kn_tw/bible/other/caughtup.md

2.7 KiB

ಎತ್ತಲ್ಪಡುವುದು

ಪದದ ಅರ್ಥವಿವರಣೆ:

“ಎತ್ತಲ್ಪಡುವರು” ಎನ್ನುವ ಪದವು ಅನೇಕ ಬಾರಿ ದೇವರು ಒಬ್ಬ ವ್ಯಕ್ತಿಯನ್ನು ಆಕಸ್ಮಿಕವಾಗಿ, ಅಧ್ಬುತ ರೀತಿಯಾಗಿ ಪರಲೋಕಕ್ಕೆ ಕರೆದೊಯ್ಯುವುದನ್ನು ಸೂಚಿಸುತ್ತದೆ.

  • “ಸಿಕ್ಕುತ್ತಾರೆ” ಎನ್ನುವ ಮಾತು ಒಬ್ಬರನ್ನು ಸೇರುವುದಕ್ಕೆ ಅವಸರಿಸಿದನಂತರ ಒಬ್ಬರ ಬಳಿಗೆ ಬರುವುದನ್ನು ಸೂಚಿಸುತ್ತದೆ. ಇದೇ ಅರ್ಥ ಬರುವ ಇನ್ನೊಂದು ಪದವು ಏನಂದರೆ “ಅಧಿಗಮಿಸು”
  • ಮೂರನೇ ಆಕಾಶಕ್ಕೆ “ಕರೆದೊಯ್ಯಲ್ಪಟ್ಟ” ವಿಷಯದ ಕುರಿತಾಗಿ ಅಪೊಸ್ತಲನಾದ ಪೌಲನು ಮಾತನಾಡುತ್ತಿದ್ದಾನೆ. ಇದನ್ನು “ತೆಗೆದುಕೊಂಡಾಗಿದೆ” ಎಂದೂ ಅನುವಾದ ಮಾಡಬಹುದು.
  • ಕ್ರಿಸ್ತನು ಹಿಂದಿರುಗಿ ಬರುವ ಸಮಯದಲ್ಲಿ ಆಕಾಶದಲ್ಲಿ ಆತನನ್ನು ಸೇರಲು ಕ್ರೈಸ್ತರೆಲ್ಲರು “ಮೇಲಕ್ಕೆ ಎತ್ತಲ್ಪಡುತ್ತಾರೆ” ಎಂದು ಅಪೊಸ್ತಲನಾದ ಪೌಲನು ಹೇಳಿದ್ದಾನೆ.
  • ಅಲಂಕಾರ ಭಾವವ್ಯಕ್ತೀಕರಣದಲ್ಲಿ “ನನ್ನ ಪಾಪಗಳು ನನ್ನೊಂದಿಗೆ ಎತ್ತಿ ಹಿಡಿಯಲ್ಪಟ್ಟಿವೆ” ಎನ್ನುವ ಮಾತು, “ನಾನು ಮಾಡಿರುವ ಪಾಪಕ್ಕೆ ನಾನು ಪರಿಣಾಮಗಳನ್ನು ಎದುರುಗೊಂಡಿದ್ದೇನೆ” ಅಥವಾ “ನನ್ನ ಪಾಪದ ಕಾರಣದಿಂದ ನಾನು ಹಿಂಸೆಯನ್ನು ಅನುಭವಿಸುತ್ತಿದ್ದೇನೆ” ಅಥವಾ “ನನ್ನ ಪಾಪವೇ ನನ್ನ ಸಂಕಷ್ಟಕ್ಕೆ ಕಾರಣ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅದ್ಭುತ, ಅಧಿಗಮಿಸು, ಶ್ರಮೆ, ಸಂಕಷ್ಟ)

ಸತ್ಯವೇದದ ವಾಕ್ಯಗಳು :

ಪದ ಡೇಟಾ:

  • Strong's: H1692, G7260