kn_tw/bible/other/betray.md

38 lines
5.7 KiB
Markdown

# ದ್ರೋಹ, ದ್ರೋಹ ಮಾಡು, ದ್ರೋಹ ಮಾಡಿದನು, ದ್ರೋಹ ಮಾಡುತ್ತಿದ್ದಾನೆ, ದ್ರೋಹಿ, ದ್ರೋಹಿಗಳು
## ಪದದ ಅರ್ಥವಿವರಣೆ
ಯಾರನ್ನಾದರು ಮೋಸಮಾಡಿ ಮತ್ತು ನೋಯಿಸಿದರೆ ಅದು “ದ್ರೋಹ” ಎಂದು ಅರ್ಥವಾಗಿದೆ. ತನ್ನನ್ನು ನಂಬಿದ್ದ ತನ್ನ ಸ್ನೇಹಿತನನ್ನು ಮೋಸ ಮಾಡುವವನು “ದ್ರೋಹಿ” ಎಂದು ಕರೆಯಲ್ಪಡುತ್ತಾನೆ.
* ಯೂದ ಎಂಬವನು “ದ್ರೋಹಿ” ಯಾಕಂದರೆ ಯೇಸುವನ್ನು ಹೇಗೆ ಹಿಡುದುಕೊಳ್ಳಬಹುದೆಂದು ಯಹೂದಿಯ ನಾಯಕರಿಗೆ ಹೇಳಿದನು.
* ಯೂದನು ಮಾಡಿದ ದ್ರೋಹ ಬಹಳ ದುಷ್ಟ ಕಾರ್ಯವಾಗಿದೆ ಯಾಕಂದರೆ ಅವನು ಯೇಸುವಿನ ಶಿಷ್ಯನಾಗಿದ್ದು, ಯೇಸುವನ್ನು ಅನ್ಯಾಯವಾದ ಮರಣಕ್ಕೆ ಒಪ್ಪಿಸುವಂತೆ ಯಹೂದಿಯ ನಾಯಕರಿಗೆ ಮಾಹಿತಿಯನ್ನು ನೀಡಿದನು.
## ಅನುವಾದ ಸಲಹೆಗಳು:
* ಸಂಧರ್ಭಾನುಸಾರವಾಗಿ, “ದ್ರೋಹ” ಎನ್ನುವ ಪದವನ್ನು “ಮೋಸ ಮಾಡುವುದು ಮತ್ತು ಹಾನಿಕಾರಕವಾಗಿರುವುದು” ಅಥವಾ “ಶತ್ರುಗಳೊಂದಿಗೆ ಕೈ ಜೋಡಿಸುವುದು” ಅಥವಾ “ವಿಶ್ವಾಸಘಾತುಕವಾಗಿ ನೋಡುವುದು” ಎಂದು ಅನುವಾದ ಮಾಡಬಹುದು.
* “ದ್ರೋಹಿ” ಎನ್ನುವ ಪದವನ್ನು “ದ್ರೋಹ ಮಾಡುವ ವ್ಯಕ್ತಿ” ಅಥವಾ “ಹೇಳೋದೊಂದು ಮಾಡೋದೊಂದು ಎನ್ನುವಂತೆ ಇರುವ ವ್ಯಕ್ತಿ” ಅಥವಾ “ವಂಚಕ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಇಸ್ಕರಿಯೋತ ಯೂದ](../names/judasiscariot.md), [ಯಹೂದಿಯ ನಾಯಕರು](../other/jewishleaders.md), [ಅಪೊಸ್ತಲರು](../kt/apostle.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.07:51-53](rc://*/tn/help/act/07/51)
* [ಯೋಹಾನ.06:64-65](rc://*/tn/help/jhn/06/64)
* [ಯೋಹಾನ.13:21-22](rc://*/tn/help/jhn/13/21)
* [ಮತ್ತಾಯ.10:2-4](rc://*/tn/help/mat/10/02)
* [ಮತ್ತಾಯ.26:20-22](rc://*/tn/help/mat/26/20)
## ಸತ್ಯವೇದದಿಂದ ಕೆಲವು ಉದಾಹರಣೆಗಳು :
* __[21:11](rc://*/tn/help/obs/21/11)__ ಮೆಸ್ಸಿಯನನ್ನು ಕೊಲ್ಲುವವರು ಅವನ ಬಟ್ಟೆಗಳಿಗಾಗಿ ಚೀಟಿಗಳನ್ನು ಹಾಕುವರೆಂದು ತನ್ನ ಸ್ನೇಹಿತನೇ ಆತನಿಗೆ __ದ್ರೋಹ__ ಮಾಡುವನೆಂದು ಬೇರೆ ಪ್ರವಾದಿಗಳು ಪ್ರವಾದಿಸಿದರು. ಮೆಸ್ಸಿಯನಿಗೆ __ದ್ರೋಹ__ ಮಾಡಲು ಆತನ ಸ್ನೇಹಿತನು ಮೂವತ್ತು ಬೆಳ್ಳಿ ನಾಣ್ಯಗಳನ್ನು ಸ್ವೀಕರಿಸುವನೆಂದು ಪ್ರವಾದಿಯಾದ ಜೆಕರ್ಯ ಮುಂಚಿತವಾಗಿಯೇ ಹೇಳಿದನು.
