kn_tw/bible/kt/baptize.md

43 lines
7.5 KiB
Markdown

# ದೀಕ್ಷಾಸ್ನಾನ ಮಾಡಿಸು, ದೀಕ್ಷಾಸ್ನಾನ ಮಾಡಿಸಿಕೊಳ್ಳಲಾದೆ, ದೀಕ್ಷಾಸ್ನಾನ
## ಅರ್ಥವಿವರಣೆ:
ಹೊಸ ಒಡಂಬಡಿಕೆಯಲ್ಲಿ, ಒಬ್ಬ ಕ್ರೈಸ್ತನು ತನ್ನ ಪಾಪಗಳು ತೊಳೆಯಲ್ಪಟ್ಟಿದೆ ಎಂಬುದನ್ನು ಮತ್ತು ಕ್ರಿಸ್ತನೊಂದಿಗೆ ಐಕ್ಯತೆ ಹೊಂದಿರುವದನ್ನು ಸೂಚಿಸಲು ಧಾರ್ಮಿಕವಾಗಿ ಸ್ನಾನ ಮಾಡುವದನ್ನು “ದೀಕ್ಷಾಸ್ನಾನ” ಮತ್ತು "ದೀಕ್ಷಸ್ನಾನ ಮಾಡಿಸು” ಎಂದು ಕರೆಯುತ್ತಾರೆ.
## ಅನುವಾದ ಸಲಹೆಗಳು:
* ಒಬ್ಬ ವ್ಯಕ್ತಿ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡ ಕುರಿತಾಗಿ ಕ್ರೈಸ್ತರಿಗೆ ಅನೇಕ ವಿಧವಾದ ಅಭಿಪ್ರಾಯಗಳುಂಟು. ನೀರನ್ನು ಅನೇಕ ವಿಧವಾಗಿ ಅನ್ವಯಿಸಲು ಅವಕಾಶ ನೀಡುವಂತೆ ಈ ಪದವನ್ನು ಸಾಮಾನ್ಯವಾಗಿ ಅನುವಾದ ಮಾಡುವುದು ಒಳ್ಳೆಯದು.
* ಸಂಧರ್ಭಾನುಸಾರವಾಗಿ, “ದೀಕ್ಷಾಸ್ನಾನ ಮಾಡಿಸು” ಎನ್ನುವ ಪದವನ್ನು “ಪರಿಶುದ್ಧಗೊಳಿಸು”, “ಸುರಿಯುವುದು”, “ಮುಳುಗುವುದು”, “ತೊಳೆಯಲ್ಪಡುವುದು” ಅಥವಾ “ಆತ್ಮೀಯವಾಗಿ ಶುಚಿಗೊಳ್ಳುವುದು” ಎಂದು ಅನುವಾದ ಮಾಡಬಹುದು. ಉದಾಹರಣೆಗೆ, “ನಿನಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುವುದು” ಎನ್ನುವ ವಾಕ್ಯವನ್ನು “ನಿನ್ನನ್ನು ನೀರಿನಲ್ಲಿ ಮುಳುಗಿಸುವುದು” ಎಂದು ಅನುವಾದ ಮಾಡಬಹುದು.
* “ದೀಕ್ಷಾಸ್ನಾನ” ಎನ್ನುವ ಪದವನ್ನು “ಪರಿಶುದ್ಧಗೊಳಿಸುವುದು”, “ಸುರಿಯುವುದು”, “ಪವಿತ್ರಗೊಳಿಸು” ಅಥವಾ “ಆತ್ಮೀಯವಾಗಿ ಶುಚಿಗೊಳ್ಳುವುದು” ಎಂದು ಅನುವಾದ ಮಾಡಬಹುದು.
* ಹಾಗೆಯೇ ಈ ಪದವನ್ನು ಸ್ಥಳಿಯ ಅಥವಾ ರಾಜ್ಯ ಭಾಷೆಗಳಲ್ಲಿ ಹೇಗೆ ಅನುವಾದ ಮಾಡಿರುವರೆಂದು ಸಹ ಗಮನಿಸಿ.
