3.4 KiB
3.4 KiB
ತೀರ್ಪು ಮಾಡು, ತೀರ್ಪು ಮಾಡಲಾಗುವುದು, ತೀರ್ಪು ಮಾಡಲಾಗಿದೆ, ಕಠಿಣವಾದ ತೀರ್ಪು
ಪದದ ಅರ್ಥವಿವರಣೆ:
“ತೀರ್ಪು ಮಾಡು” ಅಥವಾ “ಕಠಿಣವಾದ ತೀರ್ಪು” ಎನ್ನುವ ಪದಗಳು ಒಬ್ಬ ವಕ್ತಿ ಯಾವುದಾದರೊಂದು ತಪ್ಪು ಮಾಡಿದ್ದಕ್ಕೆ ಆ ವ್ಯಕ್ತಿಯನ್ನು ತೀರ್ಪು ಮಾಡುವುದನ್ನು ಸೂಚಿಸುತ್ತದೆ.
- “ತೀರ್ಪು ಮಾಡು” ಎನ್ನುವ ಪದಕ್ಕೆ ಕೆಲವೊಂದುಸಲ ಒಬ್ಬ ವ್ಯಕ್ತಿ ತಪ್ಪು ಮಾಡಿದ್ದಕ್ಕೋಸ್ಕರ ಆ ವ್ಯಕ್ತಿಯನ್ನು ಶಿಕ್ಷಿಸುವುದು ಎಂದರ್ಥ.
- “ತೀರ್ಪು ಮಾಡು” ಎನ್ನುವ ಪದಕ್ಕೆ ಕೆಲವೊಂದುಸಲ ಕಠಿಣವಾಗಿ ಒಬ್ಬರನ್ನು ತೀರ್ಪು ಮಾಡು ಅಥವಾ ಒಬ್ಬರ ಮೇಲೆ ತಪ್ಪಾಗಿ ಆರೋಪಣೆ ಮಾಡುವುದು ಎಂದರ್ಥ.
- “ಕಠಿಣವಾದ ತೀರ್ಪು” ಎನ್ನುವ ಪದವು ಒಬ್ಬರ ಮೇಲೆ ದೋಷಾರೋಪಣೆ ಮಾಡುವುದು ಅಥವಾ ಒಬ್ಬರಿಗೆ ಶಿಕ್ಷೆ ಕೊಡುವ ಕ್ರಿಯೆಯನ್ನು ಸೂಚಿಸುತ್ತದೆ.
ಅನುವಾದ ಸಲಹೆಗಳು:
- ಸಂದರ್ಭಾನುಸಾರವಾಗಿ ಈ ಪದವನ್ನು “ಕಠಿಣವಾಗಿ ತೀರ್ಪು ಮಾಡು” ಅಥವಾ “ತಪ್ಪಾಗಿ ವಿಮರ್ಶೆ ಮಾಡು” ಎಂದೂ ಅನುವಾದ ಮಾಡಬಹುದು.
- “ಅವನಿಗೆ ತೀರ್ಪು ಮಾಡು” ಎನ್ನುವ ಮಾತನ್ನು “ಅವನು ಅಪರಾಧಿಯೆಂದು ತೀರ್ಪು ಮಾಡು” ಅಥವಾ “ಅವನು ಮಾಡಿದ ಪಾಪಕ್ಕೆ ಅವರು ತಪ್ಪದೇ ಶಿಕ್ಷೆಯನ್ನು ಹೊಂದಬೇಕೆಂದು ಹೇಳು” ಎಂದೂ ಅನುವಾದ ಮಾಡಬಹುದು.
- “ಕಠಿಣವಾದ ತೀರ್ಪು” ಎನ್ನುವ ಪದವನ್ನು “ಕಠಿಣವಾಗಿ ತೀರ್ಪು ಮಾಡುವುದು” ಅಥವಾ “ಅಪರಾಧಿಯೆಂದು ಪ್ರಕಟಿಸುವುದು” ಅಥವಾ “ಅಪರಾಧಕ್ಕೆ ಶಿಕ್ಷೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ತೀರ್ಪು, ಶಿಕ್ಷಿಸು)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಯೋಹಾನ.03:19-22
- ಯೋಬ.09:27-29
- ಯೋಹಾನ.05:24
- ಲೂಕ.06:37
- ಮತ್ತಾಯ.12:7-8
- ಜ್ಞಾನೋ.17:15-16
- ಕೀರ್ತನೆ.034:21-22
- ರೋಮಾ.05:16-17
ಪದ ಡೇಟಾ:
- Strong's: H6064, H7034, H7561, H8199, G176, G843, G2607, G2613, G2631, G2632, G2633, G2917, G2919, G2920, G5272, G6048