kn_tw/bible/other/walk.md

38 lines
5.8 KiB
Markdown

# ನಡೆ, ನಡೆಯುತ್ತಿರುವುದು
## ಪದದ ಅರ್ಥವಿವರಣೆ:
“ನಡೆ” ಎನ್ನುವ ಪದವು ಅನೇಕ ಬಾರಿ “ಜೀವಿಸು” ಎನ್ನುವ ಅರ್ಥವನ್ನು ಕೊಡುವುದಕ್ಕೆ ಅಲಂಕಾರಿಕ ಭಾವನೆಯಲ್ಲಿ ಉಪಯೋಗಿಸಿರುತ್ತಾರೆ.
* “ಹನೋಕನು ದೇವರೊಂದಿಗೆ ನಡೆದನು” ಎನ್ನುವ ಮಾತಿಗೆ ಹನೋಕನು ದೇವರೊಂದಿಗೆ ತುಂಬಾ ಹತ್ತಿರ ಸಂಬಂಧದಲ್ಲಿ ಜೀವಿಸಿದ್ದನು ಎಂದರ್ಥವಾಗಿರುತ್ತದೆ.
* “ಆತ್ಮದಿಂದ ನಡೆ” ಎನ್ನುವ ಮಾತಿಗೆ ಪವಿತ್ರಾತ್ಮನ ಮಾರ್ಗದರ್ಶನದಲ್ಲಿ ಹೋಗು, ಇದರಿಂದ ನಾವು ದೇವರನ್ನು ಘನಪಡಿಸುವ ಮತ್ತು ದೇವರಿಗೆ ಮೆಚ್ಚಿಕೆಯಾಗುವ ಕೆಲಸಗಳನ್ನು ಮಾಡುತ್ತೇವೆ.
* ದೇವರ ಆಜ್ಞೆಗಳಲ್ಲಿ ಅಥವಾ ದೇವರ ಮಾರ್ಗಗಳಲ್ಲಿ “ನಡೆ” ಎಂದರೆ ಆತನ ಆಜ್ಞೆಗಳಿಗೆ “ವಿಧೇಯತೆ ತೋರಿಸುವುದರಲ್ಲಿ ಜೀವಿಸು” ಅಂದರೆ “ಆತನ ಆಜ್ಞೆಗಳಿಗೆ ವಿಧೇಯನಾಗು” ಅಥವಾ “ಆತನ ಚಿತ್ತವನ್ನು ನೆರವೇರಿಸು” ಎಂದರ್ಥವಾಗಿರುತ್ತದೆ.
* ನಾನು ನನ್ನ ಜನರ “ಮಧ್ಯೆದಲ್ಲಿ ನಡೆಯುತ್ತೇನೆ” ಎಂದು ದೇವರು ಹೇಳಿದಾಗ, ಈ ಮಾತಿಗೆ ಆತನು ಅವರ ಮಧ್ಯೆದಲ್ಲಿ ನಿವಾಸವಾಗಿರುತ್ತಾನೆ ಅಥವಾ ಅವರೊಂದಿಗೆ ತುಂಬಾ ಹತ್ತಿರವಾಗಿ ಸಹವಾಸ ಮಾಡುತ್ತಾನೆ ಎಂದರ್ಥವಾಗಿರುತ್ತದೆ.
* “ವಿರುದ್ಧವಾಗಿ ನಡೆ” ಎನ್ನುವ ಮಾತಿಗೆ ಯಾರಾದರೊಬ್ಬರಿಗೆ ಅಥವಾ ಯಾವುದಾದರೊಂದಕ್ಕೆ ವಿರುದ್ಧವಾದ ವಿಧಾನದಲ್ಲಿ ನಡೆದುಕೊಳ್ಳುವುದು ಅಥವಾ “ಜೀವಿಸುವುದು” ಎಂದರ್ಥವಾಗಿರುತ್ತದೆ.
* “ಅದರ ಹಿಂದೆ ನಡೆ” ಎನ್ನುವ ಮಾತಿಗೆ ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು ಹಿಂಬಾಲಿಸು ಅಥವಾ ಹುಡುಕು ಎಂದರ್ಥವಾಗಿರುತ್ತದೆ. ಬೇರೊಬ್ಬರು ನಡೆದುಕೊಳ್ಳುವ ಒಂದೇ ವಿಧಾನದಲ್ಲಿ ನಡೆದುಕೊಳ್ಳುವುದು ಎಂದು ಇದರ ಅರ್ಥವಾಗಿರುತ್ತದೆ.
