kn_tw/bible/names/ishmael.md

4.1 KiB

ಇಷ್ಮಾಯೇಲ್, ಇಷ್ಮಾಯೇಲನು, ಇಷ್ಮಾಯೇಲರು

ಸತ್ಯಾಂಶಗಳು:

ಇಷ್ಮಾಯೇಲನು ಅಬ್ರಾಹಾಮನಿಗೆ ಮತ್ತು ಐಗುಪ್ತ ದಾಸಿಯಾಗಿರುವ ಹಾಗರಳಿಗೆ ಹುಟ್ಟಿದ ಮಗನಾಗಿದ್ದನು. ಹಳೇ ಒಡಂಬಡಿಕೆಯ ಮೇಲೆ ಇಷ್ಮಾಯೇಲ್ ಎನ್ನುವ ಹೆಸರಿನ ಮೇಲೆ ಅನೇಕ ಜನರಿದ್ದಾರೆ.

  • “ಇಷ್ಮಾಯೇಲ್” ಎನ್ನುವ ಹೆಸರಿಗೆ “ದೇವರು ಕೇಳುವನು” ಎಂದರ್ಥ.
  • ಅಬ್ರಾಹಾಮನ ಮಗನಾಗಿರುವ ಇಷ್ಮಾಯೇಲನನ್ನು ಆಶೀರ್ವಾದ ಮಾಡುತ್ತೇನೆಂದು ದೇವರು ವಾಗ್ಧಾನ ಮಾಡಿದ್ದರು, ಆದರೆ ಇವನು ದೇವರು ತನ್ನ ಒಡಂಬಡಿಕೆಯನ್ನು ಸ್ಥಾಪಿಸುವುದಕ್ಕೆ ವಾಗ್ಧಾನ ಮಾಡಿದ ಮಗನಲ್ಲ.
  • ಹಾಗರಳನ್ನು ಮತ್ತು ಇಷ್ಮಾಯೇಲನನ್ನು ಅರಣ್ಯದೊಳಗೆ ಕಳುಹಿಸಿದಾಗ ದೇವರು ಅವರನ್ನು ಸಂರಕ್ಷಿಸಿದನು.
  • ಇಷ್ಮಾಯೇಲನು ಪಾರಾನಿನ ಅರಣ್ಯದಲ್ಲಿ ನಿವಾಸ ಮಾಡುತ್ತಿರುವಾಗ, ಅವನು ಐಗುಪ್ತ ಸ್ತ್ರೀಯಳನ್ನು ವಿವಾಹ ಮಾಡಿಕೊಂಡನು.
  • ನೆತನ್ಯನ ಮಗನಾಗಿರುವ ಇಷ್ಮಾಯೇಲನು ಯೂದಾ ಸೈನ್ಯಾಧಿಕಾರಿಯಾಗಿದ್ದನು, ಬಾಬೆಲೋನಿಯ ಅರಸನಾಗಿರುವ ನೆಬುಕದ್ನೆಚ್ಚರನಿಂದ ನೇಮಿಸಲ್ಪಟ್ಟ ಪಾಲಕನನ್ನು ಕೊಲ್ಲುವುದಕ್ಕೆ ಕೆಲವೊಂದು ಜನರ ಗುಂಪನ್ನು ನಡೆಸಿದ್ದನು.
  • ಹಳೇ ಒಡಂಬಡಿಕೆಯಲ್ಲಿ ಇಷ್ಮಾಯೇಲ್ ಎಂಬ ಹೆಸರಿನ ಮೇಲೆ ಇನ್ನೂ ನಾಲ್ಕು ಮಂದಿ ಜನರಿದ್ದಾರೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಬಾಬೆಲೋನಿಯ, ಒಡಂಬಡಿಕೆ, ಅರಣ್ಯ, ಐಗುಪ್ತ, ಹಾಗರು, ಇಸಾಕ, ನೆಬುಕದ್ನೆಚ್ಚರ, ಪಾರಾನ್, ಸಾರಾ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 05:02 ಆದ್ದರಿಂದ ಅಬ್ರಾಮನು ಹಾಗರಳನ್ನು ಮದುವೆ ಮಾಡಿಕೊಂಡನು. ಹಾಗರಳಿಗೆ ಒಂದು ಗಂಡು ಮಗುವಾಯಿತು, ಅಬ್ರಾಮನು ಅವನಿಗೆ ___ ಇಷ್ಮಾಯೇಲ್ ___ ಎಂದು ಹೆಸರಿಟ್ಟನು.
  • 05:04 “ನಾನು ___ ಇಷ್ಮಾಯೇಲನನ್ನು ___ ಒಂದು ದೊಡ್ಡ ದೇಶವನ್ನಾಗಿ ಮಾಡುವೆನು, ಆದರೆ ನನ್ನ ಒಡಂಬಡಿಕೆಯು ಇಸಾಕನೊಂದಿಗೆ ಮಾತ್ರ ಇರುತ್ತದೆ.”

ಪದ ಡೇಟಾ:

  • Strong's: H3458, H3459