3.1 KiB
3.1 KiB
ಆಲೀವ್ (ಎಣ್ಣೆ ಮರದ ಹಣ್ಣು), ಆಲೀವ್.ಗಳು (ಎಣ್ಣೆ ಮರದ ಹಣ್ಣುಗಳು)
ಪದದ ಅರ್ಥವಿವರಣೆ:
ಆಲೀವ್ (ಎಣ್ಣೆ ಮರದ ಹಣ್ಣು) ಎನ್ನುವುದು ಚಿಕ್ಕದಾಗಿದ್ದು ಅಂಡಾಕಾರದ ಆಕಾರದಲ್ಲಿರುವ ಆಲೀವ್ ಮರದ ಹಣ್ಣಾಗಿರುತ್ತದೆ, ಇದು ಹೆಚ್ಚಾಗಿ ಮೆಡಿಟರೇನಿಯನ್ ಸಮುದ್ರದ ಸುತ್ತಮುತ್ತ ಪ್ರಾಂತ್ಯಗಳಲ್ಲಿ ಬೆಳೆಯುತ್ತದೆ.
- ಆಲೀವ್ ಮರಗಳು (ಎಣ್ಣೆ ಮರಗಳು) ಯಾವಾಗಲೂ ಹಚ್ಚ ಹಸುರಾಗಿದ್ದು ತೆಳುವಾದ ಬಿಳಿಯ ಹೂಗಳನ್ನು ಹೊಂದಿರುವ ಒಂದು ವಿಧವಾದ ಚಿಕ್ಕ ಪೊದೆಯ ಗಿಡವಾಗಿರುತ್ತದೆ. ಅವು ಬಿಸಿ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ ಮತ್ತು ನೀರು ಕಡಿಮೆಯಾಗಿದ್ದರೂ ಚೆನ್ನಾಗಿ ಬದುಕುತ್ತವೆ.
- ಆಲೀವ್ ಮರದ ಹಣ್ಣು ಪ್ರಾರಂಭದಲ್ಲಿ ಹಚ್ಚು ಹಸುರಾಗಿರುತ್ತದೆ ಮತ್ತು ಅವುಗಳು ಹಣ್ಣುಗಳಾಗುತ್ತಿರುವಾಗ ಕಪ್ಪಾಗಿ ಮಾರ್ಪಾಟು ಹೊಂದುತ್ತವೆ. ಆಲೀವ್ ಹಣ್ಣುಗಳು ಆಹಾರಕ್ಕೆ ಪ್ರಯೋಜನವಾಗಿರುತ್ತವೆ ಮತ್ತು ಅವುಗಳಿಂದ ತೆಗೆಯುವ ಎಣ್ಣೆಯು ಪ್ರಯೋಜನಕರವಾಗಿರುತ್ತವೆ.
- ಆಲೀವ್ ಎಣ್ಣೆಯನ್ನು ಬುಡ್ಡಿಗಳಲ್ಲಿ ಹಾಕಿಕೊಂಡು ಅಡಿಗೆಗೆ ಬಳಸುತ್ತಾರೆ ಮತ್ತು ಧಾರ್ಮಿಕ ಸಂಬಂಧವಾದ ಸಮಾರಂಭಗಳಿಗೆ ಉಪಯೋಗಿಸುತ್ತಾರೆ.
- ಸತ್ಯವೇದದಲ್ಲಿ ಆಲೀವ್ ಮರಗಳು ಮತ್ತು ಕೊಂಬೆಗಳು ಕೆಲವೊಂದುಬಾರಿ ಜನರನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : ದೀಪ, ಸಮುದ್ರ, ಎಣ್ಣೆ ಮರಗಳ ಬೆಟ್ಟ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2132, H3323, H8081, G65, G1636, G1637, G2565