kn_tw/bible/kt/works.md

7.6 KiB

ಕಾರ್ಯಗಳು, ಕ್ರಿಯೆಗಳು, ಕೆಲಸ, ಕೃತ್ಯಗಳು

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಕಾರ್ಯಗಳು,” “ಕ್ರಿಯೆಗಳು,” ಮತ್ತು “ಕೃತ್ಯಗಳು,” ಎನ್ನುವ ಪದಗಳು ದೇವರು ಅಥವಾ ಜನರು ಸಾಧಾರಣವಾಗಿ ಮಾಡುವ ಕೆಲಸಗಳನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತವೆ.

  • ಸತ್ಯವೇದದಲ್ಲಿ, ಈ ಪದಗಳನ್ನು ಸಾಮಾನ್ಯವಾಗಿ ದೇವರು ಮತ್ತು ಮಾನವರನ್ನು ಉಲ್ಲೇಖಿಸಲು ಬಳಸಲಾಗುತ್ತದೆ.
  • “ಕೆಲಸ” ಎನ್ನುವ ಪದವು ಇತರ ಜನರಿಗೆ ಸೇವೆ ಮಾಡುವುದಕ್ಕೆ ಮಾಡುವ ಯಾವುದೇ ಕಾರ್ಯವನ್ನು ಅಥವಾ ಯಾವುದೇ ಕೃತ್ಯವನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
  • ದೇವರ “ಕಾರ್ಯಗಳು” ಮತ್ತು “ತನ್ನ ಕೈಗಳ ಕೆಲಸ” ಎನ್ನುವ ಮಾತುಗಳು ಆತನು ಮಾಡುವ ಅಥವಾ ಆತನು ಮಾಡಿದ ಎಲ್ಲಾ ಕಾರ್ಯಗಳನ್ನು ಸೂಚಿಸುತ್ತವೆ, ಈ ಮಾತುಗಳಲ್ಲಿ ಪ್ರಪಂಚವನ್ನು ಸೃಷ್ಟಿಸುವುದು, ಪಾಪಿಗಳನ್ನು ರಕ್ಷಿಸುವುದು, ಎಲ್ಲಾ ಜೀವಿಗಳ ಅಗತ್ಯತೆಗಳನ್ನು ಪೂರೈಸುವುದು ಮತ್ತು ಒಂದು ಸ್ಥಳದಲ್ಲಿ ಇಡೀ ವಿಶ್ವವನ್ನು ಇಟ್ಟಿರುವುದು ಒಳಗೊಂಡಿರುತ್ತವೆ. “ಕ್ರಿಯೆಗಳು” ಮತ್ತು “ಕೃತ್ಯಗಳು” ಎನ್ನುವ ಪದಗಳು “ಅದ್ಭುತ ಕೃತ್ಯಗಳು” ಅಥವಾ “ಆಶ್ಚರ್ಯ ಕ್ರಿಯೆಗಳು” ಎನ್ನುವ ಮಾತುಗಳಂತೆ ದೇವರ ಅದ್ಭುತಗಳನ್ನು ಸೂಚಿಸುವುದಕ್ಕೂ ಉಪಯೋಗಿಸಲ್ಪಟ್ಟಿರುತ್ತದೆ.
  • ಒಬ್ಬ ವ್ಯಕ್ತಿ ಮಾಡುವ ಕಾರ್ಯಗಳು ಅಥವಾ ಕ್ರಿಯೆಗಳು ಒಳ್ಳೇಯದಾಗಿರುತ್ತವೆ ಅಥವಾ ಕೆಟ್ಟದ್ದಾಗಿರುತ್ತವೆ.
  • ವಿಶ್ವಾಸಿಗಳು ಒಳ್ಳೇಯ ಕಾರ್ಯಗಳನ್ನು ಮಾಡಬೇಕೆಂದು ಪವಿತ್ರಾತ್ಮನು ಅವರನ್ನು ಬಲಗೊಳಿಸುತ್ತಾನೆ, ಇವುಗಳನ್ನೇ “ಒಳ್ಳೇಯ ಫಲ” ಎಂದು ಕರೆಯುತ್ತಾರೆ.
  • ಜನರು ತಮ್ಮ ಒಳ್ಳೇಯ ಕಾರ್ಯಗಳಿಂದ ರಕ್ಷಿಸಲ್ಪಡುವುದಿಲ್ಲ; ಅವರು ಯೇಸುವಿನಲ್ಲಿ ನಂಬಿಕೆ ಇಡುವುದರ ಮೂಲಕ ರಕ್ಷಣೆ ಹೊಂದುತ್ತಾರೆ.
