪ್ರಥಮ ಫಲಗಳು
- ವಾರಗಳ ಹಬ್ಬ (ಪಂಚಾಶತ್ತಮ)
- ತುತೂರಿಗಳ ಹಬ್ಬ
- ಪಾಪ ಪರಿಹಾರಕ ದಿನ
- ಗುಡಾರಗಳ ಹಬ್ಬ
- ಈ ಎಲ್ಲಾ ಹಬ್ಬಗಳ ಉದ್ದೇಶವು ದೇವರಿಗೆ ವಂದನೆಗಳನ್ನು ಸಲ್ಲಿಸುವುದು ಮತ್ತು ತನ್ನ ಜನರನ್ನು ರಕ್ಷಿಸಿದ, ಸಂರಕ್ಷಿಸಿದ, ಮತ್ತು ಅವರಿಗೆ ಅನುಗ್ರಹಿಸಿದ ಅನೇಕ ಅದ್ಭುತ ಕಾರ್ಯಗಳನ್ನು ನೆನಪಿಸಿಕೊಳ್ಳುವುದು ಆಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : ಔತಣ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1974, H2166, H2282, H2287, H6213, H4150, G1456, G1858, G1859