* __[38:02](rc://*/tn/help/obs/38/02)__ ಯೇಸು ಮತ್ತು ತನ್ನ ಶಿಷ್ಯರು ಯೆರೂಸಲೇಮಿಗೆ ಬಂದಾಗ,ಯಹೂದಿಯ ನಾಯಕರಿಗೆ ಆತನನ್ನು ಒಪ್ಪಿಸಲು ಯೂದ ಹಣವನ್ನು ಸ್ವಿಕರಿಸಿ ಯೇಸುವಿಗೆ __ದ್ರೋಹ__ ಮಾಡಿದನು.
* __[38:03](rc://*/tn/help/obs/38/03)__ ಮಹಾ ಯಾಜಕನ ನಾಯಕತ್ವದಲ್ಲಿ, ಯೇಸುವಿಗೆ __ದ್ರೋಹ__ ಮಾಡಲು ಮೂವತ್ತು ಬೆಳ್ಳಿ ನಾಣ್ಯಗಳನ್ನು ಯಹೂದಿ ನಾಯಕರು ಯೂದನಿಗೆ ಕೊಟ್ಟರು.
* __[38:06](rc://*/tn/help/obs/38/06)__ ಆಗ “ನಿಮ್ಮಲ್ಲಿ ಒಬ್ಬನು ನನಗೆ __ದ್ರೋಹ__ ಮಾಡುವನು” ಎಂದು ಯೇಸು ತನ್ನ ಶಿಷ್ಯರೊಂದಿಗೆ ಹೇಳಿದನು. … “ನಾನು ಈ ರೊಟ್ಟಿಯನ್ನು ಯಾರಿಗೆ ಕೊಡುವೇನೋ ಅವನೇ ನನಗೆ __ದ್ರೋಹ__ ಮಾಡುವನೆಂದು” ಯೇಸು ಹೇಳಿದನು.
* __[38:13](rc://*/tn/help/obs/38/13)__ ಮೂರನೇ ಬಾರಿ ಆತನು ಹಿಂತುರುಗಿ ಬಂದಾಗ, “ಎಚ್ಚರವಾಗಿ! ನನಗೆ __ದ್ರೋಹ__ ಮಾಡುವವನು ಇಲ್ಲಿದ್ದಾನೆ” ಎಂದು ಯೇಸು ಹೇಳಿದನು.
* __[38:14](rc://*/tn/help/obs/38/14)__ ಆಗ ಯೇಸು “ಯೂದ, ನಿನ್ನ ಮುದ್ದಿನಿಂದ ನನಗೆ __ದ್ರೋಹ__ ಮಾಡುವೆಯಾ?” ಎಂದು ಯೇಸು ಹೇಳಿದನು.
* __[39:08](rc://*/tn/help/obs/39/08)__ ಸ್ವಲ್ಪ ಸಮಯದಲ್ಲೇ, ಯಹೂದಿಯ ನಾಯಕರು ಯೇಸುವಿಗೆ ಮರಣ ಶಿಕ್ಷೆಯನ್ನು ನಿರ್ಣಯಿಸಿದ್ದಾರೆಂದು, __ದ್ರೋಹಿಯಾದ__ ಯೂದ ತಿಳಿದುಕೊಂಡನು. ಅವನು ತುಂಬ ದುಃಖ ಕ್ರಾಂತನಾಗಿ ದೂರ ಹೋಗಿ ತನ್ನನ್ನು ತಾನೇ ಕೊಂದುಕೊಂಡನು.
## ಪದ ಡೇಟಾ:
* Strong's: H7411, G3860, G4273