kn_ta/translate/writing-poetry/01.md

16 KiB

ವಿವರಣೆ

ಜನರು ತಮ್ಮ ಮನಸ್ಸಿನ ಭಾವನೆಗಳನ್ನು ಸುಂದರವಾಗಿ, ಕಾವ್ಯಭಾಷೆಯಲ್ಲಿ ವ್ಯಕ್ತಪಡಿಸುವ ಮಾಧ್ಯಮವೇ ಪದ್ಯ, ತಮ್ಮ ಭಾಷೆಯಲ್ಲಿನ ಪದಗಳನ್ನು, ಉಚ್ಛಾರಣೆಗಳನ್ನು, ಮಾತುಗಳನ್ನು, ಬರಹಗಳನ್ನು ಕಾವ್ಯಮಯವಾಗಿ ಹೇಳಲು ಪ್ರಯತ್ನಿಸುವ ಮಾರ್ಗ. ಗದ್ಯದ ರೂಪದಲ್ಲಿ ಹೇಳುವ ಮಾತುಗಳು ಸರಳವಾಗಿದ್ದರೂ ಜನರು ತಮ್ಮ ಆಳವಾದ, ಹೃದಯದ ಮಾತುಗಳನ್ನು ಪದ್ಯದ ಮೂಲಕ ಮಾತ್ರ ಪರಿಣಾಮಕಾರಿಯಾಗಿ ಬಳಸಬಹುದು. ಸರಳ ಸಾಮಾನ್ಯ ವಾಕ್ಯಗಳಲ್ಲಿ ಹೇಳುವ ವಿಷಯಕ್ಕಿಂತ ಪದ್ಯದ ಶೈಲಿಯಲ್ಲಿ ಲಯಬದ್ಧವಾಗಿ ಹೇಳುವ ವಿಷಯಗಳಿಗೆ ಹೆಚ್ಚು ಪರಿಣಾಮವಿರುತ್ತದೆ ಮತ್ತು ಸೊಗಸಾಗಿ, ಚಿತ್ತವನ್ನು/ಮನಸ್ಸನ್ನು ಆಕರ್ಷಿಸುವಂತಹದ್ದಾಗಿದ್ದು, ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗಿರುತ್ತದೆ.

ಪದ್ಯದಲ್ಲಿಕಂಡುಬರುವ ಕೆಲವು ಸಾಮಾನ್ಯವಿಷಯಗಳು.

