3.1 KiB
3.1 KiB
ಒಳ ಅಂಗಿ, ಒಳ ಅಂಗಿಗಳು
ಪದದ ಅರ್ಥವಿವರಣೆ:
ಸತ್ಯವೇದದಲ್ಲಿ “ಒಳ ಅಂಗಿ” ಎನ್ನುವ ಪದವು ಬಟ್ಟೆಗಳ ಕೆಳಗೆ ಚರ್ಮದ ಮೇಲೆ ಹಾಕುವ ಒಳ ಉಡುಪನ್ನು ಸೂಚಿಸುತ್ತದೆ.
- ಒಳ ಅಂಗಿಯು ಭುಜಗಳಿಂದ ಸೊಂಟದವರೆಗೂ ಅಥವಾ ಮೊಣಕಾಲುಗಳವರೆಗೂ ಇಳಿಯಹಾಕಿಕೊಂಡಿರುತ್ತಾರೆ ಮತ್ತು ಇದನ್ನು ಧರಿಸಿದನಂತರ ದಟ್ಟಿಯಿಂದ ಕಟ್ಟಿಕೊಳ್ಳುತ್ತಾರೆ. ಈ ಒಳ ಉಡುಪುಗಳನ್ನು ಶ್ರೀಮಂತರು ಧರಿಸಿಕೊಳ್ಳುತ್ತಾರೆ, ಇವುಗಳಿಗೆ ಕೆಲವೊಂದುಬಾರಿ ತೋಳುಗಳಿರುತ್ತವೆ ಮತ್ತು ಇದು ಕಣಕಾಲುಗಳವರೆಗಿರುವ ಉದ್ದವನ್ನು ಹೊಂದಿರುತ್ತದೆ.
- ಒಳ ಅಂಗಿಗಳನ್ನು ಚರ್ಮ, ಕೂದಲಿನ ಬಟ್ಟೆ, ಉಣ್ಣೆ ಅಥವಾ ನಾರಿನಿಂದ ತಯಾರಿಸುತ್ತಾರೆ, ಮತ್ತು ಇವುಗಳನ್ನು ಸ್ತ್ರೀ ಪುರುಷರು ಧರಿಸಿಕೊಳ್ಳುತ್ತಾರೆ.
- ಒಳ ಅಂಗಿಯು ಸಾಧಾರಣವಾಗಿ ನಿಲುವೆಂಗಿಯ ಕೆಳಗೆ ಧರಿಸಿಕೊಳ್ಳುತ್ತಾರೆ, ಉದಾಹರಣೆಗೆ ಟೋಗಾ ಅಥವಾ ಹೊರಗಿನ ಗೌನು ಬಿಸಿ ವಾತಾವರಣದಲ್ಲಿ ಹೊರ ಅಂಗಿಗಳನ್ನು ಹಾಕಿಕೊಳ್ಳದೇ ಒಳ ಅಂಗಿಯನ್ನು ಮಾತ್ರವೇ ಕೆಲವೊಂದುಬಾರಿ ಧರಿಸುತ್ತಾರೆ.
- ಈ ಪದವನ್ನು “ಉದ್ದವಾದ ಅಂಗಿ” ಅಥವಾ “ಉದ್ದವಾದ ಒಳ ಉಡುಪು” ಅಥವಾ “ಅಂಗಿಯಂತಿರುವ ಉಡುಪು” ಎಂದೂ ಅನುವಾದ ಮಾಡಬಹುದು. “ಒಳ ಅಂಗಿ” ಎನ್ನುವದಕ್ಕೆ ಹೇಳಿರುವ ಅರ್ಥದಲ್ಲಿಯೇ ಇದು ಎಂತಹ ಅಂಗಿ ಎಂದು ವಿವರಿಸುವುದಕ್ಕೆ ಒಂದು ಸೂಚನೆ ಕೂಡ ಬರೆಯಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ನಿಲುವಂಗಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2243, H3801, H6361, G5509