3.1 KiB
3.1 KiB
ಅಕ್ರಮ
ಪದದ ಅರ್ಥವಿವರಣೆ:
“ಅಕ್ರಮ” ಎನ್ನುವ ಪದವು “ಪಾಪ” ಎನ್ನುವ ಪದಕ್ಕೆ ಅರ್ಥವನ್ನೇ ಹೊಂದಿರುತ್ತದೆ, ಆದರೆ ಇನ್ನೂ ವಿಶೇಷವಾಗಿ ತಿಳಿದು ತಪ್ಪುಗಳನ್ನು ಮಾಡುವುದನ್ನು ಅಥವಾ ಭಯಂಕರ ದುಷ್ಟತನವನ್ನು ಸೂಚಿಸುತ್ತದೆ.
- “ಅಕ್ರಮ” ಎನ್ನುವ ಪದವು ಅಕ್ಷರಾರ್ಥವಾಗಿ ಕಾನೂನುಗಳನ್ನು ಉಲ್ಲಂಘನೆ ಮಾಡುವುದು ಅಥವಾ ಅವುಗಳನ್ನು ವಕ್ರೀಕರಣ ಮಾಡುವುದು ಎಂದರ್ಥ. ಇದು ಭಾರೀ ಅನ್ಯಾಯವನ್ನು ಸೂಚಿಸುತ್ತದೆ.
- ಅಕ್ರಮ ಎನ್ನುವುದು ಇತರ ಜನರಿಗೆ ವಿರುದ್ಧವಾಗಿ ಮಾಡುವ ಉದ್ದೇಶಪೂರ್ವಕವಾದ, ಹಾನಿಕರವಾದ ಕ್ರಿಯೆಗಳನ್ನು ಸೂಚಿಸುತ್ತದೆ.
- ಅಕ್ರಮ ಎನ್ನುವ ಪದಕ್ಕೆ ಹೇಳುವ ಇತರ ನಿರ್ವಚನೆಗಳಲ್ಲಿ “ವಕ್ರ ಸ್ವಭಾವ” ಮತ್ತು “ನೀಚತನ” ಎನ್ನುವ ಪದಗಳು ಒಳಗೊಂಡಿರುತ್ತವೆ, ಆ ಎರಡು ಪದಗಳು ಭಯಾನಕವಾದ ಪಾಪದ ಸ್ಥಿತಿಗತಿಗಳನ್ನು ವಿವರಿಸುತ್ತದೆ.
ಅನುವಾದ ಸಲಹೆಗಳು:
- “ಅಕ್ರಮ” ಎನ್ನುವ ಪದವನ್ನು “ದುಷ್ಟತನ” ಅಥವಾ “ವಕ್ರಬುದ್ಧಿಯ ಕ್ರಿಯೆಗಳು” ಅಥವಾ “ಹಾನಿಕರವಾದ ಕ್ರಿಯೆಗಳು” ಎಂದೂ ಅನುವಾದ ಮಾಡಬಹುದು.
- “ಪಾಪ” ಮತ್ತು “ಅಪರಾಧ” ಎನ್ನುವ ಪದಗಳು ವಾಕ್ಯಭಾಗಗಳಲ್ಲಿ ಕಾಣಿಸಿಕೊಂಡಂತೆ ಅನೇಕಸಲ “ಅಕ್ರಮ” ಎನ್ನುವ ಪದವು ಕಾಣಿಸಿಕೊಳ್ಳುತ್ತದೆ, ಈ ಪದಗಳ ಅನುವಾದದಲ್ಲಿ ಅನೇಕ ವಿಧಾನಗಳನ್ನು ಹೊಂದಿರುವುದು ತುಂಬಾ ಪ್ರಾಮುಖ್ಯ.
(ಈ ಪದಗಳನ್ನು ಸಹ ನೋಡಿರಿ : ಪಾಪ, ಅತಿಕ್ರಮಿಸು, ದೋಷ)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: H205, H1942, H5753, H5758, H5766, H5771, H5932, H5999, H7562, G00902, G00930, G04580, G38920, G41890