kn_tw/bible/other/festival.md

33 lines
2.7 KiB
Markdown

# ಹಬ್ಬ, ಹಬ್ಬಗಳು
## ಪದದ ಅರ್ಥವಿವರಣೆ:
ಸಾಧಾರಣವಾಗಿ ಹಬ್ಬ ಎನ್ನುವುದು ಸಮುದಾಯದಲ್ಲಿರುವ ಜನರಿಂದ ಆಚರಿಸಲ್ಪಡುತ್ತದೆ.
* ಹಳೇ ಒಡಂಬಡಿಕೆಯಲ್ಲಿ “ಹಬ್ಬ” ಎನ್ನುವ ಪದಕ್ಕೆ “ನೇಮಿಸಲ್ಪಟ್ಟ ಸಮಯ” ಎಂದು ಅಕ್ಷರಾರ್ಥವಿದೆ.
* ಇಸ್ರಾಯೇಲ್ಯರು ಆಚರಿಸುವ ಹಬ್ಬಗಳು ವಿಶೇಷವಾಗಿ ನೇಮಿಸಲ್ಪಟ್ಟ ಸಮಯಗಳು ಅಥವಾ ಕಾಲಗಳು ಆಗಿರುತ್ತವೆ, ಇವುಗಳನ್ನು ಆಚರಿಸಬೇಕೆಂದು ದೇವರು ಅವರಿಗೆ ಆಜ್ಞಾಪಿಸಿದ್ದರು.
* ಕೆಲವೊಂದು ಆಂಗ್ಲ ಅನುವಾದಗಳಲ್ಲಿ ಹಬ್ಬ ಎನ್ನುವ ಪದವನ್ನು ಉಪಯೋಗಿಸುವುದಕ್ಕೆ ಬದಲಾಗಿ “ಔತಣ” ಎಂದು ಉಪಯೋಗಿಸಿದ್ದಾರೆ, ಯಾಕಂದರೆ ಆಚರಿಸುವ ಹಬ್ಬಗಳಲ್ಲಿ ಎಲ್ಲರು ಸೇರಿ ಊಟ ಮಾಡುವ ಕಾರ್ಯಕ್ರಮವು ಇರುತ್ತದೆ.
* ಪ್ರತೀ ವರ್ಷ ಇಸ್ರಾಯೇಲ್ಯರು ಆಚರಿಸುವ ಅನೇಕ ಮುಖ್ಯ ಹಬ್ಬಗಳಿವೆ:
* ಪಸ್ಕ
* ಹುಳಿಯಿಲ್ಲದ ರೊಟ್ಟಿಯ ಹಬ್ಬ
* ಪ್ರಥಮ ಫಲಗಳು
* ವಾರಗಳ ಹಬ್ಬ (ಪಂಚಾಶತ್ತಮ)
* ತುತೂರಿಗಳ ಹಬ್ಬ
* ಪಾಪ ಪರಿಹಾರಕ ದಿನ
* ಗುಡಾರಗಳ ಹಬ್ಬ
* ಈ ಎಲ್ಲಾ ಹಬ್ಬಗಳ ಉದ್ದೇಶವು ದೇವರಿಗೆ ವಂದನೆಗಳನ್ನು ಸಲ್ಲಿಸುವುದು ಮತ್ತು ತನ್ನ ಜನರನ್ನು ರಕ್ಷಿಸಿದ, ಸಂರಕ್ಷಿಸಿದ, ಮತ್ತು ಅವರಿಗೆ ಅನುಗ್ರಹಿಸಿದ ಅನೇಕ ಅದ್ಭುತ ಕಾರ್ಯಗಳನ್ನು ನೆನಪಿಸಿಕೊಳ್ಳುವುದು ಆಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಔತಣ](../other/feast.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.23:30-31](rc://*/tn/help/1ch/23/30)
* [2 ಪೂರ್ವ.08:12-13](rc://*/tn/help/2ch/08/12)
* [ವಿಮೋ.05:1-2](rc://*/tn/help/exo/05/01)
* [ಯೋಹಾನ.04:43-45](rc://*/tn/help/jhn/04/43)
* [ಲೂಕ.22:1-2](rc://*/tn/help/luk/22/01)
## ಪದ ಡೇಟಾ:
* Strong's: H1974, H2166, H2282, H2287, H6213, H4150, G1456, G1858, G1859