  • ಅನೇಕ ಅಲಂಕಾರಗಳು ಉದಾಹರಣೆಗೆ ಅಪೋಸ್ಟ್ರಫಿ
  • ಸಮಾನಸಾಲುಗಳು (ನೋಡಿ ಸಮಾನಾಂತರ/ಸಮದೂರ ಹೋಲಿಕೆ ಮತ್ತು ಸಮಾನಾಂತರ ಅರ್ಥಕೊಡುವ ಸಾಲುಗಳು.
  • ಕೆಲವು ಅಥವಾ ಎಲ್ಲಾ ಸಾಲುಗಳ ಪುನರಾವರ್ತನೆಯಾಗುವುದು.
  • ಆತನನ್ನು ಸ್ತುತಿಸಿರಿ, ಆತನ ದೇವದೂತರೆಲ್ಲಾ ಸ್ತುತಿಸಿರಿ, ಆತನ ದೂತಸೈನ್ಯವೆಲ್ಲಾ ಸ್ತುತಿಸಲಿ. ಸೂರ್ಯ ಚಂದ್ರರೇ ಆತನನ್ನು ಸ್ತುತಿಸಿರಿ ಹೊಳೆಯುವ ಎಲ್ಲಾ ನಕ್ಷತ್ರಗಳೇ ಆತನನ್ನು ಸ್ತುತಿಸಿರಿ (ದಾ.ಕೀ.148:2-3 ULB)
  • ಸಾಲುಗಳು ಸಮಾನ ಅಳತೆಯಲ್ಲಿರುತ್ತವೆ.
  • ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆತೋರಿಸುವಂತಾದ್ದು,,ಪ್ರೀತಿ ಹೊಟ್ಟೆಕಿಚ್ಚು ಪಡುವುದಿಲ್ಲ ಹೊಗಳಿಕೊಳ್ಳುವುದಿಲ್ಲ, ಗರ್ವದಿಂದ ಉಬ್ಬುವುದಿಲ್ಲ,ಅವಮರ್ಯಾದೆಯಿಂದ ನಡೆಯುವುದಿಲ್ಲ. (1 ಕೊರಿಂಥ 13:4 ULB)
  • ಇಲ್ಲಿ ಆದಿ ಅಥವಾ ಅಂತ್ಯಪ್ರಾಸವಿರುತ್ತದೆ. ಪ್ರಾರಂಭದಲ್ಲಿ ಅಥವಾ ಅಂತ್ಯದಲ್ಲಿ ಒಂದೇ ರೀತಿಯ ಧ್ವನಿ ಉಚ್ಛಾರಣೆ ಇದ್ದು ಎರಡು ಅಥವಾ ಹೆಚ್ಚಿನ ಸಾಲುಗಳಲ್ಲಿ ಬರುತ್ತದೆ.
  • “Twinkle, twinkle little star. How I wonder what you are.” (from an English rhyme)
  • ಇದೇ ಧ್ವನಿ ಉಚ್ಛಾರಣೆ ಅನೇಕ ಸಲ ಪುನರಾವರ್ತನೆಯಾಗಿದೆ.
  • "Peter, Peter, pumpkin eater" (from an English rhyme)
  • ಹಳೆಯ ಪದಗಳು ಮತ್ತು ಭಾವನೆಗಳು.
  • ನಾಟಕೀಯ ಕಲ್ಪನೆಗಳು / ಉಪಮೆಗಳು.
  • ವಿವಿಧ ವ್ಯಾಕರಣ ಬಳಕೆ ಈ ಕೆಳಗಿನವುಗಳಂತೆ.
  • ಅಪೂರ್ಣವಾಕ್ಯಗಳು.
  • ಸಂಪರ್ಕಸಾಧಿಸುವ ಪದಗಳ ಕೊರತೆ

ನಿಮ್ಮ ಭಾಷೆಯಲ್ಲಿ ಕೆಲವು ಕಡೆ ಪದ್ಯಭಾಗಗಳು.

  1. ಹಾಡುಗಳು, ವಿಶೇಷವಾಗಿ ಹಳೆಯ ಹಾಡುಗಳು ಅಥವಾ ಮಕ್ಕಳ ಆಟದಲ್ಲಿ ಬಳಸುವ ಹಾಡುಗಳು.
  2. ಧಾರ್ಮಿಕ ಆಚರಣೆಗಳು ಅಥವಾ ಪೂಜಾರಿಗಳ ಮಂತ್ರಗಳು ಅಥವಾ ಮಾಂತ್ರಿಕ ವೈದ್ಯರು.
  3. ಪ್ರಾರ್ಥನೆಗಳು, ಆಶೀರ್ವಾದಗಳು ಮತ್ತು ಶಾಪಗಳು.
  4. ಹಳೆಯ ಐತಿಹ್ಯ/ ಪುರಾಣಕತೆಗಳು ಮತ್ತು ದಂತಕತೆಗಳು.

ಚಿತ್ತಾಕರ್ಷಕ ಅಥವಾ ಸೊಗಸಾದ ಭಾಷಣ.

