kn_ta/translate/figs-synonparallelism/01.md

14 KiB
Raw Permalink Blame History

ವಿವರಣೆ.

** ಒಂದೇ ಅರ್ಥದೊಂದಿಗಿನ ಸಾದೃಶ್ಯತೆ** ಎಂಬುದು ಪದ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಲ್ಲಿ ಸಂಕೀರ್ಣ ಉದ್ದೇಶಗಳನ್ನು ಎರಡು ಅಥವಾ ಅನೇಕ ವಿವಿಧ ರೀತಿಯಲ್ಲಿ ವ್ಯಕ್ತಪಡಿಸಲು ಬಳಸಲಾಗುತ್ತದೆ. ಎರಡು ಪದ ಅಥವಾ ಪದಗುಚ್ಛದಲ್ಲಿ ಬರುವ ಉದ್ದೇಶಗಳು ಒಂದೇ ಎಂದು ಒತ್ತಿ ಹೇಳಲು ಲೇಖಕರು ಅಥವಾ ಮಾತನಾಡತ್ತಿರುವ ವ್ಯಕ್ತಿ " ಸಾದೃಶ್ಯ "ಪದವನ್ನು ಬಳಸುತ್ತಾರೆ

ಇದನ್ನು “ಪರ್ಯಾಯ ಪದದ ಸಾದೃಶ್ಯತೆ” ಎಂದೂ ಕರೆಯಬಹುದು. ಗಮನಿಸಿ : ನಾವು ಈ " ಏಕಾರ್ಥ ಸಾದೃಶ್ಯ "ಪದಗಳನ್ನು / ಸಮಾನ ಅರ್ಥಕೊಡುವ ಉದ್ದುದ್ದ ಪದಗುಚ್ಛಗಳು ಅಥವಾ ವಾಕ್ಯಭಾಗದಲ್ಲಿ ಬಳಸಲಾಗುತ್ತದೆ. ನಾವು ದ್ವಿರುಕ್ತಿಗಳನ್ನು ಇಂತಹ ಪದಗಳಿಗೆ ಅಥವಾ ಚಿಕ್ಕ ಪದಗಳು ಒಂದೇ ಅರ್ಥಕೊಡುವಂತೆ ಮತ್ತು ಕೆಲವೊಮ್ಮೆ ಒಟ್ಟಿಗೆ ಉಪಯೋಗಿಸುತ್ತೇವೆ.

ಯೆಹೋವನು ಮನುಷ್ಯನು ನಡೆಯುವ ಮಾರ್ಗಗಳನ್ನು ನೋಡುತ್ತಲೇ ಇದ್ದಾನೆ ಮತ್ತು .ಆತನು ಅವನ ನಡತೆಯೆಲ್ಲವನ್ನು ಗಮನಿಸುತ್ತಲೇ ಇದ್ದಾನೆ (ಜ್ಞಾನೋಕ್ತಿಗಳು 5:21 ULB)

ಮೊದಲ ವಾಕ್ಯದಲ್ಲಿ ಗುರುತಿಸಿರುವ ಎರಡನೇ ವಾಕ್ಯದಲ್ಲಿ ಗುರುತಿಸಿರುವ ಪದಗಳು ಒಂದೇ ಅರ್ಥವನ್ನು ಕೊಡುತ್ತವೆ. ಈ ಎರಡು ವಾಕ್ಯಗಳಲ್ಲಿ ಮೂರು ಮುಖ್ಯ ಉದ್ದೇಶಗಳು ಕಂಡುಬರುತ್ತವೆ, "ನೋಡುತ್ತಲೇ " ಎಂಬ ಪದ "ಗಮನಿಸುತ್ತಲೇ,"ಎಂಬ ಪದದೊಂದಿಗೆ ಒಂದೇ ಅರ್ಥವನ್ನು ತಿಳಿಸುತ್ತದೆ. "ನಡೆಯುವ ಮಾರ್ಗಗಳು ಮತ್ತು " ನಡತೆಯನ್ನು " ಎಂಬ ಪದಗಳು ಮತ್ತು " ಮನುಷ್ಯನು ". " ಅವನ." ಎಂಬ ಪದಗಳು ಒಂದರೊಡನೊಂದು ಸಮಾನ ಸಂಪರ್ಕ ಕಲ್ಪಿಸುತ್ತದೆ. " ಏಕಾರ್ಥ ಸಾದೃಶ್ಯ " ಪದಗಳು ಪದ್ಯಗಳಲ್ಲಿ ವಿವಿಧ ರೀತಿಯ ಪರಿಣಾಮಗಳನ್ನು ತರುತ್ತದೆ.

