kn_tw/bible/names/persia.md

2.9 KiB

ಪಾರಸಿ, ಪಾರಸಿಯರು

ಪದದ ಅರ್ಥವಿವರಣೆ:

ಪಾರಸಿ ಎನ್ನುವುದು ಒಂದು ದೇಶವಾಗಿತ್ತು, ಇದು ಸುಮಾರು ಕ್ರಿ.ಪೂ.550 ರಲ್ಲಿ ಮಹಾ ಕೋರೆಷನಿಂದ ಸ್ಥಾಪಿಸಲ್ಪಟ್ಟ ಶಕ್ತಿಯುತವಾದ ಸಾಮ್ರಾಜ್ಯವಾಗಿ ಮಾರ್ಪಟ್ಟಿತ್ತು. ಪಾರಸಿಯ ದೇಶವು ಈಗಿನ ಆಧುನಿಕ ಇರಾನ್ ದೇಶದ ಪ್ರಾಂತ್ಯದಲ್ಲಿರುವ ಬಾಬೆಲೋನಿಯ ಮತ್ತು ಆಶ್ಯೂರ್ ಆಗ್ನೇಯ ಭಾಗದಲ್ಲಿ ಕಂಡುಬರುತ್ತದೆ.

  • ಪಾರಸಿಯ ಜನರನ್ನು “ಪಾರಸಿಯರು” ಎಂದು ಕರೆಯುತ್ತಿದ್ದರು.
  • ಅರಸನಾದ ಕೋರೆಷನ ಆಳ್ವಿಕೆಯಲ್ಲಿ ಯೆಹೂದ್ಯರೆಲ್ಲರು ಬಾಬೆಲೋನಿಯದಲ್ಲಿರುವ ತಮ್ಮ ಸೆರೆಯಿಂದ ಬಿಡುಗಡೆ ಹೊಂದಿ, ತಮ್ಮ ಮನೆಗೆ ಹೋಗುವುದಕ್ಕೆ ಅನುಮತಿಸಲ್ಪಟ್ಟಿದ್ದರು, ಮತ್ತು ಯೆರೂಸಲೇಮಿನಲ್ಲಿರುವ ದೇವಾಲಯವನ್ನು ಪಾರಸಿಯ ಸಾಮ್ರಾಜ್ಯದಿಂದ ಕೊಡಲ್ಪಟ್ಟಿರುವ ನಿಧಿಗಳಿಂದ ಪುನರ್ ನಿರ್ಮಾಣ ಮಾಡಲ್ಪಟ್ಟಿತ್ತು,
  • ಎಜ್ರಾ ಮತ್ತು ನೆಹೆಮೀಯರು ಯೆರೂಸಲೇಮಿನಲ್ಲಿರುವ ಗೋಡೆಗಳನ್ನು ಪುನರ್ ನಿರ್ಮಾಣ ಮಾಡುವುದಕ್ಕೆ ಹಿಂದುರಿಗಿ ಹೋದಾಗ ಅರಸನಾದ ಅಹಷ್ವೆರೋಷನು ಪಾರಸಿಯ ಸಾಮ್ರಾಜ್ಯಕ್ಕೆ ಪಾಲಕನಾಗಿದ್ದನು.
  • ಎಸ್ತೇರಳು ಅರಸನಾದ ಅಹಷ್ಟೇರೋಷನನ್ನು ವಿವಾಹ ಮಾಡಿಕೊಂಡಾಗ ಆಕೆ ಪಾರಸಿಯ ಸಾಮ್ರಾಜ್ಯದ ರಾಣಿಯಾದಳು.

(ಈ ಪದಗಳನ್ನು ಸಹ ನೋಡಿರಿ : ಅಹಷ್ವೆರೋಷ, ಅರ್ತಷಸ್ತ, ಅಶ್ಯುರ್, ಬಾಬೆಲೋನಿಯ, ಕೊರೇಷ, ಎಸ್ತೇರ್, ಎಜ್ರಾ, ನೆಹೆಮೀಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H6539, H6540, H6542, H6543