kn_tw/bible/other/rebel.md

5.9 KiB

ದಂಗೆ,ತಿರುಗಿ ಬೀಳು, ದಂಗೆ ಏಳು, ತಿರುಗಿ ಬೀಳುವವರು

ಪದದ ಅರ್ಥವಿವರಣೆ:

“ದಂಗೆ” ಎನ್ನುವ ಪದಕ್ಕೆ ಒಬ್ಬರ ಅಧಿಕಾರಕ್ಕೆ ಒಳಗಾಗದಂತೆ ತಿರಸ್ಕಾರ ಮಾಡುವುದು ಎಂದರ್ಥ. “ದಂಗೆ ಏಳು” ಒಬ್ಬ ವ್ಯಕ್ತಿ ಅನೇಕ ಬಾರಿ ಅವಿಧೇಯತೆಯನ್ನು ತೋರಿಸಿ, ಅನೇಕ ಕೆಟ್ಟ ಕಾರ್ಯಗಳನ್ನು ಮಾಡುತ್ತಾ ಇರುವನು. ಈ ರೀತಿಯ ವ್ಯಕ್ತಿಯನ್ನು “ತಿರುಗಿ ಬೀಳುವವನು” ಎಂದು ಕರೆಯುತ್ತಾರೆ.

  • ಒಬ್ಬ ವ್ಯಕ್ತಿಗೆ ತನ್ನ ಅಧಿಕಾರಿಗಳು ಇದನ್ನು ಮಾಡಬೇಡ ಎಂದು ಹೇಳಿದಾಗ ಆ ವ್ಯಕ್ತಿ ತಿರುಗಿಬೀಳುವನು ಅಥವಾ ಮೀರುವನು.
  • ಅಧಿಕಾರಿಗಳು ಮಾಡಲು ಹೇಳಿದ ಕಾರ್ಯಗಳನ್ನು ಮಾಡದೇ ತಿರಸ್ಕಾರ ಮಾಡುವುದರ ಮೂಲಕ ಕೂಡ ಆ ವ್ಯಕ್ತಿಯು ತಿರುಗಿ ಬೀಳುವ ಅವಕಾಶವಿದೆ.
  • ಕೆಲವೊಂದು ಬಾರಿ ಜನರು ತಮ್ಮ ಸರ್ಕಾರಕ್ಕೆ ಅಥವಾ ತಮ್ಮನ್ನು ಆಳುವ ನಾಯಕನಿಗೆ ವಿರುದ್ಧ ತಿರುಗಿಬೀಳುವರು.
  • “ದಂಗೆ” ಎನ್ನುವ ಪದವನ್ನು “ಅವಿಧೇಯತೆ ತೋರಿಸು” ಅಥವಾ “ಪ್ರತಿಭಟಿಸು” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಬಹುದು.
  • “ದಂಗೆ ಏಳು” ಎನ್ನುವ ಪದವನ್ನು “ನಿರಂತರವಾಗಿ ಅವಿಧೇಯತೆ ತೋರಿಸು” ಅಥವಾ “ವಿಧೇಯತೆ ತೋರಿಸದೆ ತಿರಸ್ಕಾರ ಮಾಡು” ಎಂದೂ ಅನುವಾದ ಮಾಡಬಹುದು.
  • "ತಿರುಗಿ ಬೀಳುವವನು” ಎನ್ನುವ ಪದಕ್ಕೆ “ವಿಧೇಯತೆ ತೋರಿಸುವುದಕ್ಕೆ ತಿರಸ್ಕಾರ ಮಾಡುವುದು” ಅಥವಾ “ಅವಿಧೇಯತೆ” ಅಥವಾ “ನಿಯಮವನ್ನು ಉಲ್ಲಂಘನೆ ಮಾಡುವುದು” ಎಂದರ್ಥ.