  • ಒಬ್ಬ ವ್ಯಕ್ತಿಯ “ಕೆಲಸ” ಎನ್ನುವುದು ಆ ವ್ಯಕ್ತಿ ಜೀವಿಸುವುದಕ್ಕೆ ಮಾಡುವುದಾಗಿರಬಹುದು ಅಥವಾ ದೇವರಿಗೆ ಸೇವೆ ಮಾಡುವುದಾಗಿರಬಹುದು. ದೇವರು “ಕೆಲಸ ಮಾಡಿದ್ದಾರೆ” ಎಂಬುದಾಗಿ ಸತ್ಯವೇದವು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • “ಕಾರ್ಯಗಳು” ಅಥವಾ “ಕ್ರಿಯೆಗಳು” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಕೃತ್ಯಗಳು” ಅಥವಾ “ಮಾಡಿದ ಕೆಲಸಗಳು” ಎಂದಾಗಿ ಅನುವಾದ ಮಾಡಬಹುದು.
  • ದೇವರ “ಕಾರ್ಯಗಳು” ಅಥವಾ “ಕ್ರಿಯೆಗಳು” ಮತ್ತು “ತನ್ನ ಕೈ ಕೆಲಸಗಳು” ಎಂದು ಸೂಚಿಸಿದಾಗ, ಈ ಎಲ್ಲಾ ಮಾತುಗಳನ್ನು “ಆಶ್ಚರ್ಯ ಕಾರ್ಯಗಳು” ಅಥವಾ “ಶಕ್ತಿಯುತವಾದ ಕೃತ್ಯಗಳು” ಅಥವಾ “ಆತನು ಮಾಡುವ ಅತ್ಯದ್ಭುತವಾದ ಕೆಲಸಗಳು” ಎಂದೂ ಅನುವಾದ ಮಾಡಬಹುದು.
  • “ದೇವರ ಕೆಲಸ” ಎನ್ನುವ ಮಾತನ್ನು “ದೇವರು ಮಾಡುವ ಕಾರ್ಯಗಳು” ಅಥವಾ “ದೇವರು ಮಾಡುವ ಆಶ್ಚರ್ಯಕಾರ್ಯಗಳು” ಅಥವಾ “ದೇವರು ಮಾಡುವ ಅದ್ಭುತ ಕಾರ್ಯಗಳು” ಅಥವಾ “ದೇವರು ಮಾಡಿದ ಪ್ರತಿಯೊಂದು ಕಾರ್ಯ” ಎಂದೂ ಅನುವಾದ ಮಾಡಬಹುದು.
  • “ಕೆಲಸ” ಎನ್ನುವ ಪದವು ‘ಕೆಲಸಗಳು” ಎನ್ನುವ ಪದಕ್ಕೆ ಏಕವಚನ ಪದವಾಗಿರುತ್ತದೆ, ಉದಾಹರಣೆಗೆ, “ಪ್ರತಿಯೊಂದು ಒಳ್ಳೇಯ ಕೆಲಸ” ಅಥವಾ “ಪ್ರತಿಯೊಂದು ಒಳ್ಳೇಯ ಕ್ರಿಯೆ”.
  • “ಕಾರ್ಯ” ಎನ್ನುವ ಪದಕ್ಕೆ “ಸೇವೆ” ಅಥವಾ “ಕೆಲಸ” ಎನ್ನುವ ವಿಸ್ತಾರವಾದ ಅರ್ಥವನ್ನು ಹೊಂದಿರುತ್ತದೆ. ಉದಾಹರಣೆಗೆ, “ಕರ್ತನಲ್ಲಿ ನಿನ್ನ ಕೆಲಸ” ಎನ್ನುವ ಮಾತನ್ನು “ಕರ್ತನಿಗಾಗಿ ನೀನು ಏನು ಮಾಡುವಿ” ಎಂದೂ ಅನುವಾದ ಮಾಡಬಹುದು.
  • “ನಿನ್ನ ಸ್ವಂತ ಕೆಲಸವನ್ನು ಪರೀಕ್ಷಿಸಿಕೋ” ಎನ್ನುವ ಮಾತನ್ನು “ನೀನು ಮಾಡುತ್ತಿರುವುದು ದೇವರ ಚಿತ್ತವೋ ಇಲ್ಲವೋ ಎಂದು ನಿಶ್ಚಯ ಮಾಡಿಕೊಳ್ಳಿರಿ” ಅಥವಾ “ನೀವು ಮಾಡುತ್ತಿರುವುದು ದೇವರನ್ನು ಮೆಚ್ಚಿಸುವುದೋ ಇಲ್ಲವೋ ಎಂದು ನೋಡಿಕೊಳ್ಳಿರಿ” ಎಂದೂ ಅನುವಾದ ಮಾಡಬಹುದು.
  • “ಪವಿತ್ರಾತ್ಮನ ಕಾರ್ಯ” ಎನ್ನುವ ಮಾತನ್ನು “ಪವಿತ್ರಾತ್ಮನ ಅಧಿಕಾರ” ಅಥವಾ “ಪವಿತ್ರಾತ್ಮನ ಸೇವೆ” ಅಥವಾ “ಪವಿತ್ರಾತ್ಮನ ಕಾರ್ಯಗಳು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಫಲ, ಪವಿತ್ರಾತ್ಮ, ಆಶ್ಚರ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H4566, H4567, H4611, H4659, H5949, G2041