  • ಒಂದೇ ಪದವನ್ನು ಏಕಾರ್ಥ ನೀಡುವ ಪದಗಳನ್ನು ಒಂದಕ್ಕಿಂತ ಹೆಚ್ಚುಸಲ ಬಳಸುವುದರಿಂದ ಮತ್ತು ವಿವಿಧ ರೀತಿಯಲ್ಲಿ ಬಳಸುವುದರಿಂದ ಇವು ಪ್ರಮುಖವಾದ ವಿಷಯ ಎಂದು ತಿಳಿದು ಬರುತ್ತದೆ.
  • ವಿವಿಧ ರೀತಿಯಲ್ಲಿ ಹೇಳುವುದರಿಂದ ಶ್ರೋತೃಗಳಿಗೆ, ಓದುಗರಿಗೆ ಈ ವಿಷಯದ ಅರ್ಥವನ್ನು, ಮಹತ್ವವನ್ನು ಚೆನ್ನಾಗಿ ತಿಳಿದುಕೊಳ್ಳಲು ಸಹಾಯಮಾಡುತ್ತದೆ.
  • ಸಾಮಾನ್ಯ ಅರ್ಥಕೊಡುವ ಬದಲು ವಿಶೇಷ ಅರ್ಥವುಳ್ಳ ವಾಕ್ಯಗಳಾಗಿ ಭಾಷೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಕಾರಣ ಇದೊಂದು ಭಾಷಾಂತರ ತೊಡಕು.

ಕೆಲವು ಭಾಷೆಯಲ್ಲಿ ಒಂದೇ ವಿಷಯವನ್ನು ಎರಡುಸಲ ಹೇಳುವುದನ್ನು ಬರೆಯುವುದನ್ನು ನಿರೀಕ್ಷಿಸುವುದಿಲ್ಲ, ಕೆಲವೊಮ್ಮೆ ವಿವಿಧರೀತಿಯಲ್ಲಿ ಹೇಳುವುದನ್ನು ನಿರೀಕ್ಷಿಸುವುದಿಲ್ಲ. ಏಕೆಂದರೆ ಅವರು ಈ ರೀತಿ ಏಕಾರ್ಥ ಸಾದೃಶ್ಯವಿರುವ ಎರಡು ಪದಗಳು, ಪದಗುಚ್ಛಗಳು, ವಾಕ್ಯಗಳು, ವಿಭಿನ್ನ ಅರ್ಥಕೊಡುತ್ತವೆ ಎಂದು ನಿರೀಕ್ಷಿಸುತ್ತಾರೆ. ಆದರೆ ಉದ್ದೇಶಗಳನ್ನು ಪುನರುಚ್ಛಾರ ಮಾಡುವುದು ಅವುಗಳ ಅರ್ಥವನ್ನು ಒತ್ತಿ ಹೇಳಲು ಬಳಸಲಾಗಿದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ.

ಸತ್ಯವೇದದಿಂದ ಉದಾಹರಣೆಗಳು.

ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವು, ನನ್ನ ಮಾರ್ಗಕ್ಕೆ ಬೆಳಕು ಆಗಿದೆ (ದಾ.ಕೀ. 119:105 ULB)

ಎರಡೂ ವಾಕ್ಯಗಳನ್ನು ರೂಪಕ ಅಲಂಕಾರದಲ್ಲಿ ಬಳಸಲಾಗಿದೆ. ಅಂದರೆ ದೇವರ ವಾಕ್ಯಗಳು ಜನರು ಹೇಗೆ ಜೀವನ ನಡೆಸಬೇಕು ಎಂಬುದನ್ನು ಬೋಧಿಸುತ್ತವೆ. ಇಲ್ಲಿ ಬಳಸಿರುವ ಪದಗಳು "ದೀಪ" ಮತ್ತು " ಬೆಳಕು "ಸಮಾನ ಅರ್ಥ ಕೊಡುವ ಪದಗಳು - " ಬೆಳಕನ್ನು" ಕುರಿತು ಹೇಳುತ್ತಿರುವ ಮಾತು, "ನನ್ನ ಪಾದಗಳಿಗೆ " ಮತ್ತು "ನನ್ನ ಮಾರ್ಗಕ್ಕೆ " ಎಂಬ ಪದಗಳು ಮನುಷ್ಯನ " ನಡತೆಯನ್ನು " ಕುರಿತು ಹೇಳಿರುವ ಮಾತುಗಳು.

