34 lines
5.5 KiB
Markdown
34 lines
5.5 KiB
Markdown
# ಸಂಕಟ, ಸಂಕಟಗಳು, ಸಂಕಟಪಟ್ಟಿದೆ, ಸಂಕಟಪಡುವುದು, ಸಂಕಟಗಾರ, ಸಂಕಟ ಕೊಡು
|
|
|
|
## ಪದದ ಅರ್ಥವಿವರಣೆ:
|
|
|
|
“ಸಂಕಟ” ಎನ್ನುವುದು ಅತೀ ಹೆಚ್ಚಾದ ಕಷ್ಟಕರ ಮತ್ತು ದುಃಖಕರವಾದ ಜೀವನದಲ್ಲಿನ ಅನುಭವ. ಒಬ್ಬ ವ್ಯಕ್ತಿಗೆ “ಸಂಕಟ” ಕೊಡು ಎಂದರೆ ಆ ವ್ಯಕ್ತಿಯನ್ನು “ಬಾಧೆಗೆ’ ಒಳಗಾಗಿಸು ಅಥವಾ ಯಾರಾದರೊಬ್ಬರು ಯಾತನೆಪಡುವಂತೆ ಮಾಡು ಎಂದರ್ಥವಾಗಿರುತ್ತದೆ. “ಸಂಕಟಪಡು” ಎನ್ನುವ ಪದಕ್ಕೆ ಯಾವುದಾದರೊಂದರ ಕುರಿತಾಗಿ ಯಾತನೆಪಡುವುದು ಅಥವಾ ಕುಗ್ಗಿ ಹೋಗುವ ಭಾವನೆಯನ್ನು ಹೊಂದಿರುವುದು ಎಂದರ್ಥ.
|
|
|
|
* ಸಂಕಟಗಳು ಒಬ್ಬ ವ್ಯಕ್ತಿಯನ್ನು ನೋಯಿಸುವ ಭೌತಿಕ, ಭಾವನಾತ್ಮಕ ಅಥವಾ ಆತ್ಮೀಯ ಸಂಗತಿಗಳಾಗಿರಬಹುದು.
|
|
* ಸತ್ಯವೇದದಲ್ಲಿ ಅನೇಕಬಾರಿ ಸಂಕಟಗಳು ವಿಶ್ವಾಸಿಗಳು ತಮ್ಮ ನಂಬಿಕೆಯಲ್ಲಿ ಬೆಳೆಯುವುದಕ್ಕೆ ಮತ್ತು ಪರಿಪಕ್ವವುಳ್ಳವರಾಗಿರುವುದಕ್ಕೆ ಸಹಾಯ ಮಾಡಲು ದೇವರು ಉಪಯೋಗಿಸುವ ಪರೀಕ್ಷೆಯ ಸಮಯಗಳಾಗಿರುತ್ತವೆ.
|
|
* ಹಳೇ ಒಡಂಬಡಿಕೇ ಉಪಯೋಗಿಸುವ “ಸಂಕಟ” ಎನ್ನುವ ಪದವು ದೇವರನ್ನು ತಿರಸ್ಕರಿಸಿದ ಮತ್ತು ನೈತಿಕವಾಗಿ ಕೆಟ್ಟುಹೋಗಿರುವ ಜನರ ಗುಂಪುಗಳ ಮೇಲೆ ಬಂದಿರುವ ತೀರ್ಪನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
|
|
|
|
## ಅನುವಾದ ಸಲಹೆಗಳು:
|
|
|
|
* “ಸಂಕಟ” ಅಥವಾ “ಸಂಕಟಗಳು” ಎನ್ನುವ ಪದವು “ಅಪಾಯ” ಅಥವಾ “ನಡೆದ ನೋವಿನ ವಿಷಯಗಳು” ಅಥವಾ “ಹಿಂಸೆ” ಅಥವಾ “ಕಷ್ಟಕರವಾದ ಅನುಭವಗಳು” ಅಥವಾ “ಯಾತನೆ” ಎಂದೂ ಅನುವಾದ ಮಾಡಬಹುದು.
