2.9 KiB
2.9 KiB
ದೀಪ, ದೀಪಗಳು
ಪದದ ಅರ್ಥವಿವರಣೆ:
“ದೀಪ” ಎನ್ನುವ ಪದವು ಸಾಧಾರಣವಾಗಿ ಬೆಳಕನ್ನು ಕೊಡುವ ಯಾವುದಾದರೊಂದನ್ನು ಸೂಚಿಸುತ್ತದೆ. ಸತ್ಯವೇದ ಕಾಲಗಳಲ್ಲಿ ಉಪಯೋಗಿಸಿದ ದೀಪಗಳು ಸಹಜವಾಗಿ ಎಣ್ಣೆಯ ದೀಪಗಳಾಗಿದ್ದವು.
ಸತ್ಯವೇದ ಕಾಲಗಳಲ್ಲಿ ಬಳಸಿದ ದೀಪದ ಪ್ರಕಾರವು ಇಂಧನ ಮೂಲವನ್ನು ಹೊಂದಿರುವ ಸಣ್ಣ ಪಾತ್ರೆಯಾಗಿದೆ, ಸಾಮಾನ್ಯವಾಗಿ ಎಣ್ಣೆಯು ಉರಿಯುವಾಗ ಬೆಳಕನ್ನು ನೀಡುತ್ತದೆ.
- ಸಾಧಾರಣವಾದ ಎಣ್ಣೆಯ ದೀಪಗಳು ಸಹಜವಾಗಿ ಮಣ್ಣಿನ ಬಟ್ಟಲುಗಳಾಗಿರುತ್ತವೆ ಮತ್ತು ಅದರಲ್ಲಿ ಆಲಿವ್ ಎಣ್ಣೆಯನ್ನು ಹಾಕಿರುತ್ತಾರೆ, ಬೆಳಕು ಕೊಡಲು ಉರಿಯುವುದಕ್ಕೆ ಆ ಎಣ್ಣೆಯಲ್ಲಿ ಬತ್ತಿಯನ್ನು ಇಟ್ಟಿರುತ್ತಾರೆ.
- ಕೆಲವೊಂದು ದೀಪಗಳಿಗೆ, ಬಟ್ಟಲು ಅಥವಾ ಜಾರ್ ಎನ್ನುವುದು ಅಂಡಾಕಾರದಲ್ಲಿರುತ್ತದೆ, ಬತ್ತಿಯನ್ನು ಹಿಡಿದಿರಲು ಒಂದು ಕಡೆಗೆ ಹತ್ತಿರವಾಗಿರುತ್ತದೆ.
- ಎಣ್ಣೆಯ ದೀಪವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗುವರು ಅಥವಾ ಒಂದು ಸ್ತಂಭದ ಮೇಲೆ ಇಟ್ಟಿರುವರು, ಇದರಿಂದ ಅದರ ಬೆಳಕು ಕೋಣೆ ಅಥವಾ ಮನೆಯನ್ನು ತುಂಬುತ್ತದೆ.
- ವಾಕ್ಯದಲ್ಲಿ ಬೆಳಕಿಗೆ ಮತ್ತು ಜೀವನಕ್ಕೆ ಗುರುತುಗಳಾಗಿ ಅನೇಕವಾದ ಅಲಂಕಾರಿಕ ವಿಧಾನಗಳಲ್ಲಿ ದೀಪಗಳು ಉಪಯೋಗಿಸಲ್ಪಟ್ಟಿವೆ.
(ಈ ಪದಗಳನ್ನು ಸಹ ನೋಡಿರಿ : ದೀಪಸ್ತಂಭ, ಜೀವನ, ಬೆಳಕು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3940, H3974, H4501, H5215, H5216, G2985, G3088