7.5 KiB
7.5 KiB
ದೀಕ್ಷಾಸ್ನಾನ ಮಾಡಿಸು, ದೀಕ್ಷಾಸ್ನಾನ ಮಾಡಿಸಿಕೊಳ್ಳಲಾದೆ, ದೀಕ್ಷಾಸ್ನಾನ
ಅರ್ಥವಿವರಣೆ:
ಹೊಸ ಒಡಂಬಡಿಕೆಯಲ್ಲಿ, ಒಬ್ಬ ಕ್ರೈಸ್ತನು ತನ್ನ ಪಾಪಗಳು ತೊಳೆಯಲ್ಪಟ್ಟಿದೆ ಎಂಬುದನ್ನು ಮತ್ತು ಕ್ರಿಸ್ತನೊಂದಿಗೆ ಐಕ್ಯತೆ ಹೊಂದಿರುವದನ್ನು ಸೂಚಿಸಲು ಧಾರ್ಮಿಕವಾಗಿ ಸ್ನಾನ ಮಾಡುವದನ್ನು “ದೀಕ್ಷಾಸ್ನಾನ” ಮತ್ತು "ದೀಕ್ಷಸ್ನಾನ ಮಾಡಿಸು” ಎಂದು ಕರೆಯುತ್ತಾರೆ.
ಅನುವಾದ ಸಲಹೆಗಳು:
- ಒಬ್ಬ ವ್ಯಕ್ತಿ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡ ಕುರಿತಾಗಿ ಕ್ರೈಸ್ತರಿಗೆ ಅನೇಕ ವಿಧವಾದ ಅಭಿಪ್ರಾಯಗಳುಂಟು. ನೀರನ್ನು ಅನೇಕ ವಿಧವಾಗಿ ಅನ್ವಯಿಸಲು ಅವಕಾಶ ನೀಡುವಂತೆ ಈ ಪದವನ್ನು ಸಾಮಾನ್ಯವಾಗಿ ಅನುವಾದ ಮಾಡುವುದು ಒಳ್ಳೆಯದು.
- ಸಂಧರ್ಭಾನುಸಾರವಾಗಿ, “ದೀಕ್ಷಾಸ್ನಾನ ಮಾಡಿಸು” ಎನ್ನುವ ಪದವನ್ನು “ಪರಿಶುದ್ಧಗೊಳಿಸು”, “ಸುರಿಯುವುದು”, “ಮುಳುಗುವುದು”, “ತೊಳೆಯಲ್ಪಡುವುದು” ಅಥವಾ “ಆತ್ಮೀಯವಾಗಿ ಶುಚಿಗೊಳ್ಳುವುದು” ಎಂದು ಅನುವಾದ ಮಾಡಬಹುದು. ಉದಾಹರಣೆಗೆ, “ನಿನಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುವುದು” ಎನ್ನುವ ವಾಕ್ಯವನ್ನು “ನಿನ್ನನ್ನು ನೀರಿನಲ್ಲಿ ಮುಳುಗಿಸುವುದು” ಎಂದು ಅನುವಾದ ಮಾಡಬಹುದು.
- “ದೀಕ್ಷಾಸ್ನಾನ” ಎನ್ನುವ ಪದವನ್ನು “ಪರಿಶುದ್ಧಗೊಳಿಸುವುದು”, “ಸುರಿಯುವುದು”, “ಪವಿತ್ರಗೊಳಿಸು” ಅಥವಾ “ಆತ್ಮೀಯವಾಗಿ ಶುಚಿಗೊಳ್ಳುವುದು” ಎಂದು ಅನುವಾದ ಮಾಡಬಹುದು.
- ಹಾಗೆಯೇ ಈ ಪದವನ್ನು ಸ್ಥಳಿಯ ಅಥವಾ ರಾಜ್ಯ ಭಾಷೆಗಳಲ್ಲಿ ಹೇಗೆ ಅನುವಾದ ಮಾಡಿರುವರೆಂದು ಸಹ ಗಮನಿಸಿ.
