kn_tw/bible/other/bookoflife.md

2.4 KiB

ಜೀವ ಬಾಧ್ಯರ ಪುಸ್ತಕ

ಪದದ ಅರ್ಥವಿವರಣೆ:

“ಜೀವ ಬಾಧ್ಯರ ಪುಸ್ತಕ” ಎನ್ನುವ ಮಾತು ದೇವರು ವಿಮೋಚಿಸಿದ ಮತ್ತು ನಿತ್ಯಜೀವವನ್ನು ಕೊಟ್ಟ ಜನರ ಹೆಸರುಗಳನ್ನು ಆತನು ಬರೆದಿರುವ ಪುಸ್ತಕವನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.

  • ಪ್ರಕಟನೆ ಗ್ರಂಥವು ಈ ಪುಸ್ತಕವನ್ನು “ಕುರಿಮರಿಯಾದಾತನ ಬಳಿಯಲ್ಲಿರುವ ಜೀವ ಬಾಧ್ಯರ ಪುಸ್ತಕ” ಎಂದು ಸೂಚಿಸುತ್ತದೆ. ಇದನ್ನು “ದೇವರ ಕುರಿಮರಿಯಾದ ಯೇಸುವಿಗೆ ಸಂಬಂಧಪಟ್ಟ ಜೀವ ಬಾಧ್ಯರ ಪುಸ್ತಕ” ಎಂದೂ ಅನುವಾದ ಮಾಡಬಹುದು. ಜನರ ಪಾಪಗಳಿಗೋಸ್ಕರ ಶಿಲುಬೆಯಲ್ಲಿ ಯೇಸುವಿನ ಬಲಿದಾನವು ದಂಡನೆಯನ್ನು ಸಲ್ಲಿಸಿದೆ. ಆದ್ದರಿಂದ ಯಾರೇ ಆಗಲಿ ಆತನಲ್ಲಿ ನಂಬಿಕೆಯನ್ನಿಡುವುದರ ಮೂಲಕ ನಿತ್ಯಜೀವವನ್ನು ಹೊಂದಿಕೊಳ್ಳಬಹುದು.
  • “ಪುಸ್ತಕ” ಎನ್ನುವ ಪದವು “ಸುರುಳಿ” ಅಥವಾ “ಪತ್ರ” ಅಥವಾ “ಬರವಣಿಗೆ” ಅಥವಾ “ಕಾನೂನು ದಾಖಲೆ” ಎಂದೂ ಅರ್ಥವನ್ನು ಕೊಡುತ್ತದೆ. ಇದು ಅಕ್ಷರಾರ್ಥವಾಗಿರಬಹುದು ಅಥವಾ ಅಲಂಕಾರ ರೂಪದಲ್ಲಿರಬಹುದು.

(ಈ ಪದಗಳನ್ನು ಸಹ ನೋಡಿರಿ : ನಿತ್ಯಜೀವ, ಕುರಿಮರಿ, ಜೀವ, ಬಲಿ, ಸುರುಳಿ)

ಸತ್ಯವೇದದ ವಾಕ್ಯಗಳು :

ಪದ ಡೇಟಾ:

  • Strong's: H2416, H5612, G9760, G22220