ಚಿತ್ತಾಕರ್ಷಕ ಅಥವಾ ಕಲ್ಪನಾತ್ಮಕ ಭಾಷಣ ಪದ್ಯದಂತೆಯೇ ಸಮಾನವಾದ ಕಾವ್ಯಭಾಷೆಯನ್ನು ಹೊಂದಿರುತ್ತದೆ.ಆದರೆ ಪದದ ಶೈಲಿ ಅಥವಾ ಭಾಷೆಯನ್ನು ಸಂಪೂರ್ಣವಾಗಿ ಹೊಂದಿರದಿದ್ದರೂ, ಪದ್ಯದಭಾಷೆಯನ್ನು ಉಪಯೋಗಿಸುವುದಿಲ್ಲ. ಜನಪ್ರಿಯ ಭಾಷಣಗಾರರು ತಮ್ಮ ಭಾಷೆಯಲ್ಲಿ ಭಾಷಣ ಮಾಡುವಾಗ ಚಿತ್ತಾಕರ್ಷಕ ಹಾಗೂ ಅತ್ಯುತ್ತಮ ಕಾವ್ಯಮಯ ಭಾಷೆಯನ್ನು ಬಳಸುತ್ತಾರೆ. ಇದು ಬಹುಶಃ ಮೂಲವಾಕ್ಯಭಾಗದ ಭಾಷೆಯನ್ನು ಅಧ್ಯಯನ ಮಾಡಿ ತಮ್ಮ ಭಾಷೆಯಲ್ಲಿ ಭಾಷಣ ಮಾಡುವಾಗ ಆಕರ್ಷಕವಾಗಿ ಸೊಗಸಾದ ಮಾತುಗಳನ್ನು ಬಳಸುತ್ತಾರೆ.

ಕಾರಣ ಇದೊಂದು ಭಾಷಾಂತರದ ಕೊರತೆ.

  • ವಿವಿಧ ಭಾಷೆಯಲ್ಲಿ ವಿವಿಧ ರೀತಿಯಲ್ಲಿ ಪದ್ಯಗಳನ್ನು ಬಳಸುತ್ತಾರೆ. ನಿಮ್ಮ ಭಾಷೆಯಲ್ಲಿ ಪದ್ಯದ ಮಾದರಿ ಮೂಲಭಾಷೆಯ ಅರ್ಥವನ್ನು ಬಳಸಲಾಗದಿದ್ದರೆ ಪದ್ಯದಮಾದರಿಯನ್ನು ಬಿಟ್ಟು ಬರೆಯಬೇಕು.
  • ಕೆಲವು ಭಾಷೆಯಲ್ಲಿ ಸತ್ಯವೇದದ ಕೆಲವು ನಿರ್ದಿಷ್ಟಭಾಗದಲ್ಲಿ ಪದ್ಯದ ಮಾದರಿಯನ್ನು ಬಳಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಇರುತ್ತದೆ.

ಸತ್ಯವೇದದ ಕೆಲವು ಉದಾಹರಣೆಗಳು

ಸತ್ಯವೇದದಲ್ಲಿ ಹಾಡುಗಳು, ಬೋಧನೆಗಳು ಮತ್ತು ಪ್ರವಾದನೆಗಳು ಇವುಗಳನ್ನು ಬರೆಯುವಾಗ ಪದ್ಯದ ಮಾದರಿಯನ್ನುಬಳಸಿದೆ. ಹಳೇ ಒಡಂಬಡಿಕೆಯಲ್ಲಿ ಬಹುಪಾಲು ಪುಸ್ತಕಗಳು ಪದ್ಯದರೂಪದಲ್ಲಿವೆ. ಇನ್ನೂ ಕೆಲವು ಸಂಪೂರ್ಣವಾಗಿ ಪದ್ಯದ ರೂಪದಲ್ಲಿದೆ.

ನಾನು ಕುಗ್ಗಿಹೋಗಿರುವುದನ್ನು ನೋಡಿರುವೆ. ನನ್ನ ನೋವು, ದುಃಖವನ್ನು ನಿನ್ನ ಲಕ್ಷ್ಯಕ್ಕೆ ತೆಗೆದುಕೊಂಡೆಯಲ್ಲಾ. (ದಾ.ಕೀ. 31:7 ULB)

ಸಮಾನಾಂತರ ಸಮಾನ ಅರ್ಥದೊಂದಿಗೆ ಎರಡು ಸಮಾನ ಅರ್ಥವನ್ನು ಒಳಗೊಂಡಿರುವುದಕ್ಕೆ ಉದಾಹರಣೆ.

