kn_tw/bible/other/snare.md

6.2 KiB

ಉರುಲು, ಉರುಲುಗಳು, ದೊರಕಿಸಿಕೋ, ದೊರಕಿಸಿಕೊಳ್ಳುವುದು, ದೊರಕಿಸಕೊಳ್ಳಲಾಗಿದೆ, ಬೋನಿಗೆ ಸಿಕ್ಕಿ ಬೀಳುವುದು, ಬೋನು, ಬೋನಲ್ಲಿ ಸಿಕ್ಕಿಸುವುದು, ಸಿಕ್ಕಿಸಲಾಗಿದೆ

ಪದದ ಅರ್ಥವಿವರಣೆ:

“ಉರುಲು” ಮತ್ತು “ಬೋನು” ಎನ್ನುವ ಪದಗಳು ಪ್ರಾಣಿಗಳು ತಪ್ಪಿಸಿಕೊಂಡು ಹೋಗದಂತೆ ಅವುಗಳನ್ನು ಕಟ್ಟಿ ಹಾಕುವುದಕ್ಕೆ ಮತ್ತು ಪ್ರಾಣಿಗಳನ್ನು ಹಿಡಿಯುವುದಕ್ಕೆ ಉಪಯೋಗಿಸುವ ಸಾಧನೆಗಳನ್ನು ಸೂಚಿಸುತ್ತದೆ. “ಬೋನು” ಅಥವಾ “ದೊರಕಿಸಿಕೊ” ಎನ್ನುವ ಪದಗಳು ಉರುಲಿನಿಂದ ಹಿಡಿದುಕೊಳ್ಳುವುದು ಎಂದರ್ಥ, ಮತ್ತು “ಸಿಕ್ಕಿಸಿಕೋ” ಅಥವಾ “ಬಲೆ” ಎನ್ನುವ ಪದಗಳು ಬಲೆಗೆ ಸಿಕ್ಕಿಸಿಕೊಳ್ಳುವ ಉಪಾಯದೊಂದಿಗೆ ಹಿಡಿದುಕೊಳ್ಳುವುದು ಎಂದರ್ಥವಾಗಿರುತ್ತದೆ. ಜನರನ್ನು ಹಿಡಿದುಕೊಳ್ಳುವುದಕ್ಕೆ ಮತ್ತು ಅವರಿಗೆ ಹಾನಿ ಮಾಡುವುದಕ್ಕೆ ಮರೆಯಾಗಿರುವ ಬಲೆಗಳಂತೆಯೇ ಪಾಪ ಮತ್ತು ಶೋಧನೆ ಹೇಗೆ ಇರುತ್ತವೆ ಎನ್ನುವುದರ ಕುರಿತಾಗಿ ಮಾತನಾಡುವುದಕ್ಕೆ ಸತ್ಯವೇದದಲ್ಲಿ ಈ ಪದಗಳನ್ನು ಉಪಯೋಗಿಸಲಾಗಿರುತ್ತದೆ.