## ಅನುವಾದ ಸಲಹೆಗಳು:
* “ನಡೆ” ಎನ್ನುವ ಪದಕ್ಕೆ ಅಕ್ಷರಾರ್ಥವಾಗಿ ಅನುವಾದ ಮಾಡುವುದು ಉತ್ತಮವಾದ ವಿಷಯ. ಆದರೆ ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಸರಿಯಾದ ಅರ್ಥವನ್ನು ಕೊಡುವವರೆಗೂ ಈ ರೀತಿ ಅನುವಾದ ಮಾಡಬಹುದು.
* ಇಲ್ಲದಿದ್ದರೆ, “ನಡೆ” ಎನ್ನುವ ಪದಕ್ಕೆ ಅಲಂಕಾರಿಕ ಉಪಯೋಗಗಳಲ್ಲಿ “ಜೀವಿಸು” ಅಥವಾ “ನಡೆದುಕೋ” ಅಥವಾ “ನಡತೆ” ಎಂದೂ ಅನುವಾದ ಮಾಡಬಹುದು.
* “ಆತ್ಮದಿಂದ ನಡೆ” ಎನ್ನುವ ಮಾತನ್ನು “ಪವಿತ್ರಾತ್ಮನಿಗೆ ವಿಧೇಯತೆ ತೋರಿಸುವುದರಲ್ಲಿ ಜೀವಿಸು” ಅಥವಾ “ಪವಿತ್ರಾತ್ಮನನ್ನು ಮೆಚ್ಚಿಸುವ ವಿಧಾನದಲ್ಲಿ ನಡೆದುಕೋ” ಅಥವಾ “ಪವಿತ್ರಾತ್ಮನು ನಿನ್ನನ್ನು ನಡೆಸುವ ಪ್ರಕಾರ ದೇವರನ್ನು ಮೆಚ್ಚಿಸುವ ಕಾರ್ಯಗಳನ್ನು ಮಾಡು” ಎಂದೂ ಅನುವಾದ ಮಾಡಬಹುದು.
* “ದೇವರ ಆಜ್ಞೆಗಳಲ್ಲಿ ನಡೆ” ಎನ್ನುವ ಮಾತನ್ನು “ದೇವರ ಆಜ್ಞೆಗಳ ಪ್ರಕಾರ ಜೀವಿಸು” ಅಥವಾ “ದೇವರ ಆಜ್ಞೆಗಳಿಗೆ ವಿಧೇಯನಾಗು” ಎಂದೂ ಅನುವಾದ ಮಾಡಬಹುದು.
* “ದೇವರೊಂದಿಗೆ ನಡೆದಿದ್ದೇನೆ” ಎನ್ನುವ ಮಾತನ್ನು “ದೇವರನ್ನು ಘನಪಡಿಸುವುದರ ಮೂಲಕ ಮತ್ತು ಆತನಿಗೆ ವಿಧೇಯತೆ ತೋರಿಸುವುದರ ಮೂಲಕ ಇನ್ನೂ ಹತ್ತಿರ ಸಂಬಂಧದಲ್ಲಿ ಜೀವಿಸಿದೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಪವಿತ್ರಾತ್ಮ](../kt/holyspirit.md), [ಘನಪಡಿಸು](../kt/honor.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಯೋಹಾನ.01:07](rc://*/tn/help/1jn/01/07)
* [1 ಅರಸ.02:04](rc://*/tn/help/1ki/02/04)
* [ಕೊಲೊ.02:07](rc://*/tn/help/col/02/07)
* [ಗಲಾತ್ಯ.05:25](rc://*/tn/help/gal/05/25)
* [ಆದಿ.17:01](rc://*/tn/help/gen/17/01)
* [ಯೆಶಯಾ.02:05](rc://*/tn/help/isa/02/05)
* [ಯೆರೆ.13:10](rc://*/tn/help/jer/13/10)
* [ಮೀಕ.04:02](rc://*/tn/help/mic/04/02)
## ಪದ ಡೇಟಾ:
* Strong's: H1869, H1980, H1981, H3212, H4108, G1704, G4043, G4198, G4748