|
|
* “ಸಂಕಟ ಹೊಂದಿದೆ” ಎನ್ನುವ ಪದವು “ಯಾತನೆಯಿಂದ ಹಾದುಹೋಗುವುದು” ಅಥವಾ “ಭಯಾನಕವಾದ ಯಾತನೆಯನ್ನು ಭಾವಿಸುವುದು” ಅಥವಾ “ಚಿಂತಿಸುವುದು” ಅಥವಾ “ಕಳವಳ” ಅಥವಾ “ಯಾತನೆಪಟ್ಟಿದೆ” ಅಥವಾ “ಭಯಭೀತಿಗೊಳಗಾದೆ” ಅಥವಾ “ತೊಂದರೆ ಮಾಡಿದೆ” ಎಂದು ಅರ್ಥಗಳು ಕೊಡುವ ಮಾತುಗಳನ್ನು ಅಥವಾ ಪದಗಳನ್ನು ಉಪಯೋಗಿಸಿ ಅನುವಾದ ಮಾಡಬಹುದು.
|
|
* “ಆಕೆಗೆ ಸಂಕಟ ಕೊಡಬೇಡ” ಎನ್ನುವ ಮಾತನ್ನು “ಆಕೆಯನ್ನು ಬಾಧಿಸಬೇಡ” ಅಥವಾ “ಆಕೆಯನ್ನು ವಿಮರ್ಶಿಸಬೇಡ” ಎಂದೂ ಅನುವಾದ ಮಾಡಬಹುದು.
|
|
|
|
“ಸಂಕಟ ದಿನ” ಅಥವಾ “ಸಂಕಟ ಸಮಯಗಳು” ಎನ್ನುವ ಮಾತನ್ನು “ನೀನು ಯಾತನೆಯನ್ನು ಅನುಭವಿಸುವ ಸಮಯ” ಅಥವಾ “ನಿನಗೆ ಸಂಕಷ್ಟಗಳು ಬಂದ ಸಮಯ” ಅಥವಾ “ಯಾತನೆಯನ್ನು ಹುಟ್ಟಿಸುವ ಸಂಘಟನೆಗಳು ದೇವರು ಉಂಟು ಮಾಡಿದಾಗ” ಎಂದೂ ಅನುವಾದ ಮಾಡಬಹುದು.
|
|
|
|
* “ಸಂಕಟಪಡಿಸು” ಅಥವಾ “ಸಂಕಟ ತರು” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನದಲ್ಲಿ “ಯಾತನೆಪಡಿಸುವ ವಿಷಯಗಳು ನಡೆಯುವಂತೆ ಮಾಡು” ಅಥವಾ “ಸಂಕಷ್ಟಗಳನ್ನು ಉಂಟು ಮಾಡು” ಅಥವಾ “ಅತೀ ಕಷ್ಟಕರವಾದ ವಿಷಯಗಳು ಅವರು ಅನುಭವಿಸುವಂತೆ ಮಾಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ತೊಂದರೆ ಕೊಡು](../other/afflict.md), [ಹಿಂಸಿಸು](../other/persecute.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಅರಸ.18:18-19](rc://*/tn/help/1ki/18/18)
|
|
* [2 ಪೂರ್ವ.25:18-19](rc://*/tn/help/2ch/25/18)
|
|
* [ಲೂಕ.24:38-40](rc://*/tn/help/luk/24/38)
|
|
* [ಮತ್ತಾಯ.24:6-8](rc://*/tn/help/mat/24/06)
|
|
* [ಮತ್ತಾಯ.26:36-38](rc://*/tn/help/mat/26/36)
|
|
|
|
## ಪದ ಡೇಟಾ:
|
|
|
|
* Strong's: H205, H598, H926, H927, H928, H1204, H1205, H1607, H1644, H1804, H1993, H2000, H2113, H2189, H2560, H2960, H4103, H5590, H5753, H5916, H5999, H6031, H6040, H6470, H6696, H6862, H6869, H6887, H7264, H7267, H7451, H7481, H7489, H7515, H7561, H8513, G387, G1298, G1613, G1776, G2346, G2347, G2350, G2360, G2553, G2873, G3636, G3926, G3930, G3986, G4423, G4660, G5015, G5016, G5182
|