ಯೆಹೋವನೇ, ರಾಷ್ಟ್ರಗಳಿಗೆ ನ್ಯಾಯತೀರ್ಪು ಕೊಡು, ನನ್ನನ್ನು ನಿರ್ದೋಷಿಯೆಂದು ನಿರೂಪಿಸು, ಏಕೆಂದರೆ ಮಹೋನ್ನತನೇ ನಾನು ನ್ಯಾಯಪರನೂ ನೀತಿವಂತನೂ ನಿರ್ದೋಷಿಯೂ ಆಗಿದ್ದೇನೆ.

ಈ ಉದಾಹರಣೆಯಲ್ಲಿ ದಾವೀದನು ತನ್ನ ಮತ್ತು ಅನೀತಿಯಿಂದ ತುಂಬಿರುವ, ರಾಷ್ಟ್ರಗಳ ನಡುವಿನ ದೋಷವನ್ನು ಗುರುತಿಸಿ ನ್ಯಾಯತೀರ್ಪು ಕೊಡಲು ಹೇಳುತ್ತಿರುವುದು ಈ ಇಬ್ಬರ ನಡುವಿನ ಸಮಾನಾಂತರ ವಿಷಯಗಳನ್ನು ಗಮನಸಿ ನಿರ್ಣಯಿಸಲು ತಿಳಿಸುವುದನ್ನು ಕಾಣುತ್ತೇವೆ. (see Parallelism)

ಅದಲ್ಲದೆ ಗೊತ್ತಿದ್ದೇ ಬೇಕೆಂದು ಪಾಪಮಾಡದಂತೆ ನಿನ್ನ ದಾಸನನ್ನು ಕಾಪಾಡು. ಅಂತಹ ಪಾಪಗಳು ನನ್ನನ್ನು ಆಳದಿರಲಿ. (ದಾ.ಕೀ 19:13 ULB)

ವ್ಯಕ್ತೀಕರಣ ಉದಾಹರಣೆಯಾಗಿ ಪಾಪದ ಬಗ್ಗೆ ಹೇಳುತ್ತಿದೆ ನಿರ್ಜೀವ ಪದವಾದ ಪಾಪ ಮನುಷ್ಯನನ್ನು ಆಳುತ್ತದೆ ಎಂದು ಬಳಸಿರುವುದು Personification) ನೋಡಿ.

ಯೆಹೋವನಿಗೆ ಕೃತಜ್ಞಾ ಸ್ತುತಿ ಮಾಡಿರಿ, ಆತನು ಒಳ್ಳೆಯವನು ಆತನ ಒಡಂಬಡಿಕೆಯ ಕೃಪೆಯು ಶಾಶ್ವತವಾದದ್ದು. ದೇವಾದಿ ದೇವನಿಗೆ ಕೃತಜ್ಞತಾ ಸ್ತುತಿ ಮಾಡಿರಿ ಆತನ ಒಡಂಬಡಿಕೆಯ ಕೃಪೆಯು ಶಾಶ್ವತವಾದದ್ದು. ಕರ್ತರ ಕರ್ತನಿಗೆ ಕೃತಜ್ಞತಾ ಸ್ತುತಿ ಮಾಡಿರಿ ಆತನ ಒಡಂಬಡಿಕೆಯ ಕೃಪೆಯು ಶಾಶ್ವತವಾದದ್ದು. (ದಾ.ಕೀ. 136:1-3 ULB)

ಈ ಮೂರು ಉದಾಹರಣಾ ವಾಕ್ಯಗಳಲ್ಲಿ ಪುನರಾವರ್ತಿತವಾಗಿ ಬರುವ ನುಡಿಗುಚ್ಛಗಳು " ಕೃತಜ್ಞತಾ ಸ್ತುತಿ ಮಾಡಿರಿ" ಮತ್ತು ಆತನ ಒಡಂಬಡಿಕೆಯ ಕೃಪೆಯು ಶಾಶ್ವತವಾದದ್ದು. ಎಂಬುದು.

