kn_tw/bible/kt/iniquity.md

32 lines
3.1 KiB
Markdown

# ಅಕ್ರಮ
## ಪದದ ಅರ್ಥವಿವರಣೆ:
“ಅಕ್ರಮ” ಎನ್ನುವ ಪದವು “ಪಾಪ” ಎನ್ನುವ ಪದಕ್ಕೆ ಅರ್ಥವನ್ನೇ ಹೊಂದಿರುತ್ತದೆ, ಆದರೆ ಇನ್ನೂ ವಿಶೇಷವಾಗಿ ತಿಳಿದು ತಪ್ಪುಗಳನ್ನು ಮಾಡುವುದನ್ನು ಅಥವಾ ಭಯಂಕರ ದುಷ್ಟತನವನ್ನು ಸೂಚಿಸುತ್ತದೆ.
* “ಅಕ್ರಮ” ಎನ್ನುವ ಪದವು ಅಕ್ಷರಾರ್ಥವಾಗಿ ಕಾನೂನುಗಳನ್ನು ಉಲ್ಲಂಘನೆ ಮಾಡುವುದು ಅಥವಾ ಅವುಗಳನ್ನು ವಕ್ರೀಕರಣ ಮಾಡುವುದು ಎಂದರ್ಥ. ಇದು ಭಾರೀ ಅನ್ಯಾಯವನ್ನು ಸೂಚಿಸುತ್ತದೆ.
* ಅಕ್ರಮ ಎನ್ನುವುದು ಇತರ ಜನರಿಗೆ ವಿರುದ್ಧವಾಗಿ ಮಾಡುವ ಉದ್ದೇಶಪೂರ್ವಕವಾದ, ಹಾನಿಕರವಾದ ಕ್ರಿಯೆಗಳನ್ನು ಸೂಚಿಸುತ್ತದೆ.
* ಅಕ್ರಮ ಎನ್ನುವ ಪದಕ್ಕೆ ಹೇಳುವ ಇತರ ನಿರ್ವಚನೆಗಳಲ್ಲಿ “ವಕ್ರ ಸ್ವಭಾವ” ಮತ್ತು “ನೀಚತನ” ಎನ್ನುವ ಪದಗಳು ಒಳಗೊಂಡಿರುತ್ತವೆ, ಆ ಎರಡು ಪದಗಳು ಭಯಾನಕವಾದ ಪಾಪದ ಸ್ಥಿತಿಗತಿಗಳನ್ನು ವಿವರಿಸುತ್ತದೆ.
## ಅನುವಾದ ಸಲಹೆಗಳು:
* “ಅಕ್ರಮ” ಎನ್ನುವ ಪದವನ್ನು “ದುಷ್ಟತನ” ಅಥವಾ “ವಕ್ರಬುದ್ಧಿಯ ಕ್ರಿಯೆಗಳು” ಅಥವಾ “ಹಾನಿಕರವಾದ ಕ್ರಿಯೆಗಳು” ಎಂದೂ ಅನುವಾದ ಮಾಡಬಹುದು.
* “ಪಾಪ” ಮತ್ತು “ಅಪರಾಧ” ಎನ್ನುವ ಪದಗಳು ವಾಕ್ಯಭಾಗಗಳಲ್ಲಿ ಕಾಣಿಸಿಕೊಂಡಂತೆ ಅನೇಕಸಲ “ಅಕ್ರಮ” ಎನ್ನುವ ಪದವು ಕಾಣಿಸಿಕೊಳ್ಳುತ್ತದೆ, ಈ ಪದಗಳ ಅನುವಾದದಲ್ಲಿ ಅನೇಕ ವಿಧಾನಗಳನ್ನು ಹೊಂದಿರುವುದು ತುಂಬಾ ಪ್ರಾಮುಖ್ಯ.
(ಈ ಪದಗಳನ್ನು ಸಹ ನೋಡಿರಿ : [ಪಾಪ](../kt/sin.md), [ಅತಿಕ್ರಮಿಸು](../kt/transgression.md), [ದೋಷ](../kt/trespass.md))
## ಸತ್ಯವೇದದ ವಾಕ್ಯಗಳು:
* [ದಾನಿ 9:13](rc://*/tn/help/dan/09/13)
* [ವಿಮೋ 34:5-7](rc://*/tn/help/exo/34/05)
* [ಆದಿ 15:14-16](rc://*/tn/help/gen/15/14)
* [ಆದಿ 44:16](rc://*/tn/help/gen/44/16)
* [ಹಬ 2:12](rc://*/tn/help/hab/02/12)
* [ಮತ್ತಾಯ 13:41](rc://*/tn/help/mat/13/41)
* [ಮತ್ತಾಯ 23:27-28](rc://*/tn/help/mat/23/27)
* [ಮೀಕಾ 3:10](rc://*/tn/help/mic/03/10)
## ಪದ ಡೇಟಾ:
* Strong's: H205, H1942, H5753, H5758, H5766, H5771, H5932, H5999, H7562, G00902, G00930, G04580, G38920, G41890