2.5 KiB
2.5 KiB
ರಾಜದಂಡ, ರಾಜದಂಡಗಳು
ಪದದ ಅರ್ಥವಿವರಣೆ:
“ರಾಜದಂಡ” ಎನ್ನುವ ಪದವು ಅರಸನಂತಿರವ ಪಾಲಕರಿಂದ ಹಿಡಿಯಲ್ಪಟ್ಟಿರುವ ಆಭರಣದ ಕೋಲು ಅಥವಾ ಗದೆಯನ್ನು ಸೂಚಿಸುತ್ತದೆ.
- ರಾಜದಂಡಗಳು ಪ್ರಾಥಮಿಕವಾಗಿ ಕೆತ್ತಲ್ಪಟ್ಟಿರುವ ಅಲಂಕಾರಗಳ ಮರದ ಕೊಂಬುಗಳಾಗಿರುತ್ತಿದ್ದವು. ಸ್ವಲ್ಪ ಕಾಲವಾದನಂತರ ರಾಜದಂಡಗಳನ್ನು ಬಂಗಾರದಂತಹ ಬೆಲೆಯುಳ್ಳ ಲೋಹಗಳಿಂದ ಮಾಡುವುದಕ್ಕೆ ಆರಂಭಿಸಿದರು.
- ರಾಜದಂಡವು ದೊರೆತನಕ್ಕೆ ಮತ್ತು ಅಧಿಕಾರಕ್ಕೆ ಗುರುತಾಗಿರುತ್ತದೆ, ಅರಸನಿಗೆ ಕೊಡುವ ಘನತೆಗೆ ಮತ್ತು ಹಿರಿಮೆಗೆ ಕೂಡ ಗುರುತಾಗಿರುತ್ತದೆ.
- ಹಳೇ ಒಡಂಬಡಿಕೆಯಲ್ಲಿ ದೇವರನ್ನು ನೀತಿಯ ದಂಡವನ್ನಾಗಿ ವಿವರಿಸಲ್ಪಟ್ಟಿದ್ದರು, ಯಾಕಂದರೆ ದೇವರು ಅರಸನಾಗಿ ತನ್ನ ಜನರನ್ನು ಆಳುವನು.
- ಎಲ್ಲಾ ದೇಶಗಳನ್ನು ಆಳುವುದಕ್ಕೆ ಇಸ್ರಾಯೇಲಿನಿಂದ ರಾಜದಂಡಕ್ಕೆ ಗುರುತಾಗಿ ಮೆಸ್ಸಿಯಾನನ್ನು ಸೂಚಿಸುವ ಹಳೇ ಒಡಂಬಡಿಕೆಯ ಪ್ರವಾದನೆಯುಂಟು.
- ಇದನ್ನು “ಪಾಲಿಸುವ ಕೋಲು” ಅಥವಾ “ಅರಸನ ಕೋಲು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಕ್ರಿಸ್ತ, ಅರಸ, ನೀತಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2710, H4294, H7626, H8275, G4464