ಭಾಷಾಂತರದ ಕೌಶಲ್ಯಗಳು

ಮೂಲಭಾಷೆಯ ವಾಕ್ಯಭಾಗಗಳಲ್ಲಿ ಬರುವ ಪದ್ಯಭಾಗದ ಶೈಲಿಯು ಸರಳವಾಗಿದ್ದು ಸರಿಯಾದ ಅರ್ಥವನ್ನು ನೀಡುತ್ತಿದ್ದರೆ ಅದನ್ನೇ ಬಳಸಲು ನಿರ್ಧರಿಸಿ. ಹಾಗೆ ಆಗದಿದ್ದರೆ ಇಲ್ಲಿರುವ ಕೆಲವು ವಿಧಾನಗಳನ್ನು ಭಾಷಾಂತರ ಮಾಡುವಾಗ ಬಳಸಬಹುದು.

  1. ನಿಮ್ಮ ಭಾಷೆಯಲ್ಲಿನ ಶೈಲಿಯನ್ನು ಉಪಯೋಗಿಸಿ ನೀವು ಪದ್ಯವನ್ನು ಭಾಷಾಂತರಿಸಬಹುದುವಾಗ.
  2. ನಿಮ್ಮ ಭಾಷೆಯಲ್ಲಿನ ಚಿತ್ತಾಕರ್ಷಕವಾದ ಕಾವ್ಯಮಯ ಭಾಷೆಯನ್ನು ಭಾಷಾಂತರ ಮಾಡುವಾಗ ಬಳಸಬಹುದು.
  3. ಪದ್ಯವನ್ನು ನಿಮ್ಮ ಭಾಷೆಯಲ್ಲಿ ಭಾಷಾಂತರಿಸುವಾಗ ಕೆಲವೊಮ್ಮೆ ಸರಳ ಮಾತುಗಳಲ್ಲೂ ಭಾಷಾಂತರಿಸಬೇಕು.

ನೀವು ಪದ್ಯದ ಶೈಲಿಯನ್ನು ಉಪಯೋಗಿಸಿದರೆ ನಿಮ್ಮ ಭಾಷಾಂತರ ಹೆಚ್ಚು ಸೊಗಸಾಗಿ ಮೂಡಿಬರುತ್ತದೆ.

ಸರಳ ಮಾತುಗಳನ್ನು ಬಳಸಿ ಭಾಷಾಂತರಿಸಿದರೆ ಹೆಚ್ಚು ಸಮರ್ಪಕವಾಗಿರುತ್ತದೆ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವುದಕ್ಕೆ ಉದಾಹರಣೆಗಳು.

ಯಾರು ದುಷ್ಟರ ಆಲೋಚನೆಯಂತೆ ನಡೆಯದೆ, ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ, ಧರ್ಮನಿಂದಕರೊಡನೆ ಕುಳಿತುಕೊಳ್ಳದೆ, ಯೆಹೋವನ ಧರ್ಮಶಾಶ್ತ್ರದಲ್ಲಿ ಆನಂದ ಪಡುವವನಾಗಿ, ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು (ದಾ.ಕೀ. 1:1,2 ULB)

ಕೆಳಗೆ ನಮೂದಿಸಿರುವ ಉದಾಹರಣೆಗಳು ಜನರು ದಾ.ಕೀ. 1:1,2. ಈ ವಾಕ್ಯಗಳನ್ನು ಹೀಗೆ ಭಾಷಾಂತರಿಸಬಹುದು.

  1. ಪದ್ಯವನ್ನು ನಿಮ್ಮ ಭಾಷೆಯ ಪದ್ಯದ ಶೈಲಿಯಲ್ಲಿ ಭಾಷಾಂತರಿಸಿ. (ಈ ಉದಾಹರಣೆಯಲ್ಲಿ ಬರುವ ಪದಗಳು ಸಮಾನ ಉಚ್ಛಾರಣೆಗಳು ಸಾಲುಗಳ ಕೊನೆಯ ಒಂದೇ ಧ್ವನಿಯ ಉಚ್ಛಾರಣೆ ನೀಡುತ್ತದೆ.)