" ಸರ್ವ ಜನಾಂಗಗಳೇ ಯೆಹೋವನನ್ನು ಕೀರ್ತಿಸಿರಿ, , ಸಮಸ್ತ ಪ್ರಜೆಗಳೇ ಆತನನ್ನು; ಕೊಂಡಾಡಿರಿ (ದಾ.ಕೀ. 117:1 ULB)

ಈ ಎರಡೂ ವಾಕ್ಯಗಳಲ್ಲಿ ಯೆಹೋವನನ್ನು ಎಲ್ಲೆಡೆಯೂ ಸ್ತುತಿಸಿರಿ ಎಂಬ ಒಂದೇ ಅರ್ಥ ನೀಡುತ್ತದೆ. ' ಕೀರ್ತಿಸಿರಿ ' ಮತ್ತು 'ಕೊಂಡಾಡಿರಿ' ಎಂಬ ಪದಗಳು ಒಂದೇ ಅರ್ಥವನ್ನು ನೀಡುತ್ತದೆ. ' ಯೆಹೋವ ' 'ಆತನನ್ನು ' ಎಂಬುದು ಒಂದೇ ಅರ್ಥನೀಡುತ್ತದೆ. " ಸರ್ವ ಜನಾಂಗಗಳೇ" ಮತ್ತು " ಸಮಸ್ತ ಪ್ರಜೆಗಳೇ" ಎಂಬುದು ಒಂದೇ ಅರ್ಥ ನೀಡುತ್ತದೆ.

ಯೆಹೋವನಿಗೆ ಆತನ ಪ್ರಜೆಯ ಮೇಲೆ ವ್ಯಾಜ್ಯವಿದೆ , ಮತ್ತು ಆತನು ಇಸ್ರಾಯೇಲಿನ ವಿರುದ್ಧ ನ್ಯಾಯಾಲಯದಲ್ಲಿ ವಿವಾದಿಸುತ್ತಾನೆ (ಮೀಕ 6:2 ULB)

ಈ ಎರಡೂ ವಾಕ್ಯಗಳಲ್ಲಿ ಯೆಹೋವನಿಗೆ ಆತನ ಜನರಾದ ಇಸ್ರಾಯೇಲಿನವರ ಬಗ್ಗೆ ಅಸಮಾಧಾನವಿದೆ ಎಂದು ತಿಳಿದು ಬರುತ್ತದೆ. ಇವು ಎರಡು ವಿಭಿನ್ನ ಅಸಮಾಧಾನ ಅಥವಾ ಎರಡು ಗುಂಪಿನ ಜನರಂತೆ ಕಾಣುತ್ತದೆ.

ಭಾಷಾಂತರ ಕೌಶಲ್ಯಗಳು.

ನಿಮ್ಮ ಭಾಷೆಯಲ್ಲಿನ ಸಾದೃಶ್ಯಪದಗಳು ಸತ್ಯವೇದದಲ್ಲಿ ಬಳಸಿರುವ ಪದಗಳಂತೆ ಸಮಾನ ಅರ್ಥಕೊಡುವುದಾದರೆ, ಒಂದೇ ಉದ್ದೇಶವನ್ನು ಹೇಳುವುದಾದರೆ ನಿಮ್ಮ ಭಾಷಾಂತರದಲ್ಲಿ ಇವುಗಳನ್ನು ಬಳಸಲು ಸೂಕ್ತವಾಗಿರುತ್ತದೆ. ಆದರೆ ನಿಮ್ಮ ಭಾಷೆಯಲ್ಲಿ ಇಂತಹ " ಏಕಾರ್ಥ ಸಾದೃಶ್ಯ " ಪದಗಳ ಬಳಕೆ ಇಲ್ಲದಿದ್ದರೆ ಕೆಳಗೆ ಕೊಟ್ಟಿರುವ ತಂತ್ರಗಳಲ್ಲಿ ಯಾವುದಾದರೂ ಒಂದನ್ನು ಬಳಸಿಕೊಳ್ಳಬಹುದು

