kn_tw/bible/kt/love.md

16 KiB

ಪ್ರೀತಿ, ಪ್ರೀತಿಸುವ, ಪ್ರೀತಿಸುವುದು, ಪ್ರೀತಿಸಲ್ಪಟ್ಟಿದೆ

ಪದದ ಅರ್ಥವಿವರಣೆ:

ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಎಂದರೆ ಆ ವ್ಯಕ್ತಿಯ ಕುರಿತಾಗಿ ಕಾಳಜಿ ವಹಿಸುವುದು ಮತ್ತು ಆ ವ್ಯಕ್ತಿಗೆ ಪ್ರಯೋಜನಕರವಾಗುವ ಕಾರ್ಯಗಳನ್ನು ಮಾಡುವುದು ಎಂದರ್ಥ. “ಪ್ರೀತಿ” ಎನ್ನುವ ಪದಕ್ಕೆ ವಿಭಿನ್ನ ಅರ್ಥಗಳಿರುತ್ತವೆ, ಕೆಲವೊಂದು ಭಾಷೆಗಳಲ್ಲಿ ವಿಭಿನ್ನ ಪದಗಳನ್ನು ಉಪಯೋಗಿಸಿ ಪ್ರೀತಿಯನ್ನು ವ್ಯಕ್ತಪಡಿಸಬಹುದು:

  1. ದೇವರಿಂದ ಬರುವ ಪ್ರೀತಿ ತನ್ನ ವಿಷಯದಲ್ಲಿ ಯಾವ ಪ್ರಯೋಜನವನು ಹೊಂದದಿದ್ದರೂ ಇತರರ ಒಳ್ಳೇಯ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ರೀತಿಯ ಪ್ರೀತಿ ಇತರರು ಏನು ಮಾಡಿದ್ದಾರೆಂದು ಯೋಚಿಸದೇ ಅವರಿಗೋಸ್ಕರ ಪ್ರೀತಿಯನ್ನು ಹಂಚುತ್ತದೆ. ದೇವರೇ ಪ್ರೀತಿಯಾಗಿದ್ದಾನೆ ಮತ್ತು ನಿಜವಾದ ಪ್ರೀತಿಗೆ ಆತನೇ ಆಧಾರವಾಗಿದ್ದಾನೆ.
  • ಪಾಪ ಮರಣಗಳಿಂದ ರಕ್ಷಿಸುವ ಕ್ರಮದಲ್ಲಿ ಆತನ ಜೀವನವನ್ನು ಸರ್ವಾಂಗಹೋಮ ಮಾಡುವುದರ ಮೂಲಕ ಈ ರೀತಿಯಾದ ಪ್ರೀತಿಯನ್ನೇ ಯೇಸು ತೋರಿಸಿದ್ದಾನೆ. ತ್ಯಾಗಪೂರಿತವಾಗಿ ಇತರರನ್ನು ಪ್ರೀತಿಸಬೇಕೆಂದು ಆತನು ತನ್ನ ಶಿಷ್ಯರಿಗೆ ಹೇಳಿದನು.
  • ಈ ರೀತಿಯಾದ ಪ್ರೀತಿಯಿಂದ ಜನರು ಇತರರನ್ನು ಪ್ರೀತಿಸಿದರೆ, ಇತರರು ವೇಗವಾಗಿ ಆಲೋಚನೆ ಮಾಡುವಂತೆ ಅವರು ತೋರಿಸಿದವರಾಗಿರುತ್ತದೆ. ಈ ರೀತಿಯಾದ ಪ್ರೀತಿಯಲ್ಲಿ ವಿಶೇಷವಾಗಿ ಇತರರನ್ನು ಕ್ಷಮಿಸುವುದು ಒಳಗೊಂಡಿರುತ್ತದೆ.
  • ಯುಎಲ್ ಟಿ ಯಲ್ಲಿ “ಪ್ರೀತಿ” ಎನ್ನುವ ಪದವು ಈ ರೀತಿಯಾದ ತ್ಯಾಗಪೂರಿತವಾದ ಪ್ರೀತಿಯನ್ನೇ ಸೂಚಿಸುತ್ತದೆ, ಈ ಪದಕ್ಕೆ ಬೇರೆಯಾದ ಅರ್ಥವನ್ನು ಅನುವಾದ ಮಾಡುವದರಲ್ಲಿ ಸೂಚಿಸದಿದ್ದರೆ ಹೊರತು ಬೇರೆ ಅರ್ಥ ಇರುವುದಿಲ್ಲ.
  1. ಹೊಸ ಒಡಂಬಡಿಕೆಯಲ್ಲಿ ಇನ್ನೊಂದು ಪದವು ಸಹೋದರ ಪ್ರೀತಿಯಯನ್ನು, ಅಥವಾ ಸ್ನೇಹಿತನಿಗಾಗಿ ತೋರಿಸುವ ಪ್ರೀತಿ ಅಥವಾ ಕುಟುಂಬ ಸದಸ್ಯರ ಪ್ರೀತಿಯನ್ನು ಸೂಚಿಸುತ್ತದೆ.
