kn_tw/bible/names/nehemiah.md

3.0 KiB

ನೆಹೆಮೀಯ

ಸತ್ಯಾಂಶಗಳು:

ನೆಹೆಮೀಯನು ಇಸ್ರಾಯೇಲಿಯನಾಗಿರುತ್ತಾನೆ, ಯೆಹೂದ ಮತ್ತು ಇಸ್ರಾಯೇಲ್ ಜನರನ್ನು ಬಾಬೆಲೋನಿಯರಿಂದ ಸೆರೆಗೊಯ್ಯಲ್ಪಟ್ಟ ಸಮಯದಲ್ಲಿ ಬಲವಂತಿಕೆಯಿಂದ ಕರೆದೊಯ್ಯಲ್ಪಟ್ಟಿದ್ದನು.

  • ಈತನು ಪಾರಸೀಯ ಅರಸನಾದ ಅಹಷ್ವೆರೋಷನಿಗೆ ಪಾನದಾಯಕನಾಗಿರುವಾಗ, ನೆಹೆಮೀಯನು ಅರಸನ ಬಳಿಗೆ ಹೋಗಿ ಯೆರೂಸಲೇಮಿಗೆ ಹಿಂದಿರುಗಿ ಹೋಗುವುದಕ್ಕೆ ಅನುಮತಿಗಾಗಿ ಕೇಳಿದನು.
  • ಯೆರೂಸಲೇಮಿನ ಗೋಡೆಗಳನ್ನು ಬಾಬೆಲೋನಿಯರಿಂದ ನಾಶಗೊಂಡಾಗ, ಅವುಗಳನ್ನು ತಿರುಗಿ ಕಟ್ಟುವುದರಲ್ಲಿ ನೆಹೆಮೀಯನು ಇಸ್ರಾಯೇಲ್ಯರನ್ನು ನಡೆಸಿದನು.
  • ಸುಮಾರು ಹನ್ನೆರಡು ವರ್ಷಗಳ ಕಾಲ ನೆಹೆಮೀಯನು ಅರಸನ ಮನೆಗೆ ಹೋಗುವುದಕ್ಕೆ ಮುಂಚಿತವಾಗಿ ಯೆರೂಸಲೇಮಿನ ಪಾಲಕನಾಗಿದ್ದನು.
  • ಹಳೇ ಒಡಂಬಡಿಕೆಯಲ್ಲಿ ನೆಹೆಮೀಯ ಪುಸ್ತಕವು ಯೆರೂಸಲೇಮಿನಲ್ಲಿರುವ ಜನರ ಆತನ ಪಾಲನೆಯ ಕುರಿತಾಗಿ ಮತ್ತು ಗೋಡೆಗಳನ್ನು ತಿರುಗಿ ಕಟ್ಟುವುದರಲ್ಲಿ ನೆಹೆಮೀಯ ಕೆಲಸದ ಕಾರ್ಯಗಳನ್ನು ವಿವರಿಸುತ್ತದೆ.
  • ಹಳೇ ಒಡಂಬಡಿಕೆಯಲ್ಲಿ ನೆಹೆಮೀಯ ಎನ್ನುವ ಹೆಸರಿನ ಮೇಲೆ ಅನೇಕರಿದ್ದಾರೆ. ಯಾವ ನೆಹೆಮೀಯನ ಕುರಿತಾಗಿ ಮಾತನಾಡುತ್ತಿದ್ದಾರೆಂದು ವಿವರಿಸುವುದಕ್ಕೆ ಹೇಳಲು ಆ ಹೆಸರುಗಳ ಮುಂದೆ ಅವರ ತಂದೆಯ ಹೆಸರನ್ನು ಸಹಜವಾಗಿ ಬರೆಯುತ್ತಿದ್ದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಹಷ್ವೆರೋಷ, ಬಾಬೆಲೋನಿಯ, ಯೆರೂಸಲೇಮ್, ಮಗ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5166