kn_tw/bible/other/punish.md

8.0 KiB

ಶಿಕ್ಷಿಸು, ಶಿಕ್ಷಿಸುವುದು, ಶಿಕ್ಷಿಸಿದೆ, ಶಿಕ್ಷಿಸುತ್ತಾ ಇರುವುದು, ಶಿಕ್ಷೆ, ಶಿಕ್ಷಿಸದಿರುವುದು

ಪದದ ಅರ್ಥವಿವರಣೆ:

“ಶಿಕ್ಷಿಸು” ಎನ್ನುವ ಪದಕ್ಕೆ ಎನಾದಾರೊಂದು ತಪ್ಪು ಮಾಡಿದ್ದಕ್ಕಾಗಿ ನಕಾರಾತ್ಮಕವಾದ ಪರಿಣಾಮವನ್ನು ಹೊಂದುವಂತೆ ಯಾರಾದರೊಬ್ಬರನ್ನು ಗುರಿ ಮಾಡುವುದು ಎಂದರ್ಥ. “ಶಿಕ್ಷೆ” ಎನ್ನುವ ಪದವು ತಪ್ಪು ನಡತೆಗೆ ಫಲವಾಗಿ ಕೊಡುವ ನಕಾರಾತ್ಮಕವಾದ ಪರಿಣಾಮವನ್ನು ಸೂಚಿಸುತ್ತದೆ.

  • ಅನೇಕಬಾರಿ ಶಿಕ್ಷೆ ಎನ್ನುವುದು ಒಬ್ಬ ವ್ಯಕ್ತಿ ಪಾಪವನ್ನು ಮಾಡದಂತೆ ಪ್ರೇರೇಪಿಸುವುದಕ್ಕೆ ಉದ್ದೇಶಿಸಲಾಗಿರುತ್ತದೆ.
  • ಇಸ್ರಾಯೇಲ್ಯರು ದೇವರಿಗೆ ಅವಿಧೇಯರಾದಾಗ ಆತನು ಅವರನ್ನು ಶಿಕ್ಷಿಸಿದನು, ವಿಶೇಷವಾಗಿ ಅವರು ಸುಳ್ಳು ದೇವರುಗಳಿಗೆ ಆರಾಧನೆ ಮಾಡಿದಾಗ ಹೆಚ್ಚಾಗಿ ಶಿಕ್ಷಿಸಿದರು. ಅವರ ಪಾಪದ ಕಾರಣದಿಂದ ಅವರ ಮೇಲೆ ಧಾಳಿ ಮಾಡಿ, ಅವರನ್ನು ಸೆರೆಗೊಯ್ಯುವುದಕ್ಕೆ ದೇವರು ಅವರ ಶತ್ರುಗಳಿಗೆ ಅನುಮತಿ ಕೊಟ್ಟನು.
  • ದೇವರು ನೀತಿವಂತನು ಮತ್ತು ನ್ಯಾಯವಂತನು, ಆದ್ದರಿಂದ ಆತನು ತಪ್ಪದೇ ಪಾಪವನ್ನು ಶಿಕ್ಷಿಸಲೇ ಬೇಕು. ಪ್ರತಿಯೊಬ್ಬ ಮನುಷ್ಯನು ದೇವರಿಗೆ ವಿರುದ್ಧವಾಗಿ ಪಾಪ ಮಾಡಿದ್ದಾನೆ ಮತ್ತು ಶಿಕ್ಷಿಗೆ ಅರ್ಹನಾಗಿದ್ದಾನೆ.
  • ಪ್ರತಿಯೊಬ್ಬ ಮನುಷ್ಯನು ಮಾಡಿದ ದುಷ್ಟ ಕಾರ್ಯಗಳಿಗೋಸ್ಕರ ಯೇಸುವು ಶಿಕ್ಷೆಯನ್ನು ಅನುಭವಿಸಿದ್ದಾನೆ. ಆತನು ಯಾವ ಪಾಪವೂ ಮಾಡದಿದ್ದರೂ, ಯಾವ ಶಿಕ್ಷೆಗೂ ಅರ್ಹನಾಗದಿದ್ದರೂ ಪ್ರತಿಯೊಬ್ಬರ ಶಿಕ್ಷೆಯನ್ನು ತನ್ನ ಮೇಲೆ ಹಾಕಿಕೊಂಡನು.
  • “ಶಿಕ್ಷೆಯಿಲ್ಲದಂತೆ ಹೋಗು” ಮತ್ತು “ಶಿಕ್ಷೆಯಿಲ್ಲದಂತೆ ಬಿಡು” ಎನ್ನುವ ಮಾತುಗಳಿಗೆ ಜನರು ಮಾಡಿದ ತಪ್ಪು ಕಾರ್ಯಗಳಿಗೆ ಅವರನ್ನು ಶಿಕ್ಷಿಸಬಾರದೆಂದು ನಿರ್ಣಯಿಸಿಕೊಳ್ಳುವುದು ಎಂದರ್ಥ. ದೇವರು ತನ್ನ ಜನರು ಪಶ್ಚಾತ್ತಾಪಪಡಬೇಕೆಂದು ಎದುರುನೋಡುತ್ತಾ ಇರುವಾಗ ಪಾಪವು ಶಿಕ್ಷೆ ಹೊಂದದಂತೆ ಹೋಗುವುದಕ್ಕೆ ಆತನು ಅನೇಕಬಾರಿ ಪಾಪಕ್ಕೆ ಅನುಮತಿ ಕೊಡುತ್ತಾನೆ.