(ಇದನ್ನು ನೋಡಿರಿ: [ಗೊತ್ತಿಲ್ಲದ ವಿಷಯಗಳನ್ನು ಹೇಗೆ ಅನುವಾದ ಮಾಡುವುದು](rc://*/ta/man/translate/translate-unknown))
(ಇವುಗಳನ್ನು ಸಹ ನೋಡಿರಿ : [ಯೋಹಾನ (ಸ್ನಾನಿಕನಾದ )](../names/johnthebaptist.md), [ಪಶ್ಚಾತ್ತಾಪ](../kt/repent.md), [ಪವಿತ್ರಾತ್ಮ](../kt/holyspirit.md))
## ಸತ್ಯವೇದದ ಉಲ್ಲೇಖಗಳು:
* [ಅಪೊ.ಕೃತ್ಯ. 2:38](rc://*/tn/help/act/02/38)
* [ಅಪೊ.ಕೃತ್ಯ. 8:36](rc://*/tn/help/act/08/36)
* [ಅಪೊ.ಕೃತ್ಯ. 9:18](rc://*/tn/help/act/09/18)
* [ಅಪೊ.ಕೃತ್ಯ.10:48](rc://*/tn/help/act/10/48)
* [ಲೂಕ. 3:16](rc://*/tn/help/luk/03/16)
* [ಮತ್ತಾಯ. 3:14](rc://*/tn/help/mat/03/14)
* [ಮತ್ತಾಯ.28:18-19](rc://*/tn/help/mat/28/18)
## ಸತ್ಯವೇದ ಕಥೆಗಳಿಂದ ಉದಾಹರಣೆಗಳು:
* __[24:3](rc://*/tn/help/obs/24/03)__ ಯೋಹಾನನ ಸಂದೇಶವನ್ನು ಜನರು ಕೇಳಿದಾಗ, ಅನೇಕರು ಅವರ ಪಾಪಗಳಿಂದ ಪಶ್ಚಾತಾಪ ಪಟ್ಟರು, ಮತ್ತು ಯೋಹಾನನು ಅವರಿಗೆ __ದೀಕ್ಷಾಸ್ನಾನ__ ಮಾಡಿಸಿದನು. ಯೋಹಾನನಿಂದ __ದೀಕ್ಷಾಸ್ನಾನ__ ಹೊಂದಿಕೊಳ್ಳುವದಕ್ಕೆ ಅನೇಕ ಧಾರ್ಮಿಕ ನಾಯಕರುಗಳು ಬಂದರು, ಆದರೆ ಅವರು ಪಶ್ಚಾತಾಪಪಡಲಿಲ್ಲ ಅಥವಾ ಅವರ ಪಾಪಗಳನ್ನು ಒಪ್ಪಿಕೊಳ್ಳಲ್ಲಿಲ್ಲ.
* __[24:6](rc://*/tn/help/obs/24/06)__ ಮರುದಿನ, ಯೋಹಾನನಿಂದ __ದೀಕ್ಷಾಸ್ನಾನ__ ಮಾಡಿಸಿಕೊಳ್ಳುವುದಕ್ಕೆ ಯೇಸು ಬಂದನು.
* __[24:7](rc://*/tn/help/obs/24/07)__ಯೋಹಾನನು ಯೇಸುವಿಗೆ ಹೇಳಿದನು, “ನಿನಗೆ __ದೀಕ್ಷಾಸ್ನಾನ__ ಮಾಡಿಸಲು ನಾನು ಯೋಗ್ಯನಲ್ಲ”. ನಾನೇ ನಿನ್ನಿಂದ __ದೀಕ್ಷಾಸ್ನಾನ__ ಮಾಡಿಸಿಕೊಳ್ಳಬೇಕಾಗಿತ್ತು.”
* __[42:10](rc://*/tn/help/obs/42/10)__ "ಆದುದರಿಂದ ನೀವು ಹೊರಟುಹೋಗಿ, ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ __ದೀಕ್ಷಾಸ್ನಾನ__ ಮಾಡಿಸಿರಿ ಮತ್ತು ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ".
* __[43:11](rc://*/tn/help/obs/43/11)__ ಪೇತ್ರನು ಉತ್ತರವಾಗಿ ಅವರಿಗೆ, “ನಿಮ್ಮ ಪಾಪಗಳು ಕ್ಷಮಿಸಲ್ಪಡುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರೂ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ __ದೀಕ್ಷಾಸ್ನಾನ__ ಮಾಡಿಸಿಕೊಳ್ಳಲಿ” ಎಂದು ಹೇಳಿದನು.
* __[43:12](rc://*/tn/help/obs/43/12)__ ಪೇತ್ರನು 3,000 ಹೇಳಿದ್ದನ್ನು ಸುಮಾರು ಮೂರು ಸಾವಿರ ಜನರು ನಂಬಿದರು ಮತ್ತು ಯೇಸುವಿನ ಶಿಷ್ಯರಾದರು. ಅವರು __ದೀಕ್ಷಾಸ್ನಾನ__ ಮಾಡಿಸಿಕೊಂಡು ಯೆರೂಸಲೇಮಿನ ಸಭೆಯಲ್ಲಿ ಸೇರಿಸಲ್ಪಟ್ಟರು.
* __[45:11](rc://*/tn/help/obs/45/11)__ ಫಿಲಿಪ್ಪನು ಮತ್ತು ಕಂಚುಕಿಯು ದಾರಿಯಲ್ಲಿ ಹೋಗುತ್ತಿರುವಾಗ, ಅವರು ನೀರಿರುವ ಜಾಗಕ್ಕೆ ಬಂದರು. ಕಂಚುಕಿಯು ಹೀಗೆಂದನು, “ಆಗೋ, ನೀರು; ನನಗೆ __ದೀಕ್ಷಾಸ್ನಾನ__ ವಾಗುವುದಕ್ಕೆ ಅಡ್ಡಿ ಏನು?"
* __[46:5](rc://*/tn/help/obs/46/05)__ ಕೂಡಲೇ ಸೌಲನ ಕಣ್ಣು ಕಾಣಿಸಿದವು ಮತ್ತು ಅನನೀಯನು ಅವನಿಗೆ__ದೀಕ್ಷಾಸ್ನಾನ__ ಮಾಡಿಸಿದನು.
* __[49:14](rc://*/tn/help/obs/49/14)__ ನೀವು ಆತನನ್ನು ನಂಬಬೇಕೆಂದು ಮತ್ತು __ದೀಕ್ಷಾಸ್ನಾನ__ ಮಾಡಿಸಿಕೊಳ್ಳಬೇಕೆಂದು ಯೇಸು ಆಹ್ವಾನಿಸುತ್ತಿದ್ದಾನೆ.
## ಪದದ ದತ್ತಾಂಶ:
* Strong's: G09070