kn_tw/bible/other/biblicaltimeday.md

2.9 KiB

ದಿನ

ಪದದ ಅರ್ಥವಿವರಣೆ

“ದಿನ” ಎನ್ನುವ ಪದ ಸೂರ್ಯೋದಯದಿಂದ 24 ಗಂಟೆಗಳ ಕಾಲವನ್ನು ಅಕ್ಷರಾರ್ಥವಾಗಿ ಸೂಚಿಸುತ್ತಿದೆ. ಈ ಪದವನ್ನು ಅಲಂಕಾರ ರೂಪದಲ್ಲಿ ಸಹ ಉಪಯೋಗಿಸುತ್ತಾರೆ.

  • ಇಸ್ರಾಯೇಲ್ಯರಿಗೆ ಮತ್ತು ಯಹೂದಿಯರಿಗೆ, ಒಂದು ದಿನ ಸೂರ್ಯ ಮುಳುಗುವ ಸಮಯದಿಂದ ಮತ್ತೊಂದು ದಿನ ಸೂರ್ಯ ಮುಳುಗುವವರೆಗೂ ಒಂದು ದಿನವಾಗಿರುತ್ತದೆ.
  • “ದಿನ” ಎನ್ನುವ ಪದವನ್ನು ಹೆಚ್ಚು ಸಮಯವನ್ನು ಸೂಚಿಸಲು ಅಲಂಕಾರ ರೂಪದಲ್ಲಿ ಉಪಯೋಗಿಸುತ್ತಾರೆ, ಉದಾಹರಣೆಗೆ “ಯೆಹೋವನ ದಿನ” ಅಥವಾ “ಅಂತ್ಯ ದಿನ”.
  • ಈ ಅಲಂಕಾರ ಪದಗಳನ್ನು ಅನುವಾದಿಸಲು ಕೆಲವೊಂದು ಭಾಷೆಗಳಲ್ಲಿ ಬೇರೆ ಪದಗಳನ್ನು ಉಪಯೋಗಿಸುತ್ತಾರೆ ಅಥವಾ “ದಿನ” ಎನ್ನುವ ಪದಕ್ಕೆ ಅಲಂಕಾರ ರೂಪವನ್ನು ಬಳಸುವದಿಲ್ಲ.
  • “ದಿನ” ಎನ್ನುವ ಪದಕ್ಕೆ “ಸಮಯ” ಅಥವಾ “ಕಾಲ” ಅಥವಾ “ಸಂಧರ್ಭ” ಅಥವಾ “ಕಾರ್ಯಕ್ರಮ” ಎನ್ನುವಂತೆ ಸಂಧರ್ಭಾನುಸಾರವಾಗಿ ಬೇರೆ ಅನುವಾದಗಳುಂಟು.

ಅನುವಾದ ಸಲಹೆಗಳು:

  • ಬೆಳಕು ಇದ್ದಾಗ ದಿನದ ಭಾಗವನ್ನು ಸೂಚಿಸುವ ನಿಮ್ಮ ಭಾಷೆಯಲ್ಲಿರುವ ಪದವನ್ನು ಬಳಸಿಕೊಂಡು ಈ ಪದವನ್ನು ಅಕ್ಷರಶಃ “ದಿನ” ಅಥವಾ “ಹಗಲಿನ ಸಮಯ” ಎಂದು ಭಾಷಾಂತರಿಸುವುದು ಉತ್ತಮ.
  • “ದಿನ” ದ ಇತರ ಅನುವಾದಗಳು ಸಂದರ್ಭಕ್ಕೆ ಅನುಗುಣವಾಗಿ “ಹಗಲಿನ ಸಮಯ,” “ಸಮಯ,” “ಸಂದರ್ಭ” ಅಥವಾ “ಘಟನೆ” ಅನ್ನು ಒಳಗೊಂಡಿರಬಹುದು.

(ಈ ಪದಗಳನ್ನು ಸಹ ನೋಡಿರಿ : ನ್ಯಾಯ ತೀರ್ಪಿನ ದಿನ, ಅಂತ್ಯ ದಿನ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H3117, H3118, H6242, G2250