34 lines
4.8 KiB
Markdown
34 lines
4.8 KiB
Markdown
# ಬಹಿರಂಗಪಡಿಸು, ಬಹಿರಂಗಪಡಿಸುವುದು, ಬಹಿರಂಗಪಡಿಸಿದೆ, ಪ್ರತ್ಯಕ್ಷಪಡಿಸು
|
|
|
|
## ಪದದ ಅರ್ಥವಿವರಣೆ:
|
|
|
|
“ಬಹಿರಂಗಪಡಿಸು” ಎನ್ನುವ ಪದಕ್ಕೆ ಯಾವುದಾದರೊಂದನ್ನು ಎಲ್ಲರಿಗೆ ತಿಳಿಯುವಂತೆ ಮಾಡು ಎಂದರ್ಥ. “ಪ್ರತ್ಯಕ್ಷತೆ” ಎನ್ನುವುದಕ್ಕೆ ಯಾವುದಾದರೊಂದನ್ನು ಸ್ಪಷ್ಟವಾಗಿ ಗೊತ್ತುಪಡಿಸುವುದು ಎಂದರ್ಥವಾಗಿರುತ್ತದೆ.
|
|
|
|
ದೇವರು ಜನರೊಂದಿಗೆ ಮಾತನಾಡುವುದರ ಮೂಲಕ ಮತ್ತು ಅವರಿಗೆ ಬರೆದ ಸಂದೇಶಗಳ ಮೂಲಕ, ಮತ್ತು ಆತನು ಉಂಟು ಮಾಡಿದ ಸರ್ವ ಸೃಷ್ಟಿಯ ಮೂಲಕ ತನ್ನನ್ನು ತಾನು ತೋರಿಸಿಕೊಂಡಿದ್ದಾರೆ ಅಥವಾ ಬಹಿರಂಗಪಡಿಸಿಕೊಂಡಿದ್ದಾರೆ.
|
|
|
|
* ದೇವರು ಕನಸುಗಳು ಅಥವಾ ದರ್ಶನಗಳ ಮೂಲಕ ತನ್ನನ್ನು ತಾನು ಬಹಿರಂಗಪಡಿಸುತ್ತಾನೆ ಅಥವಾ ತೋರಿಸುತ್ತಾನೆ.
|
|
* “ಯೇಸುಕ್ರಿಸ್ತನಿಂದ ಉಂಟಾದ ಪ್ರತ್ಯಕ್ಷತೆಯ” ಮೂಲಕ ಪೌಲನು ಸುವಾರ್ತೆಯನ್ನು ಪಡೆದುಕೊಂಡಿದ್ದಾನೆಂದು ಹೇಳಿದಾಗ, ತನಗೆ ಸುವಾರ್ತೆಯನ್ನು ಯೇಸುವೇ ತನಗೆ ತಾನಾಗಿಯೇ ವಿವರಿಸಿದ್ದಾನೆಂದು ಅದರ ಅರ್ಥವಾಗಿರುತ್ತದೆ.
|
|
* ಹೊಸ ಒಡಂಬಡಿಕೆಯಲ್ಲಿರುವ “ಪ್ರಕಟನೆ” ಗ್ರಂಥದಲ್ಲಿ ಅಂತ್ಯಕಾಲದಲ್ಲಿ ನಡೆಯುವ ಸಂಘಟನೆಗಳ ಕುರಿತಾಗಿ ದೇವರು ಬಹಿರಂಗಪಡಿಸಿದ ವಿಷಯಗಳು ಒಳಗೊಂಡಿರುತ್ತವೆ. ಆತನು ಅಪೊಸ್ತಲನಾದ ಯೋಹಾನನಿಗೆ ದರ್ಶನಗಳ ಮೂಲಕ ಅವುಗಳನ್ನು ಬಹಿರಂಗಪಡಿಸಿದನು.
|
|
|
|
## ಅನುವಾದ ಸಲಹೆಗಳು:
|
|
|
|
* “ಬಹಿರಂಗಪಡಿಸು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ತಿಳಿಯುವಂತೆ ಮಾಡು” ಅಥವಾ “ಬಯಲುಮಾಡು” ಅಥವಾ “ಸ್ಪಷ್ಟವಾಗಿ ತೋರಿಸು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
|
|
* ಸಂದರ್ಭಾನುಸಾರವಾಗಿ, “ಪ್ರಕಟಣೆ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದೇವರಿಂದ ಸಂಭಾಷಣೆ” ಅಥವಾ “ದೇವರು ಬಹಿರಂಗಪಡಿಸಿದ ವಿಷಯಗಳು” ಅಥವಾ “ದೇವರ ಕುರಿತಾಗಿ ಬೋಧಿಸುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ. ಅನುವಾದದಲ್ಲಿ “ಬಹಿರಂಗಪಡಿಸು” ಎನ್ನುವ ಅರ್ಥವನ್ನು ಉಪಯೋಗಿಸುವುದೇ ಉತ್ತಮವಾದದ್ದು.
|
|
* “ಪ್ರತ್ಯಕ್ಷತೆ ಇಲ್ಲದಿರುವಾಗ” ಎನ್ನುವ ಮಾತನ್ನು “ದೇವರು ಜನರಿಗೆ ತನ್ನನ್ನು ತಾನು ತೋರಿಸಿಕೊಳ್ಳದಿರುವಾಗ” ಅಥವಾ “ದೇವರು ತನ್ನ ಜನರೊಂದಿಗೆ ಮಾತನಾಡದಿರುವಾಗ” ಅಥವಾ “ದೇವರು ಜನರ ಮಧ್ಯೆದಲ್ಲಿ ಸಂಭಾಷಣೆ ಮಾಡದಿರುವಾಗ” ಎಂದೂ ಅನುವಾದ ಮಾಡಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ಶುಭವಾರ್ತೆ](../kt/goodnews.md), [ಶುಭವಾರ್ತೆಗಳು](../kt/goodnews.md), [ಕನಸು](../other/dream.md), [ದರ್ಶನ](../other/vision.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ದಾನಿ.11:1-2](rc://*/tn/help/dan/11/01)
|
|
* [ಎಫೆಸ.03:3-5](rc://*/tn/help/eph/03/03)
|
|
* [ಗಲಾತ್ಯ.01:11-12](rc://*/tn/help/gal/01/11)
|
|
* [ಪ್ರಲಾಪ.02:13-14](rc://*/tn/help/lam/02/13)
|
|
* [ಮತ್ತಾಯ.10:26-27](rc://*/tn/help/mat/10/26)
|
|
* [ಫಿಲಿಪ್ಪಿ.03:15-16](rc://*/tn/help/php/03/15)
|
|
* [ಪ್ರಕ.01:1-3](rc://*/tn/help/rev/01/01)
|
|
|
|
## ಪದ ಡೇಟಾ:
|
|
|
|
* Strong's: H241, H1540, H1541, G601, G602, G5537
|