5.7 KiB
5.7 KiB
ದ್ರೋಹ, ದ್ರೋಹ ಮಾಡು, ದ್ರೋಹ ಮಾಡಿದನು, ದ್ರೋಹ ಮಾಡುತ್ತಿದ್ದಾನೆ, ದ್ರೋಹಿ, ದ್ರೋಹಿಗಳು
ಪದದ ಅರ್ಥವಿವರಣೆ
ಯಾರನ್ನಾದರು ಮೋಸಮಾಡಿ ಮತ್ತು ನೋಯಿಸಿದರೆ ಅದು “ದ್ರೋಹ” ಎಂದು ಅರ್ಥವಾಗಿದೆ. ತನ್ನನ್ನು ನಂಬಿದ್ದ ತನ್ನ ಸ್ನೇಹಿತನನ್ನು ಮೋಸ ಮಾಡುವವನು “ದ್ರೋಹಿ” ಎಂದು ಕರೆಯಲ್ಪಡುತ್ತಾನೆ.
- ಯೂದ ಎಂಬವನು “ದ್ರೋಹಿ” ಯಾಕಂದರೆ ಯೇಸುವನ್ನು ಹೇಗೆ ಹಿಡುದುಕೊಳ್ಳಬಹುದೆಂದು ಯಹೂದಿಯ ನಾಯಕರಿಗೆ ಹೇಳಿದನು.
- ಯೂದನು ಮಾಡಿದ ದ್ರೋಹ ಬಹಳ ದುಷ್ಟ ಕಾರ್ಯವಾಗಿದೆ ಯಾಕಂದರೆ ಅವನು ಯೇಸುವಿನ ಶಿಷ್ಯನಾಗಿದ್ದು, ಯೇಸುವನ್ನು ಅನ್ಯಾಯವಾದ ಮರಣಕ್ಕೆ ಒಪ್ಪಿಸುವಂತೆ ಯಹೂದಿಯ ನಾಯಕರಿಗೆ ಮಾಹಿತಿಯನ್ನು ನೀಡಿದನು.
ಅನುವಾದ ಸಲಹೆಗಳು:
- ಸಂಧರ್ಭಾನುಸಾರವಾಗಿ, “ದ್ರೋಹ” ಎನ್ನುವ ಪದವನ್ನು “ಮೋಸ ಮಾಡುವುದು ಮತ್ತು ಹಾನಿಕಾರಕವಾಗಿರುವುದು” ಅಥವಾ “ಶತ್ರುಗಳೊಂದಿಗೆ ಕೈ ಜೋಡಿಸುವುದು” ಅಥವಾ “ವಿಶ್ವಾಸಘಾತುಕವಾಗಿ ನೋಡುವುದು” ಎಂದು ಅನುವಾದ ಮಾಡಬಹುದು.
- “ದ್ರೋಹಿ” ಎನ್ನುವ ಪದವನ್ನು “ದ್ರೋಹ ಮಾಡುವ ವ್ಯಕ್ತಿ” ಅಥವಾ “ಹೇಳೋದೊಂದು ಮಾಡೋದೊಂದು ಎನ್ನುವಂತೆ ಇರುವ ವ್ಯಕ್ತಿ” ಅಥವಾ “ವಂಚಕ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಇಸ್ಕರಿಯೋತ ಯೂದ, ಯಹೂದಿಯ ನಾಯಕರು, ಅಪೊಸ್ತಲರು)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಕೆಲವು ಉದಾಹರಣೆಗಳು :
- 21:11 ಮೆಸ್ಸಿಯನನ್ನು ಕೊಲ್ಲುವವರು ಅವನ ಬಟ್ಟೆಗಳಿಗಾಗಿ ಚೀಟಿಗಳನ್ನು ಹಾಕುವರೆಂದು ತನ್ನ ಸ್ನೇಹಿತನೇ ಆತನಿಗೆ ದ್ರೋಹ ಮಾಡುವನೆಂದು ಬೇರೆ ಪ್ರವಾದಿಗಳು ಪ್ರವಾದಿಸಿದರು. ಮೆಸ್ಸಿಯನಿಗೆ ದ್ರೋಹ ಮಾಡಲು ಆತನ ಸ್ನೇಹಿತನು ಮೂವತ್ತು ಬೆಳ್ಳಿ ನಾಣ್ಯಗಳನ್ನು ಸ್ವೀಕರಿಸುವನೆಂದು ಪ್ರವಾದಿಯಾದ ಜೆಕರ್ಯ ಮುಂಚಿತವಾಗಿಯೇ ಹೇಳಿದನು.
- 38:02 ಯೇಸು ಮತ್ತು ತನ್ನ ಶಿಷ್ಯರು ಯೆರೂಸಲೇಮಿಗೆ ಬಂದಾಗ,ಯಹೂದಿಯ ನಾಯಕರಿಗೆ ಆತನನ್ನು ಒಪ್ಪಿಸಲು ಯೂದ ಹಣವನ್ನು ಸ್ವಿಕರಿಸಿ ಯೇಸುವಿಗೆ ದ್ರೋಹ ಮಾಡಿದನು.
- 38:03 ಮಹಾ ಯಾಜಕನ ನಾಯಕತ್ವದಲ್ಲಿ, ಯೇಸುವಿಗೆ ದ್ರೋಹ ಮಾಡಲು ಮೂವತ್ತು ಬೆಳ್ಳಿ ನಾಣ್ಯಗಳನ್ನು ಯಹೂದಿ ನಾಯಕರು ಯೂದನಿಗೆ ಕೊಟ್ಟರು.
- 38:06 ಆಗ “ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಮಾಡುವನು” ಎಂದು ಯೇಸು ತನ್ನ ಶಿಷ್ಯರೊಂದಿಗೆ ಹೇಳಿದನು. … “ನಾನು ಈ ರೊಟ್ಟಿಯನ್ನು ಯಾರಿಗೆ ಕೊಡುವೇನೋ ಅವನೇ ನನಗೆ ದ್ರೋಹ ಮಾಡುವನೆಂದು” ಯೇಸು ಹೇಳಿದನು.
- 38:13 ಮೂರನೇ ಬಾರಿ ಆತನು ಹಿಂತುರುಗಿ ಬಂದಾಗ, “ಎಚ್ಚರವಾಗಿ! ನನಗೆ ದ್ರೋಹ ಮಾಡುವವನು ಇಲ್ಲಿದ್ದಾನೆ” ಎಂದು ಯೇಸು ಹೇಳಿದನು.
- 38:14 ಆಗ ಯೇಸು “ಯೂದ, ನಿನ್ನ ಮುದ್ದಿನಿಂದ ನನಗೆ ದ್ರೋಹ ಮಾಡುವೆಯಾ?” ಎಂದು ಯೇಸು ಹೇಳಿದನು.
- 39:08 ಸ್ವಲ್ಪ ಸಮಯದಲ್ಲೇ, ಯಹೂದಿಯ ನಾಯಕರು ಯೇಸುವಿಗೆ ಮರಣ ಶಿಕ್ಷೆಯನ್ನು ನಿರ್ಣಯಿಸಿದ್ದಾರೆಂದು, ದ್ರೋಹಿಯಾದ ಯೂದ ತಿಳಿದುಕೊಂಡನು. ಅವನು ತುಂಬ ದುಃಖ ಕ್ರಾಂತನಾಗಿ ದೂರ ಹೋಗಿ ತನ್ನನ್ನು ತಾನೇ ಕೊಂದುಕೊಂಡನು.
ಪದ ಡೇಟಾ:
- Strong's: H7411, G3860, G4273