kn_tw/bible/other/tribute.md

2.8 KiB

ಕಪ್ಪ ಕಾಣಿಕೆ, ಕೊಡುಗೆ, ದಂಡ

ಪದದ ಅರ್ಥವಿವರಣೆ:

“ಕಪ್ಪ” ಎನ್ನುವ ಪದವು ಎರಡು ದೇಶಗಳ ನಡುವೆ ಒಳ್ಳೇಯ ಸಂಬಂಧಗಳನ್ನು ಮತ್ತು ಸಂರಕ್ಷಣೆಯನ್ನು ಹೊಂದಿರುವ ಉದ್ದೇಶಕ್ಕಾಗಿ ಒಬ್ಬ ಪಾಲಕನಿಂದ ಇನ್ನೊಬ್ಬ ಪಾಲಕನಿಗೆ ಕೊಡುವ ಬಹುಮಾನವನ್ನು ಸೂಚಿಸುತ್ತದೆ. ಕಪ್ಪ ಎನ್ನುವುದು ಹಣವನ್ನು ಪಾವತಿಸುವುದೂ ಆಗಿರಬಹುದು, ಸರ್ಕಾರ ಅಥವಾ ಪಾಲಕನು ಜನರಿಂದ ತೆರಿಗೆ ಅಥವಾ ಸುಂಕವನ್ನು ಪಡೆಯುವುದನ್ನು ಸೂಚಿಸುತ್ತದೆ.

  • ಸತ್ಯವೇದ ಕಾಲದಲ್ಲಿ ಪ್ರಯಾಣ ಮಾಡುವ ಅರಸರು ಅಥವಾ ಪಾಲಕರು ಕೆಲವೊಂದು ಬಾರಿ ಅವರು ಸಂರಕ್ಷಣೆಯಾಗಿರುವುದಕ್ಕೆ ಮತ್ತು ಸುರಕ್ಷಿತವಾಗಿರುವುದಕ್ಕೆ ನಿಶ್ಚಯತೆಯನ್ನು ಹೊಂದಿಕೊಳ್ಳಲು ಅವರು ಪ್ರಯಾಣ ಮಾಡುವ ಪ್ರಾಂತ್ಯಗಳ ಅರಸರಿಗೆ ಕಪ್ಪವನ್ನು ಕೊಡುತ್ತಿದ್ದರು.
  • ಅನೇಕ ಸಲ ಕಪ್ಪದಲ್ಲಿ ಹಣದ ಪಕ್ಕದಲ್ಲಿ ಆಹಾರ ಪದಾರ್ಥಗಳು, ಪರಿಮಳ ದ್ರವ್ಯಗಳು, ದುಬಾರಿ ಬಟ್ಟೆಗಳು, ಮತ್ತು ಬಂಗಾರದಂತಹ ಬೆಲೆಯುಳ್ಳ ಲೋಹಗಳು ಇಟ್ಟಿರುತ್ತಾರೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಕಪ್ಪ” ಎನ್ನುವ ಪದವನ್ನು “ಅಧಿಕಾರಿಕ ಬಹುಮಾನಗಳು” ಅಥವಾ “ವಿಶೇಷವಾದ ತೆರಿಗೆ” ಅಥವಾ “ಪಾವತಿ ಮಾಡಬೇಕಾದ ಹಣ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಬಂಗಾರ, ಅರಸ, ಪಾಲಕ, ತೆರಿಗೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ದತ್ತಾಂಶ:

  • Strong's: H1093, H4060, H4061, H4371, H4503, H4522, H4530, H4853, H6066, H7862, G1323, G2778, G5411