kn_tw/bible/other/conceive.md

3.1 KiB

ಗರ್ಭತಾಳು, ಗರ್ಭತಾಳುವಳು, ಗರ್ಭತಾಳಿದಳು, ಗರ್ಭಧಾರಣೆ

ಪದದ ಅರ್ಥವಿವರಣೆ:

“ಗರ್ಭತಾಳು” ಅಥವಾ “ಗರ್ಭಧಾರಣೆ” ಎನ್ನುವ ಪದಗಳು ಸಹಜವಾಗಿ ಒಬ್ಬ ಮಗುವನ್ನು ಗರ್ಭಧರಿಸಿದ ಗರ್ಭಿಣಿಗೆ ಸೂಚಿಸುತ್ತದೆ. ಪ್ರಾಣಿಗಳು ಗರ್ಭಧರಿಸುವಿಕೆಗೆ ಕೂಡ ಈ ಪದವು ಅನ್ವಯಿಸಲ್ಪಡುತ್ತದೆ.

  • “ಒಬ್ಬ ಮಗುವಿಗೆ ಗರ್ಭತಾಳುವುದು” ಮಾತನ್ನು “ಗರ್ಭಿಣಿಯಾಗಿದ್ದಾಳೆ” ಎಂದೂ ಅಥವಾ ಈ ಪದಕ್ಕೆ ಅರ್ಥಬರುವ ಅಂಗೀಕರಿಸುವ ಪದದೊಂದಿಗೆ ಕೂಡ ಅನುವಾದ ಮಾಡಬಹುದು.
  • “ಗರ್ಭಧಾರಣೆ” ಎನ್ನುವ ಸಂಬಂಧಿತ ಪದವನ್ನೂ “ಗರ್ಭಧರಿಸಿದ ಆರಂಭ ಸಮಯ” ಅಥವಾ “ಗರ್ಭಿಣಿಯಾಗುವ ಕ್ಷಣ” ಎಂದೂ ಅನುವಾದ ಮಾಡಬಹುದು.
  • ಈ ಪದಗಳು ಯಾವುದಾದರೊಂದನ್ನು ತಯಾರು ಮಾಡುವುದನ್ನು ಅಥವಾ ಎನಾದರೊಂದನ್ನು ಆಲೋಚನೆ ಮಾಡುವುದನ್ನು ಸೂಚಿಸುತ್ತವೆ, ಉದಾಹರಣೆಗೆ, ಆಲೋಚನೆ, ಪ್ರಣಾಳಿಕೆ, ಅಥವಾ ಕೆಲಸ. ಈ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ ಸಂದರ್ಭಾನುಸಾರವಾಗಿ “ಯಾವುದಾದರೊಂದರ ಕುರಿತಾಗಿ ಆಲೋಚನೆ ಮಾಡು” ಅಥವಾ “ಪ್ರಣಾಳಿಕೆ ಮಾಡು” ಅಥವಾ “ತಯಾರು ಮಾಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಪಾಪ ಗರ್ಭಧಾರಣೆಯಾದಾಗ” ಎಂದು ಕೆಲವೊಂದುಸಲ ಈ ಪದವನ್ನು ಅಲಂಕಾರಿಕ ಭಾಷೆಯಲ್ಲಿಯೂ ಬಳಸುತ್ತಾರೆ, ಇದಕ್ಕೆ “ಪಾಪ ಮಾಡಬೇಕೆಂದು ಆಲೋಚನೆ ಬಂದಾಗ” ಅಥವಾ “ಪಾಪ ಮಾಡುವ ಆರಂಭ ಸಮಯ” ಅಥವಾ “ಪಾಪ ಮೊಟ್ಟ ಮೊದಲು ಆರಂಭವಾಗುವಾಗ” ಎನ್ನುವ ಅರ್ಥಗಳಿವೆ.

(ಈ ಪದಗಳನ್ನು ಸಹ ನೋಡಿರಿ : ತಯಾರಿಸು, ಗರ್ಭ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2029, H2030, H2032, H2232, H2254, H2803, H3179, G1080, G1722, G2602, G2845, G4815