  • ಈ ಪದವು ಸ್ನೇಹಿತರು ಅಥವಾ ಬಂಧುಗಳ ಮಧ್ಯೆದಲ್ಲಿರುವ ಸ್ವಾಭಾವಿಕವಾದ ಮನುಷ್ಯರ ಪ್ರೀತಿಯನ್ನು ಸೂಚಿಸುತ್ತದೆ.
  • “ಅವರು ಔತಣ ಕೂಟದಲ್ಲಿ ಪ್ರಾಮುಖ್ಯವಾದ ಆಸನಗಳಲ್ಲಿ ಕುಳಿತುಕೊಳ್ಳಲು ಇಷ್ಟಪಡುತ್ತಾರೆ” ಇಂತಹ ಸಂದರ್ಭಗಳಲ್ಲಿ ಈ ಪದಗಳನ್ನು ಬಳಸಬಹುದು. "ಹೆಚ್ಚಾಗಿ ಇಷ್ಟಪಡುತ್ತಾರೆ” ಅಥವಾ “ಬಹಳ ಹೆಚ್ಚಾಗಿ ಅಪೇಕ್ಷಿಸುತ್ತಾರೆ” ಎಂದು ಇದರ ಅರ್ಥವಾಗಿರುತ್ತದೆ.
  1. “ಪ್ರೀತಿ” ಎನ್ನುವ ಪದವು ಒಬ್ಬ ಪುರುಷನಿಗೆ ಮತ್ತು ಒಬ್ಬ ಸ್ತ್ರೀಯಳ ಮಧ್ಯೆದಲ್ಲಿರುವ ಪ್ರಣಯ ಪ್ರೇಮವನ್ನೂ ಸೂಚಿಸುತ್ತದೆ.
  2. “ಯಾಕೋಬನನ್ನು ನಾನು ಪ್ರೀತಿಸಿದೆ, ಆದರೆ ಏಸಾವನನ್ನು ದ್ವೇಷಿಸಿದೆ” ಎನ್ನುವ ಅಲಂಕಾರಿಕ ಮಾತಿನಲ್ಲಿರುವ “ಪ್ರೀತಿ” ಎನ್ನುವ ಪದವು ದೇವರು ಯಾಕೋಬನೊಂದಿಗೆ ಮಾಡಿರುವ ಒಡಂಬಡಿಕಲ್ಲಿರುವುದಕ್ಕೆ ಆತನು ಯಾಕೋಬನನ್ನು ಆಯ್ಕೆಮಾಡಿಕೊಂಡಿರುವುದನ್ನು ಸೂಚಿಸುತ್ತದೆ. ಇದನ್ನು ‘ಆಯ್ಕೆಮಾಡಲಾಗಿದೆ” ಎಂದೂ ಅನುವಾದ ಮಾಡಬಹುದು. ಏಸಾವನು ಕೂಡ ದೇವರಿಂದ ಆಶೀರ್ವಾದವನ್ನು ಹೊಂದಿಕೊಂಡಿದ್ದರೂ, ಅವನು ಒಡಂಬಡಿಕೆಯಲ್ಲಿರುವ ಧನ್ಯತೆಯು ಸಿಕ್ಕಿರಲಿಲ್ಲ. “ದ್ವೇಷಿಸಿದ್ದೇನೆ” ಎನ್ನುವ ಪದವು “ತಿರಸ್ಕರಿಸಿದ್ದೇನೆ” ಅಥವಾ “ಆಯ್ಕೆ ಮಾಡಿಕೊಂಡಿಲ್ಲ” ಎಂದರ್ಥ ಬರುವ ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ.