  • “ಉರುಲು” ಎನ್ನುವುದು ಆಕಸ್ಮಿಕವಾಗಿ ಗಟ್ಟಿಯಾಗಿ ಹಿಂದಕ್ಕೆ ಎಳೆಯುವ ಹಗ್ಗ ಅಥವಾ ಒಂದು ತಂತಿಯ ರಂಧ್ರವಾಗಿರುತ್ತದೆ, ಇದರಲ್ಲಿ ಒಂದು ಪ್ರಾಣಿ ಬಿದ್ದಾಗ, ಅದರ ಕಾಲನ್ನು ಸಿಕ್ಕಿಸಿಕೊಳ್ಳುತ್ತದೆ.
  • “ಬೋನು” ಎನ್ನುವುದನ್ನು ಸಾಧಾರಣವಾಗಿ ಲೋಹದಿಂದಲೂ ಅಥವಾ ಕಟ್ಟಿಗೆಯಿಂದಲೂ ಮಾಡಿರುತ್ತಾರೆ, ಇದಕ್ಕೆ ಎರಡು ಭಾಗಗಳಿರುತ್ತವೆ, ಇದಕ್ಕೆ ಎರಡು ಬದಿಗೆ ಇರುವ ಭಾಗಗಳು ಆಕಸ್ಮಿಕವಾಗಿ, ಶಕ್ತಿಯುತವಾಗಿ ಒಂದಕ್ಕೊಂದು ಮುಚ್ಚಿಕೊಳ್ಳುತ್ತವೆ, ಇದರಲ್ಲಿ ಪ್ರಾಣಿ ಸಿಕ್ಕಿಸಿಕೊಂಡರೆ ಅದು ಹೊರಗಡೆ ಹೋಗುವುದಕ್ಕೆ ಸಾಧ್ಯವಿರುವುದಿಲ್ಲ. ಕೆಲವೊಂದುಬಾರಿ ಯಾವುದಾದರೊಂದನ್ನು ಹಿಡಿದುಕೊಳ್ಳುವುದಕ್ಕೆ ಅಥವಾ ಬೀಳುವಂತೆ ಮಾಡುವುದಕ್ಕೆ ಈ ಬೋನು ಎನ್ನುವದನ್ನು ನೆಲವನ್ನು ತುಂಬಾ ಆಳವಾಗಿ ಅಗೆದು ತಯಾರಿಸುತ್ತಾರೆ.
  • ಸಹಜವಾಗಿ ಉರುಲುಯಾಗಲಿ ಅಥವಾ ಬೋನಾಗಲಿ ಮರೆಯಾಗಿಡುತ್ತಾರೆ, ಇದರಿಂದ ಅವರು ಮಾಡುವ ಬೇಟೆಯು ತುಂಬಾ ವಿಸ್ಮಯವಾಗಿ ನಡೆಯುತ್ತದೆ.
  • “ಬೋನನ್ನು ಸಿದ್ಧಗೊಳಿಸು” ಎನ್ನುವ ಮಾತಿಗೆ ಯಾವುದಾದರೊಂದನ್ನು ಹಿಡಿದುಕೊಳ್ಳುವುದಕ್ಕೆ ಬೋನನ್ನು ಸಿದ್ಧಗೊಳಿಸಿರಿ.
  • “ಬೋನಿನಲ್ಲಿ ಬೀಳುವುದು” ಎನ್ನುವ ಮಾತು ಪ್ರಾಣಿಯನ್ನು ಹಿಡಿದುಕೊಳ್ಳುವ ಕ್ರಮದಲ್ಲಿ ನೆಲವನ್ನು ಅಗೆದು ಗುಂಡಿಯಾಗಿಟ್ಟಿರುವದರಲ್ಲಿ ಅಥವಾ ಆಳವಾದ ರಂಧ್ರ ಅಲ್ಲಿ ಬೀಳುವುದನ್ನು ಸೂಚಿಸುತ್ತದೆ.
  • ಒಂದು ಪ್ರಾಣಿಯು ಯಾವರೀತಿ ಉರುಲಿನಲ್ಲಿ ಬಿದ್ದು, ತಪ್ಪಿಸುಕೊಳ್ಳುವುದಕ್ಕೆ ಆಗುವುದಿಲ್ಲವೋ ಹಾಗೆಯೇ ಅಲಂಕಾರಿಕ ಅರ್ಥದಲ್ಲಿ “ಪಾಪದಿಂದ ಉರುಲಿನಲ್ಲಿ ಬಿದ್ದಿದ್ದಾನೆ” ಎನ್ನುವ ಮಾತಿನಲ್ಲಿರುವಂತೆಯೇ ಒಬ್ಬ ಮನುಷ್ಯನು ಪಾಪವನ್ನು ಮಾಡುವುದಕ್ಕೆ ಆರಂಭಿಸಿದಾಗ, ಅದನ್ನು ನಿಲ್ಲಿಸುವುದಕ್ಕಾಗುವುದಿಲ್ಲ.
  • ಬೋನಿಗೆ ಸಿಕ್ಕಿ ಬೀಳುವುದರ ಮೂಲಕ ಪ್ರಾಣಿಗೆ ಎಷ್ಟು ಅಪಾಯಕರವಾಗಿರುತ್ತದೋ ಅದೇ ರೀತಿ ಒಬ್ಬ ವ್ಯಕ್ತಿ ಪಾಪದಿಂದ ಸಿಕ್ಕಿಬಿದ್ದರೆ ಆ ಪಾಪದಿಂದಲೇ ಹಾನಿಯನ್ನು ಅನುಭವಿಸುತ್ತಾನೆ, ಮತ್ತು ಅದರಿಂದ ಅವನು ಬಿಡುಗಡೆ ಹೊಂದಬೇಕಾದ ಅವಶ್ಯಕತೆ ಇರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಬಿಡುಗಡೆಗೊಳಿಸು, ಬೇಟೆ, ಸೈತಾನ್, ಶೋಧಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2256, H3353, H3369, H3920, H3921, H4170, H4204, H4434, H4685, H4686, H4889, H5367, H5914, H6315, H6341, H6351, H6354, H6679, H6983, H7639, H7845, H8610, G64, G1029, G2339, G2340, G3802, G3803, G3985, G4625