5.8 KiB
5.8 KiB
ನಡೆ, ನಡೆಯುತ್ತಿರುವುದು
ಪದದ ಅರ್ಥವಿವರಣೆ:
“ನಡೆ” ಎನ್ನುವ ಪದವು ಅನೇಕ ಬಾರಿ “ಜೀವಿಸು” ಎನ್ನುವ ಅರ್ಥವನ್ನು ಕೊಡುವುದಕ್ಕೆ ಅಲಂಕಾರಿಕ ಭಾವನೆಯಲ್ಲಿ ಉಪಯೋಗಿಸಿರುತ್ತಾರೆ.
- “ಹನೋಕನು ದೇವರೊಂದಿಗೆ ನಡೆದನು” ಎನ್ನುವ ಮಾತಿಗೆ ಹನೋಕನು ದೇವರೊಂದಿಗೆ ತುಂಬಾ ಹತ್ತಿರ ಸಂಬಂಧದಲ್ಲಿ ಜೀವಿಸಿದ್ದನು ಎಂದರ್ಥವಾಗಿರುತ್ತದೆ.
- “ಆತ್ಮದಿಂದ ನಡೆ” ಎನ್ನುವ ಮಾತಿಗೆ ಪವಿತ್ರಾತ್ಮನ ಮಾರ್ಗದರ್ಶನದಲ್ಲಿ ಹೋಗು, ಇದರಿಂದ ನಾವು ದೇವರನ್ನು ಘನಪಡಿಸುವ ಮತ್ತು ದೇವರಿಗೆ ಮೆಚ್ಚಿಕೆಯಾಗುವ ಕೆಲಸಗಳನ್ನು ಮಾಡುತ್ತೇವೆ.
- ದೇವರ ಆಜ್ಞೆಗಳಲ್ಲಿ ಅಥವಾ ದೇವರ ಮಾರ್ಗಗಳಲ್ಲಿ “ನಡೆ” ಎಂದರೆ ಆತನ ಆಜ್ಞೆಗಳಿಗೆ “ವಿಧೇಯತೆ ತೋರಿಸುವುದರಲ್ಲಿ ಜೀವಿಸು” ಅಂದರೆ “ಆತನ ಆಜ್ಞೆಗಳಿಗೆ ವಿಧೇಯನಾಗು” ಅಥವಾ “ಆತನ ಚಿತ್ತವನ್ನು ನೆರವೇರಿಸು” ಎಂದರ್ಥವಾಗಿರುತ್ತದೆ.
- ನಾನು ನನ್ನ ಜನರ “ಮಧ್ಯೆದಲ್ಲಿ ನಡೆಯುತ್ತೇನೆ” ಎಂದು ದೇವರು ಹೇಳಿದಾಗ, ಈ ಮಾತಿಗೆ ಆತನು ಅವರ ಮಧ್ಯೆದಲ್ಲಿ ನಿವಾಸವಾಗಿರುತ್ತಾನೆ ಅಥವಾ ಅವರೊಂದಿಗೆ ತುಂಬಾ ಹತ್ತಿರವಾಗಿ ಸಹವಾಸ ಮಾಡುತ್ತಾನೆ ಎಂದರ್ಥವಾಗಿರುತ್ತದೆ.
- “ವಿರುದ್ಧವಾಗಿ ನಡೆ” ಎನ್ನುವ ಮಾತಿಗೆ ಯಾರಾದರೊಬ್ಬರಿಗೆ ಅಥವಾ ಯಾವುದಾದರೊಂದಕ್ಕೆ ವಿರುದ್ಧವಾದ ವಿಧಾನದಲ್ಲಿ ನಡೆದುಕೊಳ್ಳುವುದು ಅಥವಾ “ಜೀವಿಸುವುದು” ಎಂದರ್ಥವಾಗಿರುತ್ತದೆ.
