kn_tw/bible/other/persecute.md

6.2 KiB

ಹಿಂಸಿಸು, ಹಿಂಸಿಸಿದೆ, ಹಿಂಸಿಸುತ್ತಾ ಇರುವುದು, ಹಿಂಸೆ, ಹಿಂಸೆಗಳು, ಹಿಂಸಕನು, ಹಿಂಸಕರು

ಪದದ ಅರ್ಥವಿವರಣೆ:

“ಹಿಂಸಿಸು” ಮತ್ತು “ಹಿಂಸೆ” ಎನ್ನುವ ಪದಗಳು ಜನರಿಗೆ ಹಾನಿಯನ್ನುಂಟು ಮಾಡುವ ಕಠಿಣ ಮಾರ್ಗದಲ್ಲಿ ಒಂದು ನಿರ್ದಿಷ್ಟವಾದ ಜನರ ಗುಂಪನ್ನು ಅಥವಾ ಒಬ್ಬ ವ್ಯಕ್ತಿಯನ್ನು ನಿರಂತರವಾಗಿ ಹಿಂಸೆಗೆ ಗುರಿ ಮಾಡುತ್ತಿರುವುದನ್ನು ಸೂಚಿಸುತ್ತದೆ.

  • ಹಿಂಸೆ ಎನ್ನುವುದು ಒಬ್ಬರಿಗೆ ವಿರುದ್ಧವಾಗಿ ಅಥವಾ ಅನೇಕ ಜನರ ಗುಂಪಿಗೆ ವಿರುದ್ಧವಾಗಿ ಮಾಡುವಂಥದ್ದು ಮತ್ತು ಸಹಜವಾಗಿ ಇದರಲ್ಲಿ ನಿರಂತರವಾಗಿ ದಾಳಿ ಮಾಡುವುದು ಒಳಗೊಂಡಿರುತ್ತದೆ.
  • ಇಸ್ರಾಯೇಲ್ಯರು ಅನೇಕ ಗುಂಪುಗಳ ಜನರ ಮೂಲಕ ದಾಳಿ ಮಾಡಲ್ಪಟ್ಟು, ಹಿಂಸೆಸಲ್ಪಟ್ಟಿರುತ್ತದೆ, ಅನೇಕ ವಸ್ತುಗಳನ್ನು ಅವರಿಂದ ಕದಿಯಲ್ಪಟ್ಟಿರುತ್ತದೆ.
  • ಜನರು ಅನೇಕಬಾರಿ ವಿಭಿನ್ನವಾದ ಧರ್ಮ ವಿಶ್ವಾಸಗಳನ್ನೊಳಗೊಂಡ ಅಥವಾ ಬಲಹೀನವಾದ ಇತರ ಜನರನ್ನು ಹಿಂಸೆಗೆ ಗುರಿ ಮಾಡಿರುತ್ತಾರೆ.
  • ಯೆಹೂದ್ಯ ಧರ್ಮದ ನಾಯಕರು ಯೇಸುವನ್ನು ಹಿಂಸಿಸಿದರು, ಯಾಕಂದರೆ ಆತನು ಬೋಧನೆ ಮಾಡುತ್ತಿರುವುದನ್ನು ಅವರು (ಯೆಹೂದ್ಯರ ನಾಯಕರು) ಇಷ್ಟಪಟ್ಟಿದ್ದಿಲ್ಲ.
  • ಯೇಸು ಹಿಂದಿರುಗಿ ಪರಲೋಕಕ್ಕೆ ಹೋದನು, ಯೆಹೂದ್ಯರ ಧರ್ಮದ ನಾಯಕರು ಮತ್ತು ರೋಮಾ ಪ್ರಭುತ್ವವು ಆತನ ಹಿಂಬಾಲಕರನ್ನು ಹಿಂಸಿಸಿದರು.
  • “ಹಿಂಸಿಸು” ಎನ್ನುವ ಪದವನ್ನು “ತುಳಿಯುತ್ತಾ ಇರುವುದು” ಅಥವಾ “ಕಠಿಣವಾಗಿ ನಡೆದುಕೊಳ್ಳುವುದು” ಅಥವಾ “ನಿರಂತರವಾಗಿ ತಪ್ಪಾಗಿ ನಡೆದುಕೊಳ್ಳುವುದು” ಎಂದೂ ಅನುವಾದ ಮಾಡಬಹುದು.

