kn_tw/bible/names/hagar.md

2.5 KiB

ಹಾಗರಳು

ಸತ್ಯಾಂಶಗಳು:

ಹಾಗರಳು ಐಗುಪ್ತ ದೇಶದವಳು ಮತ್ತು ಸಾರಯಳ ದಾಸಿಯಾಗಿದ್ದಳು.

  • ಸಾರಯಳಿಗೆ ಸಂತಾನವಾಗದಕಾರಣ ಆಕೆ ತನ್ನ ಗಂಡನಾದ ಅಬ್ರಾಮನಿಗೆ ಸಂತಾನವುಂಟು ಮಾಡುವಂತೆ ತನ್ನ ದಾಸಿಯಾದ ಹಾಗರಳನ್ನು ಒಪ್ಪಿಸಿದಳು.
  • ಹಾಗರಳು ಬಸುರಾದಳು ಮತ್ತು ಅಬ್ರಾಮನಿಗೆ ಮಗನಾದ ಇಷ್ಮಾಯೇಲನಿಗೆ ಜನ್ಮ ನೀಡಿದಳು.
  • ಮರಳುಗಾಡಿನಲ್ಲಿ ಹಾಗರಳು ಯಾತನೆಯಲ್ಲಿದ್ದಾಗ ಯೆಹೋವನು ಆಕೆಯನ್ನು ನೋಡಿದನು ಮತ್ತು ಆಕೆಯ ಸಂತಾನವನ್ನು ಆಶಿರ್ವಾದಿಸುತ್ತೇನೆಂದು ಹೇಳಿದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಬ್ರಾಮ, ಸಂತತಿ, ಇಷ್ಮಾಯೇಲ್, ಸಾರಯಳು, ದಾಸಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಕೆಲವು ಉದಾಹರಣೆಗಳು :

  • 05:01 ಆದಕಾರಣ, ಅಬ್ರಾಮನ ಹೆಂಡತಿಯಾದ ಸಾರಯಳು “ಯೆಹೋವನು ನನಗೆ ಮಕ್ಕಳನ್ನು ಕೊಡಲಿಲ್ಲವಲ್ಲಾ; ನೀನು ನನ್ನ ದಾಸಿಯಾದ ಹಾಗರಳ ಬಳಿಗೆ ಹೋಗಬೇಕು; ಒಂದು ವೇಳೆ ಅವಳ ಮೂಲಕ ನನಗೆ ಸಂತಾನವಾದೀತು” ಎಂದು ಹೇಳಿದಳು.
  • 05:02 ಹಾಗರಳಿಗೆ ಗಂಡು ಮಗು ಹುಟ್ಟಿದನು ಮತ್ತು ಅಬ್ರಾಮನು ಅವನಿಗೆ ಇಸ್ಮಾಯೇಲ್ ಎಂದು ಹೆಸರಿಟ್ಟನು.

ಪದ ಡೇಟಾ:

  • Strong's: H1904