kn_tw/bible/other/trouble.md

5.5 KiB

ಸಂಕಟ, ಸಂಕಟಗಳು, ಸಂಕಟಪಟ್ಟಿದೆ, ಸಂಕಟಪಡುವುದು, ಸಂಕಟಗಾರ, ಸಂಕಟ ಕೊಡು

ಪದದ ಅರ್ಥವಿವರಣೆ:

“ಸಂಕಟ” ಎನ್ನುವುದು ಅತೀ ಹೆಚ್ಚಾದ ಕಷ್ಟಕರ ಮತ್ತು ದುಃಖಕರವಾದ ಜೀವನದಲ್ಲಿನ ಅನುಭವ. ಒಬ್ಬ ವ್ಯಕ್ತಿಗೆ “ಸಂಕಟ” ಕೊಡು ಎಂದರೆ ಆ ವ್ಯಕ್ತಿಯನ್ನು “ಬಾಧೆಗೆ’ ಒಳಗಾಗಿಸು ಅಥವಾ ಯಾರಾದರೊಬ್ಬರು ಯಾತನೆಪಡುವಂತೆ ಮಾಡು ಎಂದರ್ಥವಾಗಿರುತ್ತದೆ. “ಸಂಕಟಪಡು” ಎನ್ನುವ ಪದಕ್ಕೆ ಯಾವುದಾದರೊಂದರ ಕುರಿತಾಗಿ ಯಾತನೆಪಡುವುದು ಅಥವಾ ಕುಗ್ಗಿ ಹೋಗುವ ಭಾವನೆಯನ್ನು ಹೊಂದಿರುವುದು ಎಂದರ್ಥ.

  • ಸಂಕಟಗಳು ಒಬ್ಬ ವ್ಯಕ್ತಿಯನ್ನು ನೋಯಿಸುವ ಭೌತಿಕ, ಭಾವನಾತ್ಮಕ ಅಥವಾ ಆತ್ಮೀಯ ಸಂಗತಿಗಳಾಗಿರಬಹುದು.
  • ಸತ್ಯವೇದದಲ್ಲಿ ಅನೇಕಬಾರಿ ಸಂಕಟಗಳು ವಿಶ್ವಾಸಿಗಳು ತಮ್ಮ ನಂಬಿಕೆಯಲ್ಲಿ ಬೆಳೆಯುವುದಕ್ಕೆ ಮತ್ತು ಪರಿಪಕ್ವವುಳ್ಳವರಾಗಿರುವುದಕ್ಕೆ ಸಹಾಯ ಮಾಡಲು ದೇವರು ಉಪಯೋಗಿಸುವ ಪರೀಕ್ಷೆಯ ಸಮಯಗಳಾಗಿರುತ್ತವೆ.
  • ಹಳೇ ಒಡಂಬಡಿಕೇ ಉಪಯೋಗಿಸುವ “ಸಂಕಟ” ಎನ್ನುವ ಪದವು ದೇವರನ್ನು ತಿರಸ್ಕರಿಸಿದ ಮತ್ತು ನೈತಿಕವಾಗಿ ಕೆಟ್ಟುಹೋಗಿರುವ ಜನರ ಗುಂಪುಗಳ ಮೇಲೆ ಬಂದಿರುವ ತೀರ್ಪನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.

ಅನುವಾದ ಸಲಹೆಗಳು:

  • “ಸಂಕಟ” ಅಥವಾ “ಸಂಕಟಗಳು” ಎನ್ನುವ ಪದವು “ಅಪಾಯ” ಅಥವಾ “ನಡೆದ ನೋವಿನ ವಿಷಯಗಳು” ಅಥವಾ “ಹಿಂಸೆ” ಅಥವಾ “ಕಷ್ಟಕರವಾದ ಅನುಭವಗಳು” ಅಥವಾ “ಯಾತನೆ” ಎಂದೂ ಅನುವಾದ ಮಾಡಬಹುದು.
  • “ಸಂಕಟ ಹೊಂದಿದೆ” ಎನ್ನುವ ಪದವು “ಯಾತನೆಯಿಂದ ಹಾದುಹೋಗುವುದು” ಅಥವಾ “ಭಯಾನಕವಾದ ಯಾತನೆಯನ್ನು ಭಾವಿಸುವುದು” ಅಥವಾ “ಚಿಂತಿಸುವುದು” ಅಥವಾ “ಕಳವಳ” ಅಥವಾ “ಯಾತನೆಪಟ್ಟಿದೆ” ಅಥವಾ “ಭಯಭೀತಿಗೊಳಗಾದೆ” ಅಥವಾ “ತೊಂದರೆ ಮಾಡಿದೆ” ಎಂದು ಅರ್ಥಗಳು ಕೊಡುವ ಮಾತುಗಳನ್ನು ಅಥವಾ ಪದಗಳನ್ನು ಉಪಯೋಗಿಸಿ ಅನುವಾದ ಮಾಡಬಹುದು.
  • “ಆಕೆಗೆ ಸಂಕಟ ಕೊಡಬೇಡ” ಎನ್ನುವ ಮಾತನ್ನು “ಆಕೆಯನ್ನು ಬಾಧಿಸಬೇಡ” ಅಥವಾ “ಆಕೆಯನ್ನು ವಿಮರ್ಶಿಸಬೇಡ” ಎಂದೂ ಅನುವಾದ ಮಾಡಬಹುದು.

“ಸಂಕಟ ದಿನ” ಅಥವಾ “ಸಂಕಟ ಸಮಯಗಳು” ಎನ್ನುವ ಮಾತನ್ನು “ನೀನು ಯಾತನೆಯನ್ನು ಅನುಭವಿಸುವ ಸಮಯ” ಅಥವಾ “ನಿನಗೆ ಸಂಕಷ್ಟಗಳು ಬಂದ ಸಮಯ” ಅಥವಾ “ಯಾತನೆಯನ್ನು ಹುಟ್ಟಿಸುವ ಸಂಘಟನೆಗಳು ದೇವರು ಉಂಟು ಮಾಡಿದಾಗ” ಎಂದೂ ಅನುವಾದ ಮಾಡಬಹುದು.

  • “ಸಂಕಟಪಡಿಸು” ಅಥವಾ “ಸಂಕಟ ತರು” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನದಲ್ಲಿ “ಯಾತನೆಪಡಿಸುವ ವಿಷಯಗಳು ನಡೆಯುವಂತೆ ಮಾಡು” ಅಥವಾ “ಸಂಕಷ್ಟಗಳನ್ನು ಉಂಟು ಮಾಡು” ಅಥವಾ “ಅತೀ ಕಷ್ಟಕರವಾದ ವಿಷಯಗಳು ಅವರು ಅನುಭವಿಸುವಂತೆ ಮಾಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ತೊಂದರೆ ಕೊಡು, ಹಿಂಸಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H205, H598, H926, H927, H928, H1204, H1205, H1607, H1644, H1804, H1993, H2000, H2113, H2189, H2560, H2960, H4103, H5590, H5753, H5916, H5999, H6031, H6040, H6470, H6696, H6862, H6869, H6887, H7264, H7267, H7451, H7481, H7489, H7515, H7561, H8513, G387, G1298, G1613, G1776, G2346, G2347, G2350, G2360, G2553, G2873, G3636, G3926, G3930, G3986, G4423, G4660, G5015, G5016, G5182