(ಇದನ್ನು ನೋಡಿರಿ: ಗೊತ್ತಿಲ್ಲದ ವಿಷಯಗಳನ್ನು ಹೇಗೆ ಅನುವಾದ ಮಾಡುವುದು)
(ಇವುಗಳನ್ನು ಸಹ ನೋಡಿರಿ : ಯೋಹಾನ (ಸ್ನಾನಿಕನಾದ ), ಪಶ್ಚಾತ್ತಾಪ, ಪವಿತ್ರಾತ್ಮ)
ಸತ್ಯವೇದದ ಉಲ್ಲೇಖಗಳು:
- ಅಪೊ.ಕೃತ್ಯ. 2:38
- ಅಪೊ.ಕೃತ್ಯ. 8:36
- ಅಪೊ.ಕೃತ್ಯ. 9:18
- ಅಪೊ.ಕೃತ್ಯ.10:48
- ಲೂಕ. 3:16
- ಮತ್ತಾಯ. 3:14
- ಮತ್ತಾಯ.28:18-19
ಸತ್ಯವೇದ ಕಥೆಗಳಿಂದ ಉದಾಹರಣೆಗಳು:
- 24:3 ಯೋಹಾನನ ಸಂದೇಶವನ್ನು ಜನರು ಕೇಳಿದಾಗ, ಅನೇಕರು ಅವರ ಪಾಪಗಳಿಂದ ಪಶ್ಚಾತಾಪ ಪಟ್ಟರು, ಮತ್ತು ಯೋಹಾನನು ಅವರಿಗೆ ದೀಕ್ಷಾಸ್ನಾನ ಮಾಡಿಸಿದನು. ಯೋಹಾನನಿಂದ ದೀಕ್ಷಾಸ್ನಾನ ಹೊಂದಿಕೊಳ್ಳುವದಕ್ಕೆ ಅನೇಕ ಧಾರ್ಮಿಕ ನಾಯಕರುಗಳು ಬಂದರು, ಆದರೆ ಅವರು ಪಶ್ಚಾತಾಪಪಡಲಿಲ್ಲ ಅಥವಾ ಅವರ ಪಾಪಗಳನ್ನು ಒಪ್ಪಿಕೊಳ್ಳಲ್ಲಿಲ್ಲ.
- 24:6 ಮರುದಿನ, ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕೆ ಯೇಸು ಬಂದನು.
- __24:7__ಯೋಹಾನನು ಯೇಸುವಿಗೆ ಹೇಳಿದನು, “ನಿನಗೆ ದೀಕ್ಷಾಸ್ನಾನ ಮಾಡಿಸಲು ನಾನು ಯೋಗ್ಯನಲ್ಲ”. ನಾನೇ ನಿನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕಾಗಿತ್ತು.”
- 42:10 "ಆದುದರಿಂದ ನೀವು ಹೊರಟುಹೋಗಿ, ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ ಮತ್ತು ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ".
- 43:11 ಪೇತ್ರನು ಉತ್ತರವಾಗಿ ಅವರಿಗೆ, “ನಿಮ್ಮ ಪಾಪಗಳು ಕ್ಷಮಿಸಲ್ಪಡುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರೂ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಲಿ” ಎಂದು ಹೇಳಿದನು.
- 43:12 ಪೇತ್ರನು 3,000 ಹೇಳಿದ್ದನ್ನು ಸುಮಾರು ಮೂರು ಸಾವಿರ ಜನರು ನಂಬಿದರು ಮತ್ತು ಯೇಸುವಿನ ಶಿಷ್ಯರಾದರು. ಅವರು ದೀಕ್ಷಾಸ್ನಾನ ಮಾಡಿಸಿಕೊಂಡು ಯೆರೂಸಲೇಮಿನ ಸಭೆಯಲ್ಲಿ ಸೇರಿಸಲ್ಪಟ್ಟರು.
- 45:11 ಫಿಲಿಪ್ಪನು ಮತ್ತು ಕಂಚುಕಿಯು ದಾರಿಯಲ್ಲಿ ಹೋಗುತ್ತಿರುವಾಗ, ಅವರು ನೀರಿರುವ ಜಾಗಕ್ಕೆ ಬಂದರು. ಕಂಚುಕಿಯು ಹೀಗೆಂದನು, “ಆಗೋ, ನೀರು; ನನಗೆ ದೀಕ್ಷಾಸ್ನಾನ ವಾಗುವುದಕ್ಕೆ ಅಡ್ಡಿ ಏನು?"
- 46:5 ಕೂಡಲೇ ಸೌಲನ ಕಣ್ಣು ಕಾಣಿಸಿದವು ಮತ್ತು ಅನನೀಯನು ಅವನಿಗೆ__ದೀಕ್ಷಾಸ್ನಾನ__ ಮಾಡಿಸಿದನು.
- 49:14 ನೀವು ಆತನನ್ನು ನಂಬಬೇಕೆಂದು ಮತ್ತು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಯೇಸು ಆಹ್ವಾನಿಸುತ್ತಿದ್ದಾನೆ.
ಪದದ ದತ್ತಾಂಶ:
- Strong's: G09070