  • “ತಿರುಗಿ ಬೀಳುವವನು” ಅಥವಾ “ತಿರುಗಿಬೀಳುವವನು” ಎನ್ನುವ ಮಾತು ನಿಯಮಗಳನ್ನು ಉಲ್ಲಂಘನೆ ಮಾಡುವುದರ ಮೂಲಕ, ನಾಯಕರನ್ನು ಮತ್ತು ಇತರರನ್ನು ದಾಳಿ ಮಾಡುವುದರ ಮೂಲಕ ಆಳುತ್ತಿರುವ ಅಧಿಕಾರಿಗಳ ವಿರುದ್ಧ ಬಹಿರಂಗವಾಗಿ ತಿರುಗಿಬೀಳುವ ಜನರ ಗುಂಪಿನ ಸಂಸ್ಥೆಯನ್ನೂ ಸೂಚಿಸುತ್ತದೆ. ಅನೇಕಬಾರಿ ತಿರುಗಿಬೀಳುವುದರಲ್ಲಿ ಅನೇಕರನ್ನು ಸೇರಿಸಿಕೊಳ್ಳುವುದಕ್ಕೆ ಅವರು ಪ್ರಯತ್ನಪಡುತ್ತಿರುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಪಾಲಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 14:14 ಇಸ್ರಾಯೇಲ್ಯರು ಸುಮಾರು ನಲವತ್ತು ವರ್ಷಗಳ ಕಾಲ ಅರಣ್ಯದಲ್ಲಿ ಸಂಚಾರ ಮಾಡಿದನಂತರ, ದೇವರಿಗೆ ವಿರುದ್ಧವಾಗಿ __ ಮೀರಿದ __ ಪ್ರತಿಯೊಬ್ಬರೂ ಸತ್ತುಹೋದರು.
  • 18:07 ಇಸ್ರಾಯೇಲ್ ದೇಶದ ಹತ್ತು ಕುಲಗಳು ರೆಹೋಬ್ಬಾಮನಿಗೆ ವಿರುದ್ಧವಾಗಿ ತಿರುಗಿಬಿದ್ದರು.
  • 18:09 ಯಾರೋಬ್ಬಾಮನು ದೇವರಿಗೆ ವಿರುದ್ಧವಾಗಿ __ ತಿರುಗಿಬಿದ್ದನು __ ಮತ್ತು ಜನರೆಲ್ಲರು ಪಾಪ ಮಾಡುವುದಕ್ಕೆ ಕಾರಣನಾದನು.
  • 18:13 ಯೆಹೂದ್ಯರಲ್ಲಿ ಅನೇಕ ಜನರು ದೇವರಿಗೆ ವಿರುದ್ದವಾಗಿ __ ಮೀರಿದರು __ ಮತ್ತು ಇತರ ದೇವತೆಗಳನ್ನು ಆರಾಧಿಸಿದರು.
  • 20:07 ಆದರೆ ಕೆಲವು ವರ್ಷಗಳಾದನಂತರ, ಯೆಹೂದ್ಯ ಅರಸನು ಬಾಬೆಲೋನಿಯಗೆ ವಿರುದ್ಧವಾಗಿ __ ಮೀರಿದನು __ .
  • 45:03 “ಹಠಮಾರಿಗಳೇ, ಮನಶುದ್ಧಿಯೂ, ಕರ್ಣಶುದ್ಧಿಯೂ ಇಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವೂ ಯಾವಾಗಲೂ ಪವಿತ್ರಾತ್ಮನಿಗೆ __ ಎದುರಾಗಿ __ ನಡೆಯುವವರಾಗಿದ್ದೀರಿ. ಎಂದು ಅವನು (ಸ್ತೆಫೆನ) ಹೇಳಿದನು.

ಪದ ಡೇಟಾ:

  • Strong's: H4775, H4776, H4777, H4779, H4780, H4784, H4805, H5327, H5627, H5637, H6586, H6588, H7846, G3893, G4955