ಅನುವಾದ ಸಲಹೆಗಳು:

  • ಅನುವಾದದ ಸೂಚನೆಯಲ್ಲಿ ಹೇಳದಿದ್ದರೆ ಹೊರತು, ಯುಎಲ್.ಟ್ಲ್ಲಿಿರುವ “ಪ್ರೀತಿ” ಎನ್ನುವ ಪದವು ದೇವರಿಂದ ಬರುವ ತ್ಯಾಗಪೂರಿತವಾದ ಪ್ರೀತಿಯನ್ನು ಸೂಚಿಸುತ್ತದೆ.
  • ಕೆಲವೊಂದು ಭಾಷೆಗಳಲ್ಲಿ ಸ್ವಾರ್ಥರಹಿತವಾದ ಈ ಕ್ರಿಯೆಗಳಿಗೆ ವಿಶೇಷವಾದ ಪದವನ್ನು ಉಪಯೋಗಿಸುತ್ತಿರಬಹುದು, ದೇವರ ಬಳಿರುವ ತ್ಯಾಗಪೂರಿತವಾದ ಪ್ರೀತಿಯನ್ನು ಸೂಚಿಸುತ್ತವೆ. ಈ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ, “ಭಕ್ತಿಯುಳ್ಳ, ನಂಬಿಗಸ್ತ ಆರೈಕೆ” ಅಥವಾ “ಸ್ವಾರ್ಥರಹಿತವಾಗಿ ಆರೈಸುವುದು” ಅಥವಾ “ದೇವರಿಂದ ಬಂದ ಪ್ರೀತಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ. ದೇವರ ಪ್ರೀತಿಯನ್ನು ಅನುವಾದ ಮಾಡುವುದಕ್ಕೆ ಉಪಯೋಗಿಸುವ ಪದವು ಇತರರ ಪ್ರಯೋಜನೆಗಳಿಗಾಗಿ ಒಬ್ಬರ ಸ್ವಂತ ಇಷ್ಟಗಳನ್ನು ಕೂಡ ಬಿಟ್ಟುಕೊಡುವ ಅರ್ಥವನ್ನು ಮತ್ತು ಇತರರು ಏನು ಮಾಡಿದರೂ ಅದನ್ನು ಲೆಕ್ಕಿಸಿದೆ ಅವರನ್ನು ಪ್ರೀತಿಸುವುದನ್ನು ಒಳಗೊಂಡಿರಬೇಕು.
  • ಕೆಲವೊಂದು ಸಲ ಆಂಗ್ಲದಲ್ಲಿರುವ “ಪ್ರೀತಿ” ಎನ್ನುವ ಪದವು ಸ್ನೇಹಿತರಿಗಾಗಿ ಮತ್ತು ಕುಟುಂಬ ಸದಸ್ಯರಿಗಾಗಿ ಆಳವಾದ ಆರೈಕೆಯನ್ನು ವಿವರಿಸುತ್ತದೆ. ಕೆಲವೊಂದು ಭಾಷೆಗಳಲ್ಲಿ “ಬಹಳ ಹೆಚ್ಚಾಗಿ” ಅಥವಾ “ಆರೈಸು” ಅಥವಾ “ಬಲವಾದ ಪ್ರೀತಿಯನ್ನು ಹೊಂದಿರು” ಎನ್ನುವ ಅರ್ಥ ಬರುವ ಮಾತಿನೊಂದಿಗೆ ಅಥವಾ ಪದದೊಂದಿಗೆ ಈ ಪದವನ್ನು ಅನುವಾದ ಮಾಡಬಹುದು.
  • ಯಾವುದಾದರೊಂದರ ಕುರಿತಾಗಿ ಬಲವಾದ ಪ್ರಾಮುಖ್ಯತೆಯನ್ನು ವ್ಯಕ್ತಪಡಿಸುವುದಕ್ಕೆ “ಪ್ರೀತಿ” ಎನ್ನುವ ಪದವನ್ನು ಉಪಯೋಗಿಸುವ ಸಂದರ್ಭಗಳಲ್ಲಿ, ಇದನ್ನು “ಬಲವಾಗಿ ಆದ್ಯತೆ” ಅಥವಾ “ಬಹಳ ಹೆಚ್ಚಾಗಿ” ಅಥವಾ “ಬಹಳ ಹೆಚ್ಚಾಗಿ ಅಪೇಕ್ಷಿಸುವುದು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಭಾಷೆಗಳಲ್ಲಿ ಗಂಡ ಮತ್ತು ಹೆಂಡತಿಯ ಮಧ್ಯೆದಲ್ಲಿರುವ ಲೈಂಗಿಕವಾದ ಅಥವಾ ಪ್ರಣಯದ ಪ್ರೀತಿಯನ್ನು ಸೂಚಿಸುವ ಪ್ರತ್ಯೇಕವಾದ ಪದವನ್ನು ಹೊಂದಿರುತ್ತವೆ.
  • ಅನೇಕ ಭಾಷೆಗಳಲ್ಲಿ “ಪ್ರೀತಿ”ಯನ್ನು ಕ್ರಿಯಾರೂಪಕದಲ್ಲಿ ವ್ಯಕ್ತಗೊಳಿಸಬೇಕಾಗಿರುತ್ತದೆ. ಉದಾಹರಣೆಗಾಗಿ, ಅವರು “ಪ್ರೀತಿ ಎಂದರೆ ಸಹನೆ, ಪ್ರೀತಿ ಎಂದರೆ ದಯೆ” ಎಂದು ಅನುವಾದ ಮಾಡುವುದಾದರೆ, “ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿ ಮಾಡುವದಾದರೆ, ಆ ವ್ಯಕ್ತಿ ಅವನೊಂದಿಗೆ ಸಹನೆಯಿಂದ ಮತ್ತು ದಯೆಯಿಂದ ಇರುತ್ತಾನೆ” ಎಂದರ್ಥ.