“ಹಿಂಸೆ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಕಠಿಣವಾದ ದೌರ್ಜನ್ಯ” ಅಥವಾ “ದಬ್ಬಾಳಿಕೆ” ಅಥವಾ “ಕಠಿಣವಾದ ದೌರ್ಜನ್ಯವನ್ನು ಮುಂದೆವರಿಸುವುದು” ಎನ್ನುವ ಮಾತುಗಳನ್ನು ಒಳಗೊಂಡಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಕ್ರೈಸ್ತ, ಸಭೆ, ದಬ್ಬಾಳಿಕೆ, ರೋಮಾ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 33:07 “ಬಂಡೆಯ ನೆಲವು ದೇವರ ವಾಕ್ಯವನ್ನು ಕೇಳಿದ ವ್ಯಕ್ತಿಯನ್ನು ಮತ್ತು ಅದನ್ನು ಸಂತೋಷದಿಂದ ಸ್ವೀಕರಿಸುವ ವ್ಯಕ್ತಿಯನ್ನು ಸೂಚಿಸುತ್ತದೆ. ಆದರೆ ಅವನು ಕಠಿಣವಾದ ಪರಿಸ್ಥಿತಿಗಳನ್ನು ಅಥವಾ ___ ಹಿಂಸೆಗಳನ್ನು ___ ಅನುಭವಿಸಿದಾಗ, ಅವನು ಪಕ್ಕಕ್ಕೆ ತೊಲಗಿ ಹೋಗುವನು.
  • 45:06 ಆ ದಿನದಂದು ಯೆರೂಸಲೇಮಿನಲ್ಲಿರುವ ಅನೇಕ ಜನರು ಯೇಸುವಿನ ಹಿಂಬಾಲಕರನ್ನು ___ ಹಿಂಸಿಸುವುದನ್ನು ___ ಆರಂಭಿಸುತ್ತಾರೆ, ಇದರಿಂದ ವಿಶ್ವಾಸಿಗಳು ಅನೇಕ ಸ್ಥಳಗಳಿಗೆ ಚೆದುರಿಹೋದರು.
  • 46:02 “ಸೌಲಾ! ಸೌಲಾ! ನನ್ನನ್ನು ಯಾಕೆ ___ ಹಿಂಸೆ ___ ಪಡಿಸುತ್ತೀಯಾ?” ಎಂದು ಯಾರೋ ಮಾತನಾಡುತ್ತಿರುವಂತೆ ಸೌಲನು ಕೇಳಿಸಿಕೊಂಡನು. “ನೀನು ಯಾರು, ಬೋಧಕನೇ?” ಎಂದು ಸೌಲನು ಕೇಳಿದನು. “ನೀನು ನನ್ನನ್ನು ___ ಹಿಂಸೆ ಪಡಿಸುತ್ತಿರುವ ___, ಯೇಸು” ಎಂದು ಯೇಸು ಅವನಿಗೆ ಉತ್ತರ ಕೊಟ್ಟನು.
  • 46:04 ಆದರೆ “ಬೋಧಕನೆ, ಈ ಮನುಷ್ಯನು ಯಾವರೀತಿ ವಿಶ್ವಾಸಿಗಳನ್ನು ___ ಹಿಂಸೆಗೆ ___ ಗುರಿ ಮಾಡಿದ್ದನೆನ್ನುವ ವಿಷಯವನ್ನು ನಾನು ಕೇಳಿಸಿಕೊಂಡಿದ್ದೆನು” ಎಂದು ಅನನೀಯ ಹೇಳಿದನು.

ಪದ ಡೇಟಾ:

  • Strong's: H1814, H4783, H7291, H7852, G1375, G1376, G1377, G1559, G2347