1.9 KiB
1.9 KiB
ರಕ್ತಬೋಳ
ಅರ್ಥವಿವರಣೆ:
ರಕ್ತಬೋಳ ಎನ್ನುವುದು ಆಫ್ರಿಕಾ ಮತ್ತು ಏಷ್ಯಗಳಲ್ಲಿ ಬೆಳೆಯುವ ಸುಗಂಧ ಸಸ್ಯಗಳಿಂದ ತಯಾರಿಸುವ ಸುಗಂಧ ದ್ರವ್ಯ ಅಥವಾ ತೈಲವಾಗಿರುತ್ತದೆ. ಇದು ಸಾಂಬ್ರಾಣಿಗೆ ಸಂಬಂಧಪಟ್ಟಿರುತ್ತದೆ.
- ರಕ್ತಬೋಳವನ್ನು ಧೂಪದ್ರವ್ಯ, ಸುಗಂಧ ಮತ್ತು ಔಷಧವನ್ನು ತಯಾರಿಸುವುದಕ್ಕೆ ಉಪಯೋಗಿಸುತ್ತಾರೆ ಮತ್ತು ಶವಗಳನ್ನು ಸಮಾಧಿಗೆ ಸಿದ್ಧಗೊಳಿಸುವುದಕ್ಕೆ ಕೂಡ ಉಪಯೋಗಿಸುತ್ತಾರೆ.
- ಯೇಸುವು ಜನಿಸಿದಾಗ ಆತನಿಗೆ ಜೋಯಿಸರು ಕೊಟ್ಟ ಉಡುಗೊರೆಗಳಲ್ಲಿ ರಕ್ತಬೋಳವು ಒಂದಾಗಿರುತ್ತದೆ.
- ಯೇಸುವನ್ನು ಶಿಲುಬೆಗೆ ಏರಿಸಿದಾಗ ನೋವನ್ನು ಕಡಿಮೆ ಮಾಡುವುದಕ್ಕೆ ರಕ್ತಬೋಳದಲ್ಲಿ ದ್ರಾಕ್ಷಾರಸವನ್ನು ಕಲಸಿಕೊಟ್ಟಿದ್ದರು.
(ಇವುಗಳನ್ನು ಸಹ ನೋಡಿರಿ : ಸಾಂಬ್ರಾಣಿ, ಜೋಯಿಸರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದದ ಡೇಟಾ:
- Strong's: H3910, H4753, G34640, G46660, G46690