kn_tw/bible/other/learnedmen.md

24 lines
3.1 KiB
Markdown

# ವಿದ್ವಾಂಸರು, ಜೋಯಿಸರು
## ಪದದ ಅರ್ಥವಿವರಣೆ:
ಯೇಸುವಿನ ಜನನ ಕ್ರಮದಲ್ಲಿ ದಾಖಲಿಸಿದ ಮತ್ತಾಯನ ಸುವಾರ್ತೆಯಲ್ಲಿ “ಕಲಿತವರು” ಅಥವಾ “ವಿದ್ಯಾವಂತರು” ಆಗಿರುವ ಮನುಷ್ಯರಾಗಿರುವ “ಜೋಯಿಸರು” ಯೇಸುವು ಬೆತ್ಲೆಹೇಮಿನಲ್ಲಿ ಜನಿಸಿದನಂತರ ಆತನಿಗೆ ಬಹುಮಾನಗಳನ್ನು ತೆಗೆದುಕೊಂಡುಬಂದಿದ್ದರು. ನಕ್ಷತ್ರಗಳನ್ನು ಅಧ್ಯಯನ ಮಾಡಿದ ಅನೇಕಮಂದಿ “ಜೋಯಿಸರು” ಇದ್ದಿರುತ್ತಾರೆ.
* ಈ ಮನುಷ್ಯರು ಎಷ್ಟೋ ದೂರದಲ್ಲಿರುವ ಬೇರೊಂದು ದೇಶದಿಂದ ಇಸ್ರಾಯೇಲ್ ಪೂರ್ವ ದಿಕ್ಕಿಗೆ ಪ್ರಯಾಣ ಮಾಡಿಕೊಂಡು ಬಂದಿದ್ದರು. ಅವರು ಯಾರೆಂದು ಅಥವಾ ಅವರು ಎಲ್ಲಿಂದ ಬಂದವರೆಂದು ಖಚಿತವಾಗಿ ಗೊತ್ತಿಲ್ಲ. ಆದರೆ ಅವರು ಖಂಡಿತವಾಗಿ ನಕ್ಷತ್ರಗಳನ್ನು ಅಧ್ಯಯನ ಮಾಡಿದ ಪಂಡಿತರಾಗಿರುತ್ತಾರೆ.
* ಅವರು ಬಹುಶಃ ದಾನಿಯೇಲನ ಕಾಲದಲ್ಲಿ ಬಾಬೆಲೋನಿಯ ಅರಸರಿಗೆ ಸೇವೆ ಮಾಡಿದ ಜ್ಞಾನಿಗಳ ಸಂತಾನದವರಾಗಿರಬಹುದು ಮತ್ತು ಅವರು ಅನೇಕ ವಿಷಯಗಳಲ್ಲಿ ತರಬೇತಿಯನ್ನು ಪಡೆದಿರಬಹುದು, ಅದರಲ್ಲಿ ನಕ್ಷತ್ರಗಳ ಅಧ್ಯಯನವು ಮತ್ತು ಕನಸುಗಳಿಗೆ ಅರ್ಥವಿವರಣೆ ಹೇಳುವುದೂ ಇರಬಹುದು.
* ಸಾಂಪ್ರದಾಯಿಕವಾಗಿ ಮೂವರು ಜೋಯಿಸರು ಅಥವಾ ವಿದ್ಯಾವಂತರು ಇದ್ದಾರೆಂದು ಹೇಳಲ್ಪಟ್ಟಿದೆ, ಯಾಕಂದರೆ ಅವರು ಮೂರು ಬಹುಮಾನಗಳನ್ನು ಮಾತ್ರವೇ ಯೇಸುವಿಗೆ ತೆಗೆದುಕೊಂಡು ಬಂದಿದ್ದರು. ಏನೇಯಾಗಲಿ, ಸತ್ಯವೇದದಲ್ಲಿ ಮಾತ್ರ ಅವರು ಎಷ್ಟು ಮಂದಿ ಬಂದಿದ್ದಾರೆಂದು ಸಂಖ್ಯೆಗೆ ಅಧಾರಗಳಿಲ್ಲ.
(ಈ ಪದಗಳನ್ನು ಸಹ ನೋಡಿರಿ : [ಬಾಬೆಲೋನಿಯ](../names/babylon.md), [ಬೆತ್ಲೆಹೇಮ್](../names/bethlehem.md), [ದಾನಿಯೇಲ](../names/daniel.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ದಾನಿ.02:27-28](rc://*/tn/help/dan/02/27)
* [ದಾನಿ.05:7](rc://*/tn/help/dan/05/07)
* [ಮತ್ತಾಯ.02:1-3](rc://*/tn/help/mat/02/01)
* [ಮತ್ತಾಯ.02:7-8](rc://*/tn/help/mat/02/07)
* [ಮತ್ತಾಯ.02:16](rc://*/tn/help/mat/02/16)
## ಪದ ಡೇಟಾ:
* Strong's: H1505, G3097