- “ಅದರ ಹಿಂದೆ ನಡೆ” ಎನ್ನುವ ಮಾತಿಗೆ ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು ಹಿಂಬಾಲಿಸು ಅಥವಾ ಹುಡುಕು ಎಂದರ್ಥವಾಗಿರುತ್ತದೆ. ಬೇರೊಬ್ಬರು ನಡೆದುಕೊಳ್ಳುವ ಒಂದೇ ವಿಧಾನದಲ್ಲಿ ನಡೆದುಕೊಳ್ಳುವುದು ಎಂದು ಇದರ ಅರ್ಥವಾಗಿರುತ್ತದೆ.
ಅನುವಾದ ಸಲಹೆಗಳು:
- “ನಡೆ” ಎನ್ನುವ ಪದಕ್ಕೆ ಅಕ್ಷರಾರ್ಥವಾಗಿ ಅನುವಾದ ಮಾಡುವುದು ಉತ್ತಮವಾದ ವಿಷಯ. ಆದರೆ ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಸರಿಯಾದ ಅರ್ಥವನ್ನು ಕೊಡುವವರೆಗೂ ಈ ರೀತಿ ಅನುವಾದ ಮಾಡಬಹುದು.
- ಇಲ್ಲದಿದ್ದರೆ, “ನಡೆ” ಎನ್ನುವ ಪದಕ್ಕೆ ಅಲಂಕಾರಿಕ ಉಪಯೋಗಗಳಲ್ಲಿ “ಜೀವಿಸು” ಅಥವಾ “ನಡೆದುಕೋ” ಅಥವಾ “ನಡತೆ” ಎಂದೂ ಅನುವಾದ ಮಾಡಬಹುದು.
- “ಆತ್ಮದಿಂದ ನಡೆ” ಎನ್ನುವ ಮಾತನ್ನು “ಪವಿತ್ರಾತ್ಮನಿಗೆ ವಿಧೇಯತೆ ತೋರಿಸುವುದರಲ್ಲಿ ಜೀವಿಸು” ಅಥವಾ “ಪವಿತ್ರಾತ್ಮನನ್ನು ಮೆಚ್ಚಿಸುವ ವಿಧಾನದಲ್ಲಿ ನಡೆದುಕೋ” ಅಥವಾ “ಪವಿತ್ರಾತ್ಮನು ನಿನ್ನನ್ನು ನಡೆಸುವ ಪ್ರಕಾರ ದೇವರನ್ನು ಮೆಚ್ಚಿಸುವ ಕಾರ್ಯಗಳನ್ನು ಮಾಡು” ಎಂದೂ ಅನುವಾದ ಮಾಡಬಹುದು.
- “ದೇವರ ಆಜ್ಞೆಗಳಲ್ಲಿ ನಡೆ” ಎನ್ನುವ ಮಾತನ್ನು “ದೇವರ ಆಜ್ಞೆಗಳ ಪ್ರಕಾರ ಜೀವಿಸು” ಅಥವಾ “ದೇವರ ಆಜ್ಞೆಗಳಿಗೆ ವಿಧೇಯನಾಗು” ಎಂದೂ ಅನುವಾದ ಮಾಡಬಹುದು.
- “ದೇವರೊಂದಿಗೆ ನಡೆದಿದ್ದೇನೆ” ಎನ್ನುವ ಮಾತನ್ನು “ದೇವರನ್ನು ಘನಪಡಿಸುವುದರ ಮೂಲಕ ಮತ್ತು ಆತನಿಗೆ ವಿಧೇಯತೆ ತೋರಿಸುವುದರ ಮೂಲಕ ಇನ್ನೂ ಹತ್ತಿರ ಸಂಬಂಧದಲ್ಲಿ ಜೀವಿಸಿದೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಪವಿತ್ರಾತ್ಮ, ಘನಪಡಿಸು)
ಸತ್ಯವೇದದ ಅನುಬಂಧ ವಾಕ್ಯಗಳು:
ಪದ ಡೇಟಾ:
- Strong's: H1869, H1980, H1981, H3212, H4108, G1704, G4043, G4198, G4748