kn_tw/bible/other/prostitute.md

3.8 KiB

ಸೂಳೆ, ಸೂಳೆತನ ಮಾಡಿದೆ, ಸೂಳೆಯಾಗಿಸು, ವೇಶ್ಯೆ, ಹಾದರಗಿತ್ತಿ

ಪದದ ಅರ್ಥವಿವರಣೆ:

“ಸೂಳೆ” ಮತ್ತು “ವೇಶ್ಯೆ” ಎನ್ನುವ ಪದಗಳೆರಡು ಭಕ್ತಿಪರವಾದ ಹಕ್ಕುಗಳಿಗೋಸ್ಕರ ಅಥವಾ ಹಣಕ್ಕಾಗಿ ಲೈಂಗಿಕ ಕ್ರಿಯೆಗಳನ್ನು ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ. ಸೂಳೆಯರು ಅಥವಾ ವೇಶ್ಯರು ಎನ್ನುವವರು ಸಾಧಾರಣವಾಗಿ ಸ್ತ್ರೀಯರಾಗಿರುತ್ತಾರೆ, ಆದರೆ ಕೆಲವುಮಂದಿ ಪುರುಷರೂ ಇರುತ್ತಾರೆ.

  • ಸತ್ಯವೇದದಲ್ಲಿ “ಸೂಳೆ” ಎನ್ನುವ ಪದವು ಕೆಲವೊಂದುಬಾರಿ ಕಣಿಯನ್ನು ಅಭ್ಯಾಸ ಮಾಡುವ ಅಥವಾ ಸುಳ್ಳು ದೇವರುಗಳನ್ನು ಆರಾಧಿಸುವ ವ್ಯಕ್ತಿಯನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
  • “ವೇಶ್ಯಯಾಗಿ ನಡೆದುಕೋ” ಎನ್ನುವ ಮಾತಿಗೆ ಅನೈತಿಕವಾದ ಲೈಂಗಿಕತೆಯಿಂದ ವೇಶ್ಯಯಂತೆ ನಡೆದುಕೋ ಎಂದರ್ಥವಾಗಿರುತ್ತದೆ. ಈ ಮಾತನ್ನು ವಿಗ್ರಹಗಳನ್ನು ಆರಾಧನೆ ಮಾಡುವ ವ್ಯಕ್ತಿಯನ್ನು ಸೂಚಿಸುವುದಕ್ಕೆ ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ.
  • ಯಾವುದಾದರೊಂದಕ್ಕೆ “ಸೂಳೆ ಸ್ವತಃವಾಗಿ” ಹೋಗುವುದು ಎನ್ನುವ ಮಾತಿಗೆ ಲೈಂಗಿಕವಾಗಿ ಅನೈತಿಕತೆ ಎಂದರ್ಥ ಅಥವಾ ಅಲಂಕಾರಿಕವಾಗಿ ಸೂಚಿಸಿದಾಗ, ಸುಳ್ಳು ದೇವರುಗಳನ್ನು ಆರಾಧನೆ ಮಾಡುವುದರ ಮೂಲಕ ದೇವರಿಗೆ ಅಪನಂಬಿಗಸ್ತರಾಗಿರುವುದು ಎಂದರ್ಥ.
  • ಪುರಾತನ ಕಾಲಗಳಲ್ಲಿ ಕೆಲವೊಂದು ಅನ್ಯ ದೇವಾಲಯಗಳಲ್ಲಿ ತಮ್ಮ ಪೂಜೆಗಳಲ್ಲಿರುವಂತೆ ಪುರುಷ ಮತ್ತು ಸ್ತ್ರೀ ಸೂಳೆಯರನ್ನು ಉಪಯೋಗಿಸುತ್ತಿದ್ದರು.
  • ಈ ಪದವನ್ನು ಸೂಳೆಯನ್ನು ಸೂಚಿಸುವುದಕ್ಕೆ ಅನುವಾದ ಭಾಷೆಯಲ್ಲಿ ಉಪಯೋಗಿಸುವ ಬೇರೊಂದು ಪದದೊಂದಿಗೆ ಅಥವಾ ಮಾತಿನೊಂದಿಗೆ ಅನುವಾದ ಮಾಡಬಹುದು. ಕೆಲವೊಂದು ಭಾಷೆಗಳಲ್ಲಿ ಈ ಪದಕ್ಕೆ ನಯನುಡಿಯ ಪದವನ್ನು ಉಪಯೋಗಿಸಲ್ಪಟ್ಟಿರುತ್ತಾರೆ. (ನೋಡಿರಿ: ಸಮ್ಯೋಕ್ತಿ)

(ಈ ಪದಗಳನ್ನು ಸಹ ನೋಡಿರಿ : ವ್ಯಭಿಚಾರ, ಸುಳ್ಳು ದೇವರು, ಲೈಂಗಿಕ ಅನೈತಿಕತೆ, ಸುಳ್ಳು ದೇವರು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2154, H2181, H2183, H2185, H6945, H6948, H8457, G4204