(ಈ ಪದಗಳನ್ನು ಸಹ ನೋಡಿರಿ : ನ್ಯಾಯ, ಪಶ್ಚಾತ್ತಾಪ, ನೀತಿ, ಪಾಪ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 13:07 ಅನುಸರಿಸುವುದಕ್ಕೆ ದೇವರು ಅನೇಕವಾದ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಕೂಡ ಕೊಟ್ಟಿದ್ದಾರೆ. ಈ ಆಜ್ಞೆಗಳಿಗೆ ಜನರು ವಿಧೇಯರಾದರೆ, ಆತನು ಅವರನ್ನು ಆಶೀರ್ವಾದ ಮಾಡುತ್ತೇನೆಂದು ಮತ್ತು ಅವರನ್ನು ಸಂರಕ್ಷಿಸುತ್ತಾನೆಂದು ದೇವರು ವಾಗ್ಧಾನ ಮಾಡಿದ್ದಾರೆ. ಒಂದುವೇಳೆ ಅವರು ಅವಿಧೇಯರಾದರೆ, ದೇವರು ಅವರನ್ನು __ ಶಿಕ್ಷಿಸುತ್ತಾನೆ __.
  • 16:02 ಇಸ್ರಾಯೇಲ್ಯರು ದೇವರಿಗೆ ಅವಿಧೇಯರಾಗುತ್ತಾ ಬಂದಿದ್ದ ಕಾರಣದಿಂದ, ಅವರನ್ನು ಸೋಲಿಸುವುದಕ್ಕೆ ಅವರ ಶತ್ರುಗಳನ್ನು ಅನುಮತಿಸುವುದರ ಮೂಲಕ ಆತನು ಅವರನ್ನು __ ಶಿಕ್ಷಿಸಿದ್ದಾನೆ __.
  • 19:16 ಜನರು ದುಷ್ಟ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು, ದೇವರಿಗೆ ವಿಧೇಯರಾಗುವುದಕ್ಕೆ ಆರಂಭಿಸದಿದ್ದರೆ, ದೇವರು ಅವರನ್ನು ಅಪರಾಧಿಗಳೆಂದು ತೀರ್ಪು ಮಾಡಿ, ಆತನು ಅವರನ್ನು __ ಶಿಕ್ಷಿಸುತ್ತಾನೆ __ ಎಂದು ಪ್ರವಾದಿಗಳು ಜನರನ್ನು ಎಚ್ಚರಿಸಿದರು.
  • 48:06 ಯೇಸು ಪರಿಪೂರ್ಣನಾದ ಮಹಾ ಯಾಜಕನಾಗಿದ್ದಾನೆ, ಯಾಕಂದರೆ ಪ್ರತಿಯೊಬ್ಬನು ಮಾಡಿದ ಪ್ರತಿಯೊಂದು ಪಾಪಕ್ಕಾಗಿ ಆತನು __ ಶಿಕ್ಷೆಯನ್ನು __ ಪಡೆದುಕೊಂಡನು.
  • 48:10 ಯೇಸುವಿನಲ್ಲಿ ಯಾರಾದಾರು ನಂಬಿದಾಗ, ಯೇಸುವಿನ ರಕ್ತವು ಆ ವ್ಯಕ್ತಿ ಮಾಡಿದ ಪಾಪವನ್ನು ತೆಗೆದು ಹಾಕುವುದು, ಮತ್ತು ದೇವರ __ ಶಿಕ್ಷೆಯು __ ಅವನ ಮೇಲೆ ಇರುವುದಿಲ್ಲ.
  • 49:09 ಆದರೆ ದೇವರು ತನ್ನ ಒಬ್ಬನೇ ಮಗನನ್ನು ಕೊಡುವಷ್ಟು ಹೆಚ್ಚಾಗಿ ಲೋಕದಲ್ಲಿರುವ ಪ್ರತಿಯೊಬ್ಬರನ್ನು ಪ್ರೀತಿಸಿದ್ದಾನೆ. ಆದ್ದರಿಂದ ಯೇಸುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬರು ತಮ್ಮ ಪಾಪಗಳಿಗೆ __ ಶಿಕ್ಷೆಯನ್ನು __ ಹೊಂದಿಕೊಳ್ಳದೆ, ದೇವರೊಂದಿಗೆ ನಿತ್ಯವೂ ಜೀವಿಸುತ್ತಾರೆ.
  • 49:11 ಯೇಸು ಪಾಪ ಮಾಡಲಿಲ್ಲ, ಆದರೆ ಆತನು __ ಶಿಕ್ಷೆಯನ್ನು __ ಅನುಭವಿಸುವುದಕ್ಕೆ ಆಯ್ಕೆ ಮಾಡಿಕೊಂಡನು ಮತ್ತು ಲೋಕದಲ್ಲಿ ಪ್ರತಿಯೊಬ್ಬರ ಪಾಪಗಳನ್ನು ತೆಗೆದು ಹಾಕಲು ಮತ್ತು ನಿಮ್ಮ ಪಾಪಗಳನ್ನು ತೆಗೆದು ಹಾಕಲು ಆತನು ತನ್ನನ್ನು ಪರಿಪೂರ್ಣವಾದ ಯಜ್ಞವನ್ನಾಗಿ ಅರ್ಪಿಸಿಕೊಂಡಿದ್ದಾನೆ.

ಪದ ಡೇಟಾ:

  • Strong's: H3027, H3256, H4148, H4941, H5221, H5414, H6031, H6064, H6213, H6485, H7999, H8199, G1349, G1556, G1557, G2849, G3811, G5097