" ಧರ್ಮಶಾಸ್ತ್ರದಲ್ಲಿ ಆನಂದ ಪಡುವವನು ಪಾಪ ಮಾಡುವುದರಲ್ಲಿ ಪ್ರೇರೇಪಿತನಾಗುವುದಿಲ್ಲ. ದೇವರನ್ನು ನಿಂದಿಸುವುದರೊಂದಿಗೆ ಧರ್ಮನಿಂದನೆಗೆ ತೊಡಗುವುದಿಲ್ಲ ದುಷ್ಟರ ಆಲೋಚನೆಯಂತೆ ದೇವದೂಷಣೆ ಮಾಡುವವನು ದೇವರಿಗೆ ಪ್ರಿಯನಲ್ಲ. ದೇವರು ಆತನ ನಿರಂತರ ಆನಂದವನ್ನು ನೀಡುವವನು . ಅವನು ದೇವರ ಆದೇಶವನ್ನು ಪಾಲಿಸುವವನು ಅವನು ಹಗಲಿರುಳು ಅದನ್ನೇ ಧ್ಯಾನಿಸುವವನು

  1. ನೀವು ಪದ್ಯವನ್ನು ಭಾಷಾಂತರಿಸುವಾಗ ನಿಮ್ಮದೇ ಆದ ಶೈಲಿಯಲ್ಲಿ ಅರ್ಥವಾಗುವಂತಹ ಮಾತುಗಳಲ್ಲಿ ಭಾಷಾಂತರಿಸಿ.
  • ಯಾರು ದುಷ್ಟರ ಆಲೋಚನೆಗಳನ್ನು ಕೇಳಿ ನಡೆಯದೆ ಅಥವಾ ಪಾಪಿಗಳೊಂದಿಗೆ ಮಾತನಾಡದೆ ಅಥವಾ ದೇವರನ್ನು ದೂಷಿಸುವವರೊಂದಿಗೆ ಸೇರದೇ ದೂರ ಇರುತ್ತಾನೋ ಅವನಿಗೆ ದೇವರ ಆಶೀರ್ವಾದ ದೊರೆಯುವುದು. ಅಂತಹವನು ಇದೆಲ್ಲವನ್ನು ಬಿಟ್ಟು ದೇವರ ನೀತಿನಿಯಮಗಳಂತೆ ಹಗಲಿರುಳು ಧ್ಯಾನಿಸುವನು.
  1. ನಿಮ್ಮ ಸರಳವಾದ ಮಾತುಗಳಿಂದ ಪದ್ಯವನ್ನು ಭಾಷಾಂತರಿಸಿ.
  • ಯಾರು ದುಷ್ಟಜನರ ಮಾತುಗಳನ್ನು ಆಲೋಚನೆಗಳನ್ನು ಕೇಳುವುದಿಲ್ಲವೋ ಅವರು ಸಂತೋಷದಿಂದ ಇರುತ್ತಾರೆ. ಅಂತಹವರು ನಿರಂತರವಾಗಿ ದುಷ್ಟಕಾರ್ಯಗಳನ್ನು ಮಾಡುವವರೊಂದಿಗೆ ಸಮಯ ಕಳೆಯುವುದಿಲ್ಲ ಅಥವಾ ದೇವರನ್ನು ಅಗೌರವ ತೋರಿಸುವರೊಂದಿಗೆ ಅವರು ಸೇರುವುದಿಲ್ಲ. ಅವರು ನಿತ್ಯ ನಿರಂತರ ಯೆಹೋವನ ಆಜ್ಞೆಗಳನ್ನು ನೀತಿನಿಯಮಗಳಿಗೆ ವಿಧೇಯರಾಗಿ ನಡೆಯಲು ಬಯಸುತ್ತಾರೆ.ಮತ್ತು ಅದರಲ್ಲೇ ತಮ್ಮ ಜೀವನವನ್ನು ಕಳೆಯಲು ಇಚ್ಛಿಸುತ್ತಾರೆ.