kn_tw/bible/other/harp.md

2.4 KiB

ತಂತಿವಾದ್ಯ, ತಂತಿವಾದ್ಯಕಾರ

ಪದದ ಅರ್ಥವಿವರಣೆ:

ತಂತಿವಾದ್ಯ ತಂತಿಗಳನ್ನು ಒಳಗೊಂಡಿರುವ ಉಪಕರಣವಾಗಿರುತ್ತದೆ, ಇದು ಸಹಜವಾಗಿ ಒಂದು ದೊಡ್ಡ ಚೌಕಟ್ಟಿನ ಕಟ್ಟಿಗೆಗೆ ಅನೇಕ ವಿಧವಾದ ತಂತಿಗಳನ್ನು ಒಳಗೊಂಡಿರುತ್ತದೆ.

  • ಸತ್ಯವೇದ ಕಾಲಗಳಲ್ಲಿ, ತಂತಿವಾದ್ಯವನ್ನು ಮತ್ತು ಇತರ ಸಂಗೀತ ಉಪಕರಣಗಳನ್ನು ತಯಾರು ಮಾಡುವುದಕ್ಕೆ ತುರಾಯಿ ಮರದ ಕಟ್ಟಿಗೆಯನ್ನು ಉಪಯೋಗಿಸುತ್ತಿದ್ದರು.
  • ತಂತಿವಾದ್ಯಗಳನ್ನು ಕೈಗಳಲ್ಲಿ ಇಟ್ಟುಕೊಂಡು, ನಡೆಯುತ್ತಾ ಬಾರಿಸುವರು.
  • ಸತ್ಯವೇದದಲ್ಲಿ ಅನೇಕ ಸ್ಥಳಗಳಲ್ಲಿ ತಂತಿವಾದ್ಯಗಳು ದೇವರನ್ನು ಸ್ತುತಿಸಿ, ಆರಾಧನೆ ಮಾಡುವುದಕ್ಕೆ ಉಪಯೋಗಿಸುವ ಉಪಕರಣಗಳನ್ನಾಗಿ ದಾಖಲಿಸಿರುವರು.
  • ದಾವೀದನು ತಂತಿವಾದ್ಯ ಸಂಗೀತಕ್ಕೆ ಅನುಗುಣವಾಗಿ ಅನೇಕವಾದ ಕೀರ್ತನೆಗಳನ್ನು ರಚನೆ ಮಾಡಿರುತ್ತಾನೆ.
  • ಈತನು ಅರಸನಾದ ಸೌಲನಿಗೆ ತೊಂದರೆ ಕೊಡುವ ದುರಾತ್ಮನಿಂದ ಬಿಡುಗಡೆಗೊಳಿಸಿ ಸಮಾಧಾನವನ್ನುಂಟು ಮಾಡಲು ತಂತಿವಾದ್ಯದ ಸಂಗೀತವನ್ನು ಬಾರಿಸಿರುತ್ತಾನೆ,

(ಈ ಪದಗಳನ್ನು ಸಹ ನೋಡಿರಿ: ದಾವೀದ, ತುರಾಯಿ ಮರ, ಕೀರ್ತನೆ, ಸೌಲ)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: H3658, H5035, H5059, H7030, G27880, G27890, G27900