kn_tw/bible/other/reap.md

3.1 KiB

ಕೊಯ್ಯು, ಕೊಯ್ಯುತ್ತದೆ, ಕೊಯ್ದಿದೆ, ಕೊಯ್ಯುವವನು, ಕೊಯ್ಯುವವರು, ಕೊಯ್ಯುತ್ತಿರುವುದು

ಪದದ ಅರ್ಥವಿವರಣೆ:

“ಕೊಯ್ಯು” ಎನ್ನುವ ಪದಕ್ಕೆ ಧಾನ್ಯಗಳೆನ್ನುವ ಬೆಳೆಗಳನ್ನು ಕೊಯ್ಯುವುದು ಎಂದರ್ಥ. “ಕೊಯ್ಯುವವನು” ಎಂದರೆ ಬೆಳೆಯನ್ನು ಕೊಯ್ಯುವ ಅಥವಾ ಸಂಗ್ರಹಿಸುವ ವ್ಯಕ್ತಿ ಎಂದರ್ಥ.

  • ಸಾಧಾರಣವಾಗಿ ಕೊಯ್ಯುವವರು ಕೈಗಳ ಮೂಲಕ ಬೆಳೆಗಳನ್ನು ಸಂಗ್ರಹಿಸುತ್ತಾರೆ, ಸಸಿಗಳನ್ನು ಮೇಲಕ್ಕೆ ಕೀಳುವದರ ಮೂಲಕ ಅಥವಾ ಕತ್ತರಿಸುವ ಚೂಪಾದ ಉಪಕರಣದಿಂದ ಅವುಗಳನ್ನು ಕತ್ತರಿಸುವುದರ ಮೂಲಕ ಬೆಲೆಯನ್ನು ಸಂಗ್ರಹಿಸುತ್ತಾರೆ.
  • ಬೆಳೆಯನ್ನು ಕೊಯ್ಯುವ ಆಲೋಚನೆ ಎಂದರೆ ಅನೇಕಬಾರಿ ಯೇಸುವಿನ ಕುರಿತಾದ ಸುವಾರ್ತೆಯನ್ನು ಜನರಿಗೆ ಹೇಳುವುದಕ್ಕೆ ಮತ್ತು ದೇವರ ಕುಟುಂಬದೊಳಗೆ ಅವರನ್ನು ಕರೆದುಕೊಂಡು ಬರುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಡುತ್ತಿತ್ತು.
  • ಒಬ್ಬ ವ್ಯಕ್ತಿಯ ಕ್ರಿಯೆಗಳಿಂದ ಬರುವ ಪರಿಣಾಮಗಳನ್ನು ಸೂಚಿಸುವುದಕ್ಕೆ ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸುತ್ತಾರೆ, ಉದಾಹರಣೆ “ಮನುಷ್ಯನು ಬಿತ್ತುವುದನ್ನು ಅವನು ಕೊಯ್ಯುವನು” ಎಂದು ಮಾತಿನಂತೆ ಇರುತ್ತದೆ. (ನೋಡಿರಿ: ರೂಪಕಾಲಂಕಾರ)
  • “ಕೊಯ್ಯು” ಮತ್ತು “ಕೊಯ್ಯುವವನು” ಎನ್ನುವ ಪದಗಳನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಕೊಯ್ಲು” ಮತ್ತು “ಕೊಯ್ಲುಗಾರ” ಎನ್ನುವ ಪದಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಶುಭ ವಾರ್ತೆ, ಕೊಯ್ಲು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H4672, H7114, H7938, G270, G2325, G2327