  1. ಎರಡೂ ವಾಕ್ಯಗಳಲ್ಲಿರುವ ಉದ್ದೇಶಗಳನ್ನು ಒಂದುಗೂಡಿಸಿ ಉಪಯೊಗಿಸಿ.
  2. ನೀವು ಬಳಸಿರುವ ವಾಕ್ಯಭಾಗಗಳು ಒಟ್ಟಾಗಿ ಉಪಯೋಗಿಸಲ್ಪಟ್ಟು ಒಂದೇ ಅರ್ಥವನ್ನು ಖಚಿತಪಡಿಸಿದರೆ ನೀವು "ನಿಜವಾಗಿ ""ನಿಶ್ಚಿತವಾಗಿ " "ಖಚಿತವಾಗಿ " ಎಂಬ ಪದಗಳನ್ನು ಬಳಸಿ ವಾಕ್ಯಮಾಡಬಹುದು
  3. .ಈ ವಾಕ್ಯಭಾಗಗಳಲ್ಲಿ ಬಳಸಿರುವ ಉದ್ದೇಶಗಳು ಒಟ್ಟಾಗಿ ಒಂದು ಉದ್ದೇಶವನ್ನು ಕುರಿತು ದೃಢವಾಗಿ ಹೇಳಿದರೆ ನೀವು "ತುಂಬಾ" "ಎಲ್ಲಾ " " ಸಂಪೂರ್ಣವಾಗಿ " ಎಂಬ ಪದಗಳನ್ನು ಉಪಯೋಗಿಸಬಹುದು.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು

  1. ಎರಡೂ ವಾಕ್ಯಗಳಲ್ಲಿನ ಉದ್ದೇಶಗಳನ್ನು ಸೇರಿಸಿ ಒಂದೇ ವಾಕ್ಯದಲ್ಲಿ ಬಳಸಿ.
  • ದೆಲೀಲಳು ಸಂಸೋನನಿಗೆ ನೀನು ಇದುವರೆಗೂ ನನ್ನನ್ನು ವಂಚಿಸಿದ್ದೀ ಸುಳ್ಳಾಡಿದ್ದೀ . (ನ್ಯಾಯಸ್ಥಾಪಕರು 16:13, ULB) - ದೆಲಿಲಾಳು ಒಂದೇ ಅರ್ಥಕೊಡುವ ಎರಡು ಪದಗಳನ್ನು ತನಗೆ ಬೇಸರವಾಗಿದೆ ಎಂಬುದನ್ನು ಸೂಚಿಸಲು ಬಳಸಿದ್ದಾಳೆ.
  • ಇದುವರೆಗೂ ನೀನು ನಿನ್ನ ಸುಳ್ಳುಗಳಿಂದ ನನ್ನನ್ನು ವಂಚಿಸಿದ್ದೀ .
  • ಯೆಹೋವನು ಮನುಷ್ಯನು ಮಾಡುವ ಎಲ್ಲವನ್ನೂ ಗಮನಿಸುತ್ತಿದ್ದಾನೆ ಅವನ ಎಲ್ಲಾ ಮಾರ್ಗಗಳನ್ನು ನೋಡುತ್ತಿದ್ದಾನೆ. (ಜ್ಞಾನೋಕ್ತಿಗಳು 5:21 ULB) ಇಲ್ಲಿ ಬಳಸಿರುವ ಪದಗುಚ್ಛಗಳು" ಅವನ ಎಲ್ಲಾ ಮಾರ್ಗಗಳು ಎಂಬುದು " " ಅವನು ಮಾಡುವ ಕಾರ್ಯಗಳಿಗೆ " ರೂಪಕವಾಗಿ ಬಂದಿದೆ.
  • ಒಬ್ಬ ಮನುಷ್ಯನು ಮಾಡುವ ಎಲ್ಲಾ ಕಾರ್ಯಗಳ ಕಡೆಗೆ ಯೆಹೋವನು ತನ್ನ ಗಮನವನ್ನು ನೀಡುತ್ತಾನೆ
  • ಯೆಹೋವನಿಗೆ ಆತನ ಪ್ರಜೆಯ ಮೇಲೆ ವ್ಯಾಜ್ಯವಿದೆ , ಆತನು ಇಸ್ರಾಯೇಲಿನೊಂದಿಗೆ ವಿವಾದಿಸುತ್ತಾನೆ. (ಮೀಕ 6:2 ULB) ಇಲ್ಲಿನ ಸಾದೃಶ್ಯತೆ ಯೆಹೋವನಿಗೆ ಒಂದು ಗುಂಪಿನ ಜನರೊಂದಿಗೆ ಅಸಮಾಧಾನ ಇರುವುದನ್ನು ತೋರಿಸುತ್ತದೆ. ವಾಕ್ಯಗಳು ಸ್ಪಷ್ಟವಾಗದಿದ್ದರೆ ಈ ಪದಗುಚ್ಛಗಳನ್ನು ಒಟ್ಟಿಗೆ ಸೇರಿಸಬಹುದು
  • ಯೆಹೋವನು ಆತನ ಪ್ರಜೆಗಳೊಂದಿಗೆ , ಇಸ್ರಾಯೇಲಿನೊಂದಿಗೆ ವ್ಯಾಜ್ಯಮಾಡುತ್ತಾನೆ.
  1. ನೀವು ಬಳಸಿರುವ ವಾಕ್ಯಭಾಗಗಳು ಒಟ್ಟಾಗಿ ಉಪಯೋಗಿಸಲ್ಪಟ್ಟು ಒಂದೇ ಅರ್ಥವನ್ನು ಖಚಿತಪಡಿಸಿದರೆ ನೀವು "ನಿಜವಾಗಿ " ಅಥವಾ "ನಿಶ್ಚಿತವಾಗಿ " ಅಥವಾ "ಖಚಿತವಾಗಿ " ಎಂಬ ಪದಗಳನ್ನು ಬಳಸಿ ವಾಕ್ಯಮಾಡಬಹುದು
  • ಯೆಹೋವನು ಮನುಷ್ಯನು ಮಾಡುವ ಎಲ್ಲವನ್ನು ನೋಡುತ್ತಾನೆ ಮತ್ತು ಅವನು ನಡೆಯುವ ಎಲ್ಲಾ ಮಾರ್ಗಗಳನ್ನೂ ಗಮನಿಸುತ್ತಾನೆ. (ಜ್ಞಾನೋಕ್ತಿಗಳು s 5:21 ULB)
  • ಯೆಹೋವನು ಮನುಷ್ಯನು ಮಾಡುವ ಎಲ್ಲವನ್ನು ಖಂಡಿತವಾಗಿ ನೋಡುತ್ತಾನೆ .
  1. ಈ ವಾಕ್ಯಭಾಗಗಳಲ್ಲಿ ಬಳಸಿರುವ ಉದ್ದೇಶಗಳು ಒಟ್ಟಾಗಿ ಒಂದು ಉದ್ದೇಶವನ್ನು ಕುರಿತು ದೃಢವಾಗಿ ಹೇಳಿದರೆ ನೀವು "ತುಂಬಾ" "ಎಲ್ಲಾ" "ಸಂಪೂರ್ಣವಾಗಿ " ಎಂಬ ಪದಗಳನ್ನು ಉಪಯೋಗಿಸಬಹುದು.
  • .. ನೀನು ನನ್ನನ್ನು ವಂಚಿಸಿದ್ದಿ ಮತ್ತು ನನಗೆ ಸುಳ್ಳು ಹೇಳಿದ್ದೀ. (ನ್ಯಾಯಸ್ಥಾಪಕರು 16:13 ULB)
  • ನೀನು ಮಾಡಿದ ಎಲ್ಲವೂನನಗೆ ಸುಳ್ಳಿನಂತಿದೆ.
  • ಯೆಹೋವನು ಮನುಷ್ಯನು ಮಾಡುವ ಎಲ್ಲವನ್ನು ನೋಡುತ್ತಾನೆ ಮತ್ತು ಅವನು ಹೋಗುವ ಎಲ್ಲಾ ಮಾರ್ಗಗಳನ್ನೂ ಗಮನಿಸುತ್ತಾನೆ. (ಜ್ಞಾನೋಕ್ತಿಗಳು 5:21 ULB)
  • ಯೆಹೋವನು ಮನುಷ್ಯನು ಮಾಡುವ ಎಲ್ಲವನ್ನು ಸಂಪೂರ್ಣವಾಗಿ ನೋಡುತ್ತಾನೆ