3.1 KiB
3.1 KiB
ವಿದ್ವಾಂಸರು, ಜೋಯಿಸರು
ಪದದ ಅರ್ಥವಿವರಣೆ:
ಯೇಸುವಿನ ಜನನ ಕ್ರಮದಲ್ಲಿ ದಾಖಲಿಸಿದ ಮತ್ತಾಯನ ಸುವಾರ್ತೆಯಲ್ಲಿ “ಕಲಿತವರು” ಅಥವಾ “ವಿದ್ಯಾವಂತರು” ಆಗಿರುವ ಮನುಷ್ಯರಾಗಿರುವ “ಜೋಯಿಸರು” ಯೇಸುವು ಬೆತ್ಲೆಹೇಮಿನಲ್ಲಿ ಜನಿಸಿದನಂತರ ಆತನಿಗೆ ಬಹುಮಾನಗಳನ್ನು ತೆಗೆದುಕೊಂಡುಬಂದಿದ್ದರು. ನಕ್ಷತ್ರಗಳನ್ನು ಅಧ್ಯಯನ ಮಾಡಿದ ಅನೇಕಮಂದಿ “ಜೋಯಿಸರು” ಇದ್ದಿರುತ್ತಾರೆ.
- ಈ ಮನುಷ್ಯರು ಎಷ್ಟೋ ದೂರದಲ್ಲಿರುವ ಬೇರೊಂದು ದೇಶದಿಂದ ಇಸ್ರಾಯೇಲ್ ಪೂರ್ವ ದಿಕ್ಕಿಗೆ ಪ್ರಯಾಣ ಮಾಡಿಕೊಂಡು ಬಂದಿದ್ದರು. ಅವರು ಯಾರೆಂದು ಅಥವಾ ಅವರು ಎಲ್ಲಿಂದ ಬಂದವರೆಂದು ಖಚಿತವಾಗಿ ಗೊತ್ತಿಲ್ಲ. ಆದರೆ ಅವರು ಖಂಡಿತವಾಗಿ ನಕ್ಷತ್ರಗಳನ್ನು ಅಧ್ಯಯನ ಮಾಡಿದ ಪಂಡಿತರಾಗಿರುತ್ತಾರೆ.
- ಅವರು ಬಹುಶಃ ದಾನಿಯೇಲನ ಕಾಲದಲ್ಲಿ ಬಾಬೆಲೋನಿಯ ಅರಸರಿಗೆ ಸೇವೆ ಮಾಡಿದ ಜ್ಞಾನಿಗಳ ಸಂತಾನದವರಾಗಿರಬಹುದು ಮತ್ತು ಅವರು ಅನೇಕ ವಿಷಯಗಳಲ್ಲಿ ತರಬೇತಿಯನ್ನು ಪಡೆದಿರಬಹುದು, ಅದರಲ್ಲಿ ನಕ್ಷತ್ರಗಳ ಅಧ್ಯಯನವು ಮತ್ತು ಕನಸುಗಳಿಗೆ ಅರ್ಥವಿವರಣೆ ಹೇಳುವುದೂ ಇರಬಹುದು.
- ಸಾಂಪ್ರದಾಯಿಕವಾಗಿ ಮೂವರು ಜೋಯಿಸರು ಅಥವಾ ವಿದ್ಯಾವಂತರು ಇದ್ದಾರೆಂದು ಹೇಳಲ್ಪಟ್ಟಿದೆ, ಯಾಕಂದರೆ ಅವರು ಮೂರು ಬಹುಮಾನಗಳನ್ನು ಮಾತ್ರವೇ ಯೇಸುವಿಗೆ ತೆಗೆದುಕೊಂಡು ಬಂದಿದ್ದರು. ಏನೇಯಾಗಲಿ, ಸತ್ಯವೇದದಲ್ಲಿ ಮಾತ್ರ ಅವರು ಎಷ್ಟು ಮಂದಿ ಬಂದಿದ್ದಾರೆಂದು ಸಂಖ್ಯೆಗೆ ಅಧಾರಗಳಿಲ್ಲ.
(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನಿಯ, ಬೆತ್ಲೆಹೇಮ್, ದಾನಿಯೇಲ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1505, G3097