(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆ, ಮರಣ, ತ್ಯಾಗ, ರಕ್ಷಿಸು, ಪಾಪ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 27:02 “ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣ ಹೃದಯದಿಂದಲೂ, ಪೂರ್ಣ ಪ್ರಾಣದಿಂದಲೂ, ಪೂರ್ಣ ಬಲದಿಂದಲೂ ಮತ್ತು ಪೂರ್ಣ ಮನಸ್ಸಿನಿಂದಲೂ ___ ಪ್ರೀತಿಸು ___ “ ಮತ್ತು ನಿನ್ನಂತೆಯೇ ನಿನ್ನ ನೆರೆಹೊರೆಯವರನ್ನು ___ ಪ್ರೀತಿಸು ___ “ ಎಂದು ದೇವರ ಧರ್ಮಶಾಸ್ತ್ರದಲ್ಲಿದೆಯಲ್ಲ ಎಂದು ಧರ್ಮಶಾಸ್ತ್ರದ ಪಂಡಿತನು ಉತ್ತರಿಸಿದನು.
  • 33:08 “ಮುಳ್ಳಿನ ನೆಲವು ಒಬ್ಬ ವ್ಯಕ್ತಿ ದೇವರ ವಾಕ್ಯವನ್ನು ಕೇಳಿದವನನ್ನು, ಕಾಲ ಕಳೆಯುತ್ತಿರುವಂತೆ ಅವನು ದೇವರಿಗಾಗಿರುವ __ ಪ್ರೀತಿಯೊಳಗಿಂದ __ ಜೀವನದ ಸಂತೋಷಗಳು, ಸಂಪತ್ತುಗಳು ಮತ್ತು ಆರೈಕೆಗಳು ಎಲ್ಲಾ ಅಳಿದು ಹೋಗುತ್ತವೆ.”
  • 36:05 ಪೇತ್ರನು ಮಾತನಾಡುತ್ತಿರುವಾಗ, ಒಂದು ಪ್ರಕಾಶಮಾನವಾದ ಮೇಘವು ಅವರ ಮೇಲೆ ಇಳಿದು ಬಂದಾಗ, ಆ ಮೇಘದೊಳಗಿಂದ “ಈತನು ನನ್ನ ಪ್ರಿಯ ಮಗನು, ಈತನನ್ನು ನಾನು ಬಹಳವಾಗಿ ಮೆಚ್ಚಿದ್ದೇನೆ” ಎನ್ನುವ ಸ್ವರವು ಕೇಳಿಬಂತು.
  • 39:10 “ಸತ್ಯವನ್ನು ___ ಪ್ರೀತಿಸುವ ___ ಪ್ರತಿಯೊಬ್ಬರೂ ನನ್ನ ಮಾತನ್ನು ಕೇಳುತ್ತಾರೆ.”
  • 47:01 ಆಕೆ (ಲುದ್ಯಳ) ದೇವರನ್ನು ___ ಪ್ರೀತಿಸಿದ್ದಳು ___ ಮತ್ತು ಆರಾಧನೆ ಮಾಡಿದ್ದಳು.
  • 48:01 ದೇವರು ಸರ್ವಸೃಷ್ಟಿಯನ್ನು ಉಂಟುಮಾಡಿದಾಗ, ಪ್ರತಿಯೊಂದೂ ಪರಿಪೂರ್ಣವಾಗಿದ್ದಿತ್ತು. ಅವಾಗ ಪಾಪವೇ ಇದ್ದಿರಲಿಲ್ಲ. ಆದಾಮನು ಮತ್ತು ಹವ್ವಳು ಒಬ್ಬರಿಗೊಬ್ಬರು ___ ಪ್ರೀತಿಸಿಕೊಂಡಿದ್ದರು ___ ಮತ್ತು ದೇವರನ್ನು ___ ಪ್ರೀತಿಸಿದ್ದರು ___.
  • 49:03 ನಿನ್ನನು ನೀನು ಪ್ರೀತಿಸಿಕೊಳ್ಳುವ ರೀತಿಯಲ್ಲಿಯೇ ಇತರ ಜನರನ್ನು ನೀನು ___ ಪ್ರೀತಿಸಬೇಕಾಗಿರುತ್ತದೆ ___ ಎಂದು ಆತನು (ಯೇಸು) ಹೇಳಿದನು.
  • 49:04 ನಿನ್ನ ಸಂಪತ್ತಿಗಿಂತಲೂ, ನೀನು ___ ಪ್ರೀತಿ ___ ಮಾಡುವ ಬೇರೊಂದು ವಿಷಯಗಿಂತಲೂ ನೀನು ಹೆಚ್ಚಾಗಿ ದೇವರನ್ನು ___ ಪ್ರೀತಿ ___ ಮಾಡಬೇಕಾಗಿರುತ್ತದೆಯೆಂದು ಆತನು (ಯೇಸು) ಹೇಳಿದನು.
  • 49:07 ದೇವರು ಪಾಪಿಗಳನ್ನು ಹೆಚ್ಚಾಗಿ ___ ಪ್ರೀತಿ ___ ಮಾಡಿದ್ದಾರೆಂದು ಯೇಸು ಹೇಳಿದನು.
  • 49:09 ಲೋಕದಲ್ಲಿರುವ ಪ್ರತಿಯೊಬ್ಬರನ್ನು ದೇವರು ಹೆಚ್ಚಾಗಿ ___ ಪ್ರೀತಿಸಿದ್ದಾರೆ ___, ಅದು ಹೇಗೆಂದರೆ ತನ್ನ ಒಬ್ಬನೇ ಮಗನಾದ ಯೇಸುವನ್ನು ಕೊಡುವಷ್ಟು ಪ್ರೀತಿ ಮಾಡಿದ್ದಾರೆ, ಈ ಯೇಸುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬರು ತಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ಹೊಂದುವುದಿಲ್ಲ, ಆದರೆ ಸದಾಕಾಲವೂ ದೇವರೊಂದಿಗೆ ಇರುತ್ತಾರೆ.
  • 49:13 ದೇವರು ನಿನ್ನನ್ನು ___ ಪ್ರೀತಿಸಿದ್ದಾರೆ ___ ಮತ್ತು ನೀನು ಯೇಸುವಿನಲ್ಲಿ ನಂಬಿಕೆ ಇಡಬೇಕೆಂದು ಬಯಸುತ್ತಿದ್ದಾರೆ, ಇದರಿಂದ ಆತನು ನಿನ್ನೊಂದಿಗೆ ತುಂಬಾ ಹತ್ತಿರವಾದ ಸಂಬಂಧವನ್ನು ಹೊಂದಿರುತ್ತಾರೆ.

ಪದ ಡೇಟಾ:

  • Strong's: H157, H158, H159, H160, H2245, H2617, H2836, H3039, H4261, H5689, H5690, H5691, H7355, H7356, H7453, H7474, G25, G26, G5360, G5361, G5362, G5363, G5365, G5367, G5368, G5369, G5377, G5381, G5382, G5383, G5388