kn_tw/bible/other/tradition.md

3.9 KiB

ಸಂಪ್ರದಾಯ

ಪದದ ಅರ್ಥವಿವರಣೆ:

“ಸಂಪ್ರದಾಯ” ಎನ್ನುವ ಪದವು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅಭ್ಯಾಸ ಅಥವಾ ಆಚಾರವನ್ನು ಸೂಚಿಸುತ್ತದೆ ಮತ್ತು ಇದು ಮುಂದೆ ಬರುವಂತಹ ತಲೆಮಾರುಗಳ ಜನರಿಗೆ ಕೊಡಲ್ಪಡುತ್ತದೆ.

  • ಅನೇಕಬಾರಿ ಸತ್ಯವೇದದಲ್ಲಿ “ಸಂಪ್ರದಾಯಗಳು” ಎನ್ನುವ ಪದವು ದೇವರ ಆಜ್ಞೆಗಳನ್ನು ಬಿಟ್ಟು, ಜನರು ತಯಾರಿಸಿಕೊಂಡಿರುವ ಹವ್ಯಾಸಗಳನ್ನು ಮತ್ತು ಬೋಧನೆಗಳನ್ನು ಸೂಚಿಸುತ್ತದೆ. “ಮನುಷ್ಯರ ಸಂಪ್ರದಾಯಗಳು” ಅಥವಾ “ಮನುಷ್ಯ ಸಂಪ್ರದಾಯ” ಎನ್ನುವ ಮಾತು ಇದನ್ನು ಸ್ಪಷ್ಟ ಮಾಡುತ್ತದೆ.
  • “ಹಿರಿಯರ ಸಂಪ್ರದಾಯಗಳು” ಅಥವಾ “ನನ್ನ ಪಿತೃಗಳ ಸಂಪ್ರದಾಯಗಳು” ಎನ್ನುವ ಮಾತುಗಳು ದೇವರು ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಕೊಟ್ಟಿರುವ ಧರ್ಮಶಾಸ್ತ್ರಕ್ಕೆ ಯೆಹೂದ್ಯರ ನಾಯಕರು ಇನ್ನೂ ಹೆಚ್ಚಾಗಿ ಜೋಡಿಸಿದ ಅಭ್ಯಾಸಗಳು ಮತ್ತು ಯೆಹೂದ್ಯ ಆಚಾರಗಳನ್ನು ವಿಶೇಷವಾಗಿ ಸೂಚಿಸುತ್ತದೆ. ಜೋಡಿಸಲ್ಪಟ್ಟ ಈ ಆಚಾರಗಳು ದೇವರಿಂದ ಬರದಿದ್ದರೂ, ನೀತಿವಂತರಾಗುವುದಕ್ಕೆ ಅವುಗಳಿಗೂ ವಿಧೇಯರಾಗಿರಬೇಕೆಂದು ಜನರು ಆಲೋಚನೆ ಮಾಡಿದ್ದರು.
  • ದೇವರಿಂದ ಬಂದಿರುವ, ಪೌಲನು ಮತ್ತು ಇತರ ಅಪೊಸ್ತಲರು ಹೊಸ ವಿಶ್ವಾಸಿಗಳಿಗೆ ಬೋಧಿಸಿರುವ ಕ್ರೈಸ್ತ ಅಭ್ಯಾಸದ ಕುರಿತಾದ ಬೋಧನೆಗಳನ್ನು ಸೂಚಿಸುವುದಕ್ಕೆ ವಿಭಿನ್ನವಾದ ವಿಧಾನದಲ್ಲಿ “ಸಂಪ್ರದಾಯ” ಎನ್ನುವ ಪದವನ್ನು ಅಪೊಸ್ತಲನಾದ ಪೌಲನು ಉಪಯೋಗಿಸಿದ್ದಾನೆ.
  • ಆಧುನಿಕ ಕಾಲದಲ್ಲಿ, ಅನೇಕಮಂದಿ ಕ್ರೈಸ್ತರು ಅನುಸರಿಸುತ್ತಿರುವ ಸಂಪ್ರದಾಯಗಳು ಸತ್ಯವೇದದಲ್ಲಿಲ್ಲ, ಆದರೆ ಚಾರಿತ್ರಾತ್ಮಕವಾಗಿ ಆಚಾರಗಳ ಮತ್ತು ಅಭ್ಯಾಸಗಳ ಫಲವಾಗಿರುತ್ತವೆ. ಈ ಸಂಪ್ರದಾಯಗಳು ತಪ್ಪದೇ ಸತ್ಯವೇದದಲ್ಲಿ ದೇವರು ನಮಗೆ ಬೋಧಿಸಿರುವ ಬೆಳಕಿನಲ್ಲಿ ಪರಿಶೀಲನೆಯಲ್ಲಿಡಬೇಕಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ನಂಬು, ಕ್ರೈಸ್ತ, ಪೂರ್ವಜ, ತಲೆಮಾರು, ಯೆಹೂದ್ಯ, ಧರ್ಮಶಾಸ್ತ್ರ, ಮೋಶೆ)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: G38620