kn_tw/bible/kt/reveal.md

4.8 KiB

ಬಹಿರಂಗಪಡಿಸು, ಬಹಿರಂಗಪಡಿಸುವುದು, ಬಹಿರಂಗಪಡಿಸಿದೆ, ಪ್ರತ್ಯಕ್ಷಪಡಿಸು

ಪದದ ಅರ್ಥವಿವರಣೆ:

“ಬಹಿರಂಗಪಡಿಸು” ಎನ್ನುವ ಪದಕ್ಕೆ ಯಾವುದಾದರೊಂದನ್ನು ಎಲ್ಲರಿಗೆ ತಿಳಿಯುವಂತೆ ಮಾಡು ಎಂದರ್ಥ. “ಪ್ರತ್ಯಕ್ಷತೆ” ಎನ್ನುವುದಕ್ಕೆ ಯಾವುದಾದರೊಂದನ್ನು ಸ್ಪಷ್ಟವಾಗಿ ಗೊತ್ತುಪಡಿಸುವುದು ಎಂದರ್ಥವಾಗಿರುತ್ತದೆ.

ದೇವರು ಜನರೊಂದಿಗೆ ಮಾತನಾಡುವುದರ ಮೂಲಕ ಮತ್ತು ಅವರಿಗೆ ಬರೆದ ಸಂದೇಶಗಳ ಮೂಲಕ, ಮತ್ತು ಆತನು ಉಂಟು ಮಾಡಿದ ಸರ್ವ ಸೃಷ್ಟಿಯ ಮೂಲಕ ತನ್ನನ್ನು ತಾನು ತೋರಿಸಿಕೊಂಡಿದ್ದಾರೆ ಅಥವಾ ಬಹಿರಂಗಪಡಿಸಿಕೊಂಡಿದ್ದಾರೆ.

  • ದೇವರು ಕನಸುಗಳು ಅಥವಾ ದರ್ಶನಗಳ ಮೂಲಕ ತನ್ನನ್ನು ತಾನು ಬಹಿರಂಗಪಡಿಸುತ್ತಾನೆ ಅಥವಾ ತೋರಿಸುತ್ತಾನೆ.
  • “ಯೇಸುಕ್ರಿಸ್ತನಿಂದ ಉಂಟಾದ ಪ್ರತ್ಯಕ್ಷತೆಯ” ಮೂಲಕ ಪೌಲನು ಸುವಾರ್ತೆಯನ್ನು ಪಡೆದುಕೊಂಡಿದ್ದಾನೆಂದು ಹೇಳಿದಾಗ, ತನಗೆ ಸುವಾರ್ತೆಯನ್ನು ಯೇಸುವೇ ತನಗೆ ತಾನಾಗಿಯೇ ವಿವರಿಸಿದ್ದಾನೆಂದು ಅದರ ಅರ್ಥವಾಗಿರುತ್ತದೆ.
  • ಹೊಸ ಒಡಂಬಡಿಕೆಯಲ್ಲಿರುವ “ಪ್ರಕಟನೆ” ಗ್ರಂಥದಲ್ಲಿ ಅಂತ್ಯಕಾಲದಲ್ಲಿ ನಡೆಯುವ ಸಂಘಟನೆಗಳ ಕುರಿತಾಗಿ ದೇವರು ಬಹಿರಂಗಪಡಿಸಿದ ವಿಷಯಗಳು ಒಳಗೊಂಡಿರುತ್ತವೆ. ಆತನು ಅಪೊಸ್ತಲನಾದ ಯೋಹಾನನಿಗೆ ದರ್ಶನಗಳ ಮೂಲಕ ಅವುಗಳನ್ನು ಬಹಿರಂಗಪಡಿಸಿದನು.

ಅನುವಾದ ಸಲಹೆಗಳು:

  • “ಬಹಿರಂಗಪಡಿಸು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ತಿಳಿಯುವಂತೆ ಮಾಡು” ಅಥವಾ “ಬಯಲುಮಾಡು” ಅಥವಾ “ಸ್ಪಷ್ಟವಾಗಿ ತೋರಿಸು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಸಂದರ್ಭಾನುಸಾರವಾಗಿ, “ಪ್ರಕಟಣೆ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದೇವರಿಂದ ಸಂಭಾಷಣೆ” ಅಥವಾ “ದೇವರು ಬಹಿರಂಗಪಡಿಸಿದ ವಿಷಯಗಳು” ಅಥವಾ “ದೇವರ ಕುರಿತಾಗಿ ಬೋಧಿಸುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ. ಅನುವಾದದಲ್ಲಿ “ಬಹಿರಂಗಪಡಿಸು” ಎನ್ನುವ ಅರ್ಥವನ್ನು ಉಪಯೋಗಿಸುವುದೇ ಉತ್ತಮವಾದದ್ದು.
  • “ಪ್ರತ್ಯಕ್ಷತೆ ಇಲ್ಲದಿರುವಾಗ” ಎನ್ನುವ ಮಾತನ್ನು “ದೇವರು ಜನರಿಗೆ ತನ್ನನ್ನು ತಾನು ತೋರಿಸಿಕೊಳ್ಳದಿರುವಾಗ” ಅಥವಾ “ದೇವರು ತನ್ನ ಜನರೊಂದಿಗೆ ಮಾತನಾಡದಿರುವಾಗ” ಅಥವಾ “ದೇವರು ಜನರ ಮಧ್ಯೆದಲ್ಲಿ ಸಂಭಾಷಣೆ ಮಾಡದಿರುವಾಗ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಶುಭವಾರ್ತೆ, ಶುಭವಾರ್ತೆಗಳು, ಕನಸು, ದರ್ಶನ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H241, H